ವಿಜಯಪುರ : ಭಾರತ ಯಾವತ್ತು ಯಾರ ಮೇಲೂ ಯುದ್ಧ ಬಯಸುವ ದೇಶವಲ್ಲ. ಇತಿಹಾಸ ನೋಡಿದರೆ ಭಾರತ ಯಾವತ್ತೂ ಯಾರ ಮೇಲು ತಾನಾಗೆ ಯುದ್ಧಕ್ಕೆ ಮುಂದಾಗಿಲ್ಲ. ಆದರೆ ಯಾರೇ ಯುದ್ಧ ಮಾಡಲು ಬಂದರು ದೇಶದ ಜನರು ಅತ್ಯಂತ ಸಮರ್ಥಕತೆಯಿಂದ ದೇಶದ ರಕ್ಷಿಸುವ ಕೆಲಸ ಮಾಡಿದ್ದಾರೆ. ಇದಕ್ಕೆ ಕಾರ್ಗಿಲ್ ಯುದ್ಧವೇ ನಿದರ್ಶನ ಎಂದು ಬಿ.ಎಸ್. ಎಫ್ ಮಾಜಿ ಸೈನಿಕ, ಹವಾಲ್ದಾರ್ ದೇವೇಂದ್ರ ಜಾದವ್ ಹೇಳಿದರು.
ನಗರದ ವಿದ್ಯಾ ವರ್ಧಕ ಸಂಘದ ಬನ್ಸಿಲಾಲ್ ವಿಠ್ಠಲದಾಸ ದರಬಾರ ಪದವಿ ಮಹಾವಿದ್ಯಾಲಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿಜಯಪುರ ವತಿಯಿಂದ ಇಂದು ಕಾರ್ಗಿಲ್ ವಿಜಯೋತ್ಸವ ದಿನದ ಅಂಗವಾಗಿ “ಕಾರ್ಗಿಲ್ ವಿಜಯದಿನ” ರಜತ ಮಹೋತ್ಸವ ಕಾರ್ಯಕ್ರಮವನ್ನು ಜ್ಯೋತಿ ಬೆಳೆಗಿಸುವುದರ ಮೂಲಕ ಚಾಲನೆ ನೀಡಲಾಯಿತು.
ಕಾರ್ಗಿಲ್ ಪ್ರದೇಶವನ್ನು ಮರಳಿ ಭಾರತದ ವಶಕ್ಕೆ ಪಡೆದುಕೊಳ್ಳಬೇಕಾದರೆ,
ಸುಮಾರು 500ಕ್ಕೂ ಹೆಚ್ಚು ಯೋಧರು ವೀರ ಮರಣವನ್ನುಪ್ಪಬೇಕಾಯಿತು. ಸಾವಿಗೆ ಎದೆಗುಂದದೆ ತಾಯಿ ಭಾರತಾಂಬೆ ರಕ್ಷಣೆಗೆ ನಿಂತ ಧೈರ್ಯವನ್ನು ಇಂದು ವಿಶ್ವದ ಅನೇಕ ರಾಷ್ಟ್ರಗಳು ಕೊಂಡಾಡುತ್ತಿವೆ ಎಂದರು.
ಇನ್ನೋರ್ವ ಅತಿಥಿಗಳಾದ ಭಾರತೀಯ ಸೈನ್ಯ, ಮಾಜಿ ಸೈನಿಕ ಹವಾಲ್ದಾರ್ ಅಮೋಘಸಿದ್ಧ ಬಾಗೇವಾಡಿ ಅವರು ಮಾತನಾಡಿ, ಭಾರತದ ಮುಕುಟ ಪ್ರಾಯವಾದ ಕಾರ್ಗಿಲ್ ಪ್ರದೇಶವನ್ನು ನಮ್ಮ ಶತ್ರು ರಾಷ್ಟ್ರ ಆಕ್ರಮಿಸಬೇಕೆಂದು ಕಳೆದ ಎರಡು ದಶಕಗಳ ಹಿಂದೆ ನಡೆಸಿದ ಕುತಂತ್ರವನ್ನು ನಮ್ಮ ವೀರ ಯೋಧರು ವಿಫಲಗೊಳಿಸುವಲ್ಲಿ ತಮ್ಮ ಪ್ರಾಣವನ್ನೇ ಬಲಿದಾನಗೈದಿದ್ದಾರೆ ಎಂದರು.
ಮುಖ್ಯವಕ್ತಾರರಾದ ಮಂಜುನಾಥ ಜುನಗೊಂಡ ಅವರು ಮಾತನಾಡಿ ಜನರು ದೇಶದ ಗಡಿಯ ಬಗ್ಗೆ ಆತಂಕಪಡಿವ ಅಗತ್ಯವೇ ಇಲ್ಲ. ದೇಶದ ಒಳಗೆ ಸರಿ ಇದ್ದರೆ ಗಡಿಯೂ ಭದ್ರವಾಗಿರುತ್ತದೆ. ಗಡಿಯನ್ನು ನಿಭಾಯಿಸಲು ನಮ್ಮ ಸೇನೆ ಸಮರ್ಥವಾಗಿದೆ. ಜಾತಿ, ಮತ ಹಾಗೂ ಧರ್ಮಗಳ ವಿಚಾರದಲ್ಲಿ ಕಚ್ಚಾಡದೇ, ಎಲ್ಲರೂ ದೇಶಕ್ಕೆ, ರಾಷ್ಟ್ರಧ್ವಜಕ್ಕೆ ಹಾಗೂ ಕಾನೂನಿಗೆ ಗೌರವಕೊಟ್ಟು ಬದುಕಿದರೆ ಭಾರತವನ್ನು ಮಣಿಸಲು ಯಾರಿಗೂ ಸಾಧ್ಯವಿಲ್ಲ’ ಎಂದರು.
ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿ ಸ್ಥಾನ ಅಲಂಕರಿಸಿದ ಅಭಾವಿಪ ಕರ್ನಾಟಕ ರಾಜ್ಯ ಉತ್ತರ ಪ್ರಾಂತ ಕಾರ್ಯದರ್ಶಿಗಳಾದ ಸಚೀನ ಕೊಳಗೇರಿ ಮಾತನಾಡಿ, ದೇಶಕ್ಕಾಗಿ ತಮ್ಮ ಪ್ರಾಣವನ್ನು ಬಲಿದಾನ ಮಾಡುವ ದೇಶದ ವೀರ ಯೋಧರನ್ನು ಪ್ರತಿಯೊಬ್ಬರು ಗೌರವದಿಂದ ಕಾಣಬೇಕು ಮತ್ತು ಭಾರತದ ಹೆಮ್ಮೆಯ ಪುತ್ರರಾದ ಸೈನಿಕರನ್ನು ಗೌರವಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ನಂತರ ಭಾರತ ಮಾತೆಯ ಮಡಿಲಿಗೆ ಸೇವೆ ಸಲ್ಲಿಸಿದ ಯೋಧರಿಗೆ ಸನ್ಮಾನಿಸಲಾಯಿತು.
ಪ್ರಾಚಾರ್ಯ ಜಿ ಎಚ್ ಮಣ್ಣೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ಸದಸ್ಯ ವಿಕಾಸ ದರಬಾರ ಅಧ್ಯಕ್ಷತೆ ಸ್ಥಾನ ವಹಿಸಿದ್ದರು. ಕಾರ್ಯಕ್ರಮವನ್ನು ಕಲಾ ವಿಭಾಗದ ವಿದ್ಯಾರ್ಥಿ ಪ್ರವೀಣ್ ಬಿರಾದಾರ್ (ಅಖಿಲ ಭಾರತೀಯ ಪರಿಷತ್ ರಾಜ್ಯ ಕಾರ್ಯಕರ್ಣಿ) ನಿರೂಪಿಸಿದರು. ಉಪನ್ಯಾಸಕಿ, ಸ್ವರ್ಣಮಾ ಗುಡೂರ್ ವಂದಿಸಿದರು. ಉಪನ್ಯಾಸಕ ಸುಭಾಷ್ ಪಾಟೀಲ್ ಸ್ವಾಗತಿಸಿದರು. ಸಂಸ್ಕೃತಿಕ ಕಾರ್ಯದರ್ಶಿ ಎಂ ಎಚ್ ಕೋಟ್ಯಾಳ,
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಎಲ್ಲ ಭೋದಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.