ವಿಜಯಪುರ:ತಾಳಿಕೋಟಿ: ದೇಶದಲ್ಲಿ ಒಟ್ಟು 500 ತಾಲೂಕುಗಳನ್ನು ಅತಿ ಹಿಂದುಳಿದ ತಾಲೂಕುಗಳೆಂದು ಗುರುತಿಸಲಾಗಿದ್ದು ಅದರಲ್ಲಿ 14 ತಾಲೂಕುಗಳು ಕರ್ನಾಟಕ ರಾಜ್ಯದಲ್ಲಿವೆ ಇದರಲ್ಲಿ ತಾಳಿಕೋಟಿ ತಾಲೂಕು ಕೂಡಾ ಒಂದಾಗಿದೆ. ಈ ತಾಲೂಕನ್ನು ಮುಂದಿನ ಮೂರು ತಿಂಗಳ ಒಳಗಾಗಿ ಆರು ಸೂಚ್ಯಂಕ ಕಾರ್ಯಕ್ರಮದಡಿ ಅಭಿವೃದ್ಧಿಗೊಳಿಸುವ ಗುರಿ ಹೊಂದಲಾಗಿದೆ ಇದಕ್ಕೆ ಇಲಾಖೆಯ ಅಧಿಕಾರಿಗಳೊಂದಿಗೆ ಸಾರ್ವಜನಿಕರ ಸಹಕಾರವು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು. ಪಟ್ಟಣದ ಶ್ರೀ ಸಂಗಮೇಶ್ವರ ಸಭಾಭವನದಲ್ಲಿ ಶುಕ್ರವಾರ ಜಿಲ್ಲಾ ಆಡಳಿತ.ಜಿಪಂ ವಿಜಯಪುರ. ಮತ್ತು ತಾಲೂಕಾಡಳಿತ ತಾಪಂ ತಾಳಿಕೋಟಿ ಇವರ ಸಹಯೋಗದಲ್ಲಿ ಮಹತ್ವಾಕಾಂಕ್ಷಿ ತಾಲೂಕು ಕಾರ್ಯಕ್ರಮದಡಿ ಹಮ್ಮಿಕೊಂಡ ಸಂಪೂರ್ಣತಾ ಅಭಿಯಾನ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಂದು ಈ ಅಭಿಯಾನಕ್ಕೆ ಚಾಲನೆ ಕೊಡಲಾಗಿದೆ ಮೂರು ತಿಂಗಳ ಒಳಗಾಗಿ ಆರು ಸೂಚ್ಚಾಂಕಗಳಾದ ಆರೋಗ್ಯಕ್ಕೆ ಸಂಬಂಧಿಸಿದ ಮೂರು ಹಾಗೂ ಶಿಕ್ಷಣ ಕೃಷಿ ಮತ್ತು ಸಾಮಾಜಿಕ ಅಭಿವೃದ್ಧಿ ಹೀಗೆ ಒಟ್ಟು 6 ಸೂಚಕಗಳ ಮೇಲೆ ಗುರಿ ಇರಿಸಿ ಶೇ 100 ರಷ್ಟು ಅಭಿವೃದ್ಧಿಯನ್ನು ಸಾಧಿಸಲು ಪ್ರಯತ್ನಿಸಲಾಗುವುದು ಎಂದರು. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ರಿಷಿ ಆನಂದ ಮಾತನಾಡಿ ದೇಶಾದ್ಯಂತ ಮಹತ್ವಕಾಂಕ್ಷೆಯ ಜಿಲ್ಲೆಗಳಲ್ಲಿ ಆರು ಪ್ರಮುಖ ಸೂಚಕಗಳು ಮತ್ತು ಮಹತ್ವಕಾಂಕ್ಷಿಯ ತಾಲೂಕುಗಳಲ್ಲಿ ಆರು ಪ್ರಮುಖ ಸೂಚಕಗಳು ಸಂಪೂರ್ಣತೆಯನ್ನು ಸಾಧಿಸಲು ಸುಸ್ಥಿರ ಪ್ರಯತ್ನವನ್ನು ಕೈಗೊಳ್ಳಲು ನೀತಿ ಆಯೋಗವು ಜುಲೈ ೩ ರಿಂದ ಸಪ್ಟಂಬರ್ 30ರವರೆಗೆ ಈ ಅಭಿಯಾನವನ್ನು ಹಮ್ಮಿಕೊಂಡಿದೆ ಅಭಿಯಾನದ ಯಶಸ್ವಿಗಾಗಿ ಸಂಬಂಧಿಸಿದ ನಮ್ಮ ಇಲಾಖೆ ಎಲ್ಲಾ ಅಧಿಕಾರಿಗಳು ಕ್ರಿಯಾಶೀಲತೆಯೊಂದಿಗೆ ಕೆಲಸ ಮಾಡಿ ಶೇ.೧೦೦ ರ ಗುರಿ ಸಾಧನೆಗೆ ಶಕ್ತಿ ಮೀರಿ ಪ್ರಯತ್ನಿಸುತ್ತಾರೆ ಕಳೆದ ವರ್ಷದಲ್ಲಿ ಸಂಕಲ್ಪ ಸಪ್ತಾಹ ಆಯೋಜನೆ ಮಾಡಲಾಗಿತ್ತು ಇದರಲ್ಲಿ 39 ಸೂಚ್ಯಂಕಗಳನ್ನು ತೆಗೆದುಕೊಳ್ಳಲಾಗಿತ್ತು ಆದರೀಗ ಅದರಿಂದ ಕೇವಲ ಆರು ಸೂಚ್ಯಂಕಗಳನ್ನು ೩ ತಿಂಗಳ ಒಳಗಾಗಿ ಸಾಧಿಸಲು ತೆಗೆದುಕೊಳ್ಳಲಾಗಿದೆ. ಇವುಗಳಲ್ಲಿ ಮೂರು ಆರೋಗ್ಯ ಇಲಾಖೆಗೆ ಒಂದು ಕೃಷಿ ಒಂದು ಮಹಿಳಾ ಮತ್ತುಮಕ್ಕಳ ಕಲ್ಯಾಣ ಇಲಾಖೆ ಹಾಗೂ ಒಂದು ಸಾಮಾಜಿಕ ಅಭಿವೃದ್ಧಿಗೆ ಸಂಬಂಧಿಸಿದ್ದಾಗಿದೆ ಎಂದರು. ಜಿಲ್ಲಾ ಯೋಜನಾಧಿಕಾರಿ ಎನ್.ಕೆ. ಗೋಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಎನ್ ಫಲಾನುಭವಿಗಳಿಗೆ ಮಾತೃ ಸುರಕ್ಷಾ ಕಾರ್ಡ್ ಹಾಗೂ ಸುಕನ್ಯಾ ಸಮೃದ್ಧಿ ಯೋಜನೆ ಫಲಾನುಭವಿಗಳಿಗೆ ಪಾಸ್ ಬುಕ್ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಪೂರ್ಣತ ಅಭಿಯಾನದ ಪ್ರತಿಜ್ಞಾ ವಿಧಿ ಭೋದಿಸಲಾಯಿತು. ತಮದಡ್ಡಿ ಗ್ರಾಮದ ಪ್ರಗತಿಪರ ರೈತ ಕೃಷಿ ಪಂಡಿತ ಬಸನಗೌಡ ಕನಕರೆಡ್ಡಿ ಸಾವಯವ ಕೃಷಿಯ ಕುರಿತು ತಮ್ಮ ಅನುಭವ ಹಂಚಿಕೊಂಡರು. ವೇದಿಕೆಯಲ್ಲಿ ನೀತಿ ಆಯೋಗದ ಸಹಾಯಕ ನಿರ್ದೇಶಕಿ ಶ್ರೀಮತಿ ಬಬಿತಾ ಸೂರ್ಯವಂಶಿ.ಜಿಪಂ. ಮುಖ್ಯ ಯೋಜನಾಧಿಕಾರಿ ಎನ್.ಕೆ.ಗೋಟೆ. ಸಹಾಯಕ ಯೋಜನಾಧಿಕಾರಿ ಎ.ಬಿ. ಅಲ್ಲಾಪೂರ. ಸಿಡಿಪಿಒ ಸಿ.ಬಿ.ಕುಂಬಾರ.ಪಿಆರ್ಡಿ ಇಇ ನಬಿಲಾಲ. ಜಂಟಿ ಕೃಷಿ ನಿರ್ದೇಶಕ ರಾಜಶೇಖರ್ ವಿಲಿಯಮ್ಸ್. ಉಪ ಕೃಷಿ ನಿರ್ದೇಶಕ ಪ್ರಕಾಶ ಚೌವಾಣ. ತಹಸಿಲ್ದಾರ್ ಪ್ರೇಮಸಿಂಗ ಪವಾರ.ತಾಪಂ ಇಒ ಬಿ.ಆರ್.ಬಿರಾದಾರ. ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿ ಹಿರೇಗೌಡರ. ಬಿಇಒ ಬಿ.ಎಸ್.ಸಾವಳಗಿ. ತಾಲೂಕಾ ಆರೋಗ್ಯಾಧಿಕಾರಿ ಸತೀಶ ತಿವಾರಿ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಉಮೇಶ ಲಮಾಣಿ. ಕೃಷಿ ಅಧಿಕಾರಿ ಸುರೇಶ ಭಾವಿಕಟ್ಟಿ.ಮಹೇಶ ಜೋಶಿ. ಪಶುವೈದ್ಯಾಧಿಕಾರಿ ಡಿ.ಬಿ. ರಾಠೋಡ. ಜಿಲ್ಲಾ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಇದ್ದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು ಸದಸ್ಯರು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ತಾಳಿಕೋಟೆ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಪಿಡಿಓ ಬಿ.ಎಮ್. ಸಾಗರ ಸ್ವಾಗತಿಸಿದರು. ಶಿಕ್ಷಕರಾದ ಅನಿಲಕುಮಾರ ಇರಾಜ್ ರಾಜು ವಿಜಾಪೂರ ಹಾಗೂ ಬಿ.ಹೀರೆಹೋಳಿ ನಿರೂಪಿಸಿದರು.

LEAVE A REPLY

Please enter your comment!
Please enter your name here