ರಾಯಚೂರು:ನಗರದ ಎಮ್. ಈರಣ್ಣ ವೃತ್ತ ದಿಂದ ಆಕಾಶ ವಾಣಿ ಹೋಗುವ ಮದ್ಯ ದಾರಿಯಲ್ಲಿ ಮಾವಿನ ಕೆರೆ ಯಲ್ಲಿ ಅನಧಿಕೃತ 11 ಮಳಿಗೆಗಳು ನಿರ್ಮಿಸಿದ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಹಾಗೂ ನಗರ ಸಭೆಗೆ ದೂರು ನೀಡಿ ತಿಂಗಳ ಕಳೆದರು ಯಾವುದೇ ಪ್ರಯೋಜನೆ ಆಗಿಲ್ಲಾ ಹಾಗೂ ಬರೀ ಸೂಚನೆ ಪತ್ರಗಳಲ್ಲಿ ಮಾತ್ರ ಸೀಮಿತ ಆಗಿದೆ, ಈಗಾಗಲೇ ಮೂರು ಸೂಚನೆ ಪತ್ರ ಹಾಗೂ ಅಂತಿಮ ಸೂಚನೆ ಪತ್ರ ಕೂಡ ನೀಡಿ ಇಂದಿಗೆ 8 ದಿನ ಕಳೆದರು ಯಾವುದೇ ಕ್ರಮ ಕೈಗೊಳ್ಳದೆ ಹಾಗೂ ಆ ಅನಧಿಕೃತ 11 ಮಳಿಗೆಗಳನ್ನು ನೆಲ ಸಮ ಮಾಡದೆ ಇದ್ದಿದ್ದು ನೋಡಿದರೆ ನಗರ ಸಭೆ ಅಧಿಕಾರಿಗಳು ಕೂಡ ಈ ಅನಧಿಕೃತ ಕಟ್ಟಡಗಳಲ್ಲಿ ಸಮ ಪಾಲು ಸಮ ಬಾಳು ರೀತಿಯಲ್ಲಿ ಇವರಿಗೆ ಎಷ್ಟು ಪರ್ಸಂಟೇಜ್ ಸಿಕ್ಕಿದೆ ಎನ್ನುವುದೇ ಅನುಮಾನ ಸಾರ್ವಜನಿಕರಲ್ಲಿ ಉಂಟಾಗಿದೆ, ಎಷ್ಟು ಬಾರಿ ನಗರ ಸಭೆ ಅಧಿಕಾರಿಗಳಿಗೆ ಭೇಟಿ ಆದರೂ ಸೂಚನೆ ಪಾತ್ರಗಳು ತೋರಿಸಿ ಜಾರಿಕೊಳ್ಳುತ್ತಿದ್ದಾರೆ ಈಗಲಾದರೂ ನಗರ ಸಭೆ ಅಧಿಕಾರಿಗಳು ಇಚ್ಛೆತ್ತುಕೊಂಡು ಅನಧಿಕೃತ 11 ಮಳಿಗೆಗಳು ನೆಲ ಸಮ ಮಾಡುತ್ತಾರೋ ಇಲ್ಲಾ ಗಾಢ ನಿದ್ದೆಯಲ್ಲಿ ಜಾರಿಕೊಳ್ತಾರೋ ಕಾದು ನೋಡಬೇಕಾಗಿದೆ, ಇದೆ ರೀತಿಯ ನಗರ ಸಭೆ ಅನಾಧಿಕೃತ ಕಟ್ಟಡಗಳಿಗೆ ಬೆಂಬಲಿಸಿದರೆ ಮಾವಿನ ಕೆರೆ ಇತ್ತು ಈಗಿಲ್ಲಾ ಎಂದು ಕಥೆಗಳಲ್ಲಿ ಒಂದು ಭಾಗವಾಗುವ ಸಂದರ್ಭ ದೂರ ಇಲ್ಲಾ.
Home ಸಾರ್ವಜನಿಕ ಧ್ವನಿ ನಗರ ಸಭೆ ಅನಧಿಕೃತ ಕಟ್ಟಡಗಳಿಗೆ ಬೆಂಬಲಿಸಿದರೆ ಮಾವಿನ ಕೆರೆ ಇತ್ತು ಎಂದು ಕಥೆಗಳಲ್ಲಿ ಕೇಳಬೇಕಾಗುತ್ತದಷ್ಟೆ