ಬಿಜಾಪುರ ಜಿಲ್ಲೆಯ ಬಬಲೇಶ್ವರ ತಾಲೂಕು ಕಾಕಂಡಕಿ ಗ್ರಾಮದಲ್ಲಿ ಪ್ರತಿವರ್ಷ ಕಾರ ಹುಣ್ಣಿಮೆ ಪ್ರಯುಕ್ತ, ಅದ್ದೂರಿಯ ಜಲ್ಲಿಕಟ್ಟು ಸ್ಪರ್ಧೆಯನ್ನು ಗ್ರಾಮದ ಮುಖಂಡರು ಏರ್ಪಡಿಸುತ್ತಾರೆ. ಇದರ ಅಂಗವಾಗಿ ಗ್ರಾಮದ ಸುತ್ತಮುತ್ತಲಿನ ಜಿಲ್ಲೆಯ ಸುತ್ತಮುತ್ತಲಿನ ಅನೇಕ ಗ್ರಾಮಸ್ಥರು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಒಂದು ಸ್ಪರ್ಧೆಯನ್ನು ಯಶಸ್ವಿಗೊಳಿಸಿದ ಈ ಸ್ಪರ್ಧೆಯಲ್ಲಿ ಸುಮಾರು ಮೂರು ಜನ ದುರ್ಮಣಕ್ಕೀಡಾಗಿ ಅನೇಕ ಜನರಿಗೆ ಅತಿಯಾದ ಗಾಯಗಳಾಗಿದ್ದು ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಬಿಜಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿದೆ ಎಂದು ವರದಿಯಾಗಿದೆ.

ಇದು ಸುಮಾರು ವರ್ಷಗಳಿಂದ ಇಂಥ ಮರಣಸಂಭವಿಸುತ್ತಿರುವ ಉಧಾಹರಣೆಗಳಿವೆಯಂತೆ. ಕೆಲವು ವರ್ಷಗಳಹಿಂದೆ ಈ ಆಚರಣೆಯ ನೋಡಲು ಹೋದ ವಿಜಯಪುರ ತಾಲೂಕಿ ಹೊನಗನಹಳ್ಳಿ ಗ್ರಾಮದ ರೈತ ಶ್ರೀ ದಯಾನಂದ ಬಿರಾದಾರ್ ಎಂಬ ಒಬ್ಬ ವ್ಯಕ್ತಿ ಮರಣ ಹೊಂದಿದ್ದಾರೆಂದು ಕೇಳಿದ್ದಿದೆ. ಈ ಒಂದು ರೋಚಕ ಸ್ಪರ್ಧೆಯಲ್ಲಿ ಪೊಲೀಸರ ಅತ್ಯಂತ ಕಠಿಣ ಶ್ರಮದಿಂದ ಸಾವು ನೋವುಗಳು ಕಮ್ಮಿಯಾಗಿದ್ದು . ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ.ಎಂದು ತಿಳಿಸಿದ್ದಾರೆ.ಇಂಥಾ ಮಾರಣಾಂತಿಕ ಕಾರ್ಯಕ್ರಮಕ್ಕೆ ಅವಕಾಶ ಕೊಡದೆ ಬೇರೆರೀತಿಯ ಜನಜಾಗೃತಿಯ ಆಟ ಗಳನ್ನು ಆಡಿಸುವ ಪ್ರಯತ್ನಗಳು ನಡೆಯಲಿ ಎಂದು ಜನಬಯಸುತ್ತಾರೆ.

LEAVE A REPLY

Please enter your comment!
Please enter your name here