ಬೆಂಗಳೂರು:ಅಧ್ಯಯನ ಪ್ರವಾಸದಲ್ಲಿದ್ದ ಕೊಡಗು ವಿಶ್ವವಿದ್ಯಾಲಯದ ಪತ್ರಿಕೋದ್ಯಮದ ವಿದ್ಯಾರ್ಥಿಗಳು ಹಾಗೂ ವಿಶ್ವವಿದ್ಯಾಲಯದ ವಿವಿಧ ವಿಭಾಗದ ವಿದ್ಯಾರ್ಥಿಗಳು ವಿಧಾನಸೌಧಕ್ಕೆ ಇಂದು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ತು, ವಿಧಾನಸಭೆಗೆ ಭೇಟಿ ನೀಡಿ ರಾಜ್ಯದ ಶಕ್ತಿ ಸೌಧದಲ್ಲಿ ಅಧಿವೇಶನ ನಡೆಯುವ ಪರಿಯನ್ನು ತಿಳಿದುಕೊಂಡರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರ ಕಚೇರಿಗೆ ಭೇಟಿ ನೀಡಿದ ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಶ್ರೀ ಕೆ ವಿ ಪ್ರಭಾಕರವರು ರಾಜಕೀಯ ವರದಿಗಾರಿಕೆಯ ಕುರಿತು ತಿಳಿಸಿ, ಪ್ರಸ್ತುತ ಪತ್ರಿಕೋದ್ಯಮದ ಹಲವಾರು ಆಗು ಹೋಗುಗಳನ್ನು ಚರ್ಚಿಸಿದರು.

LEAVE A REPLY

Please enter your comment!
Please enter your name here