ಹಾಸನ ಜು 11( ಕೃಷಿ ವಾರ್ತೆ)
ದೇಶದಲ್ಲಿ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ದೊರೆತರೆ ಮಾತ್ರ ಸಮಗ್ರ ಅಭಿವೃದ್ಧಿ ಹಾಗೂ ಆರ್ಥಿಕತ ಸುಸ್ಥಿರತೆ ಸಾಧ್ಯವಾಗ ಬಲ್ಲದು ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ
ಅಭಿಪ್ರಾಯ ಪಟ್ಟಿದ್ದಾರೆ.
ಕಾರೆ ಕೆರೆ ಕೃಷಿ ಮಹಾ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು
ಕೃಷಿಗೆ ನೀಡಿರುವ ಆದ್ಯತೆ ಕಡಿಮೆಯಾಗಿತ್ತು.ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರೆಡೂ ಸಮಾನ ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದರು.
ಕೃಷಿ ಶಿಕ್ಷಣವನ್ನು ಸರ್ಕಾರ ಹೆಚ್ಚಾಗಿ ಖಾಸಗೀಕರಣ ಮಾಡಿಲ್ಲ.ಎಲ್ಲರೂ ನುರಿತ ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ. ಶಿಕ್ಷಣದ ಬಗ್ಗೆ ಗಮನ ಕೇಂದ್ರೀಕರಿಸಿ ನಿಗದಿತ ಗುರಿ ಸಾಧಿಸಿ ಸಮಾಜಕ್ಕೆ ಕೊಡುಗೆ ನೀಡಿ ಎಂದು ಕಿವಿ ಮಾತು ಹೇಳಿದರು.
ಕೇವಲ ಉದ್ಯೋಗಕ್ಕಾಗಿ ಕೃಷಿ ಕಾಲೇಜಿನಲ್ಲಿ ಕಲಿಯದೆ ಇತರರಿಗೆ ಕೆಲಸ ನೀಡುವಂತೆ ಬೆಳೆಯಬೇಕು ಎಂದು ಚಲುವರಾಯಸ್ವಾಮಿ ಹೇಳಿದರು.
ನೀವು ಪಡೆಯುವ ಶಿಕ್ಷಣ ,ಮಾಡುವ ಸಂಶೋಧನೆ ಕೃಷಿಕರಿಗೆ ಸುಲಭವಾಗಿ ಸಿಗುವಂತಾಗಲಿ ಎಂದರು
ಕಾರೆಕೆರೆ ಕಾಲೇಜಿಗೆ ಹಾಸ್ಟೆಲ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು
ಕೃಷಿ ಮಹಾವಿದ್ಯಾಲಯದ ಡಿನ್ ಮುನಿಸ್ವಾಮಿ ಗೌಡ,ಬೆಂಗಳೂರು ಕೃಷಿ ವಿ.ವಿ ವಿಶ್ರಾಂತ ಕುಲಸಚಿವರಾದ ಡಾ ಎ.ಬಿ ಪಾಟೀಲ್ ಉಪಸ್ಥಿತರಿದ್ದರು..