ಕಾಡುಗೊಲ್ಲ ಸಮುದಾಯದ ಮೂಡನಂಬಿಕೆ ಕಂಡು ತಕ್ಷಣ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರಿಗೆ ಹಾಗೂ ಆ ಕುಟುಂಬಗಳ ಮನವೊಲಿಸಿ ಮೂಢನಂಬಿಕೆಗಳ ಬಗ್ಗೆ ಅರಿವು ಮೂಡಿಸಿದ ಡಾ.ನಾಗಲಕ್ಷ್ಮಿಯವರು. ಬಿಸಾಡಿಹಳ್ಳಿ ಕಾಡುಗೊಲ್ಲರ ಹಟ್ಟಿಯನ್ನು ದತ್ತು ಪಡೆದು, ಮೂಢನಂಬಿಕೆಗೆ ಮಾರುಹೋಗಿದ್ದ ಕಾಡುಗೊಲ್ಲರಿಗೆ ತಿಳಿ ಹೇಳಲಾಯಿತು.
ಚಳಿ-ಗಾಳಿ ಮಳೆಯನ್ನದೇ ಬಾಣಂತಿ ಮಗುವನ್ನೇ ಹೊರಗೆ ಇಟ್ಟಿದ್ದ ಮೂರು ಜನ ಬಾಣಂತಿಯರು ಹಾಗೂ ಮಕ್ಕಳನ್ನ ಅವರವರ ಮನೆಗಳಿಗೆ ಸೇರಿಸಲಾಯಿತು.

. ಇದಕ್ಕೆ ಪ್ರತಿಯಾಗಿ ಅವರು ನನ್ನ ಹೆಸರನ್ನೇ ಮಗುವಿಗೆ ನಾಮಕರಣ ಮಾಡಿ ಸಿಹಿ ಹಂಚಿ ಸಂಭ್ರಮಿಸಿದ ಅವರ ಪ್ರೀತಿಗೆ ಧನ್ಯವಾದಗಳು ಎಂದು ನಾಗಲಕ್ಷ್ಮಿಯವರು ತಿಳಿಸಿದ್ದಾರೆ.
ಇದೇ ವೇಳೆ ಮಾತನಾಡಿ, ಯಾವುದೇ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು, ಗ್ರಾಮಸ್ಥರು ಮೂಢನಂಬಿಕೆಯಿಂದ ಹೊರಬರಬೇಕು ಹೆಣ್ಣು ಮಕ್ಕಳು ಮನೆಯಲ್ಲಿ ಈ ಮೂಢನಂಬಿಕೆಯನ್ನು ಆಚರಿಸಬಾರದು ಎಂದು ತಿಳಿಸಿದರು.

LEAVE A REPLY

Please enter your comment!
Please enter your name here