ಬೇಡೇರಿಕೆಗೆ ಒತ್ತಾಯಿಸಿ ಧರಣ ಸತ್ಯಗ್ರಹ ಮಾಡಿ ಸಲ್ಲಿಸಿದ ಮನವಿ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಸ್ವಚ್ಛವಾಹಿನಿ ಮಹಿಳಾ ಕಾರ್ಮಿಕರು ಕಸವಿಲೆವಾರಿ ಮಾಡುವುದರಲ್ಲಿ ಪ್ರಮುಖರಾಗಿದ್ದು, ಕಸವನ್ನು ಬೇರ್ಪಡಿಸುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ, ಇದರಿಂದಾಗಿ ಸರ್ಕಾರದ ಪ್ರಮುಖ ಅಭಿಯನವಾದ ‘ಸ್ವಚ್ಛ ಭಾರತ್ ಅಭಿಯನ’ ವು ಅತ್ಯಂತ ಯಶಸ್ವಿಯಾಗಿ ನೆಡೆಯುತ್ತಿರುವುದಾಗಿ ಕೇಂದ್ರ ಸರ್ಕಾರವು ಉಲ್ಲೇಖ ಮಾಡುತ್ತಿದೆ. ಗ್ರಾಮಗಳ ಸ್ವಚ್ಚತೆಯ ಜವಬ್ದಾರಿವಹಿಸಿರುವಂತಹ ಸ್ವಚ್ಛವಾಹಿನಿ ನೌಕರರಿಗೆ ಮೂಲಭೂತ ಸೌಕರ್ಯಗಳು ಮರಿಚಿಕೆಯಾಗಿವೆ.
ರಾಜ್ಯ ಸರ್ಕಾರದಿಂದ ತರಬೇತಿ ಪಡೆದ ಸ್ವಚ್ಛವಾಹಿನಿ ನೌಕರರಿಗೆ ಗ್ರಾಮ ಪಂಚಾಯತಿಗಳಲ್ಲಿ ಕೆಲಸ ಕೊಡುತ್ತಿಲ್ಲ, ಸ್ವಚ್ಛವಾಹಿನಿ ಗಾಡಿಗಳಿಗೆ ವಿಮೆ ನವಿಕರಣ ಮಾಡಿರುವುದಿಲ್ಲ, ಬೇಟಿ ಬಚಾವೋ ಬೇಟಿ ಪಡವೋ ಎನ್ನುವ ಸರ್ಕಾರವು ಜೀವದ ಹಂಗನ್ನು ತೊರೆದು ಸ್ವಚ್ಛತಾ ಕೆಲಸ ಮಾಡುತ್ತಿರುವ ಮಹಿಳಾ ನೌಕರರಿಗೆ ವೇತನವನ್ನು ಬಾಕೀ ಉಳಿಸಿಕೊಂಡಿರುತ್ತಾರೆ, ಸ್ವಚ್ಛತಾ ಮಹಿಳಾ ಸಿಬ್ಬಂದಿಗಳಿಗೆ ರಕ್ಷಣಾ ಸಲಕರಣೆಗಳನ್ನ ಒದಗಿಸುತ್ತಿಲ್ಲ, ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುವ ಸ್ವಚ್ಛವಾಹಿನಿ ಮಹಿಳಾ ಸಿಬ್ಬಂಧಿಗಳು ಹಲವಾರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇದ್ದು ಅವರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಆರೋಗ್ಯ ವಿಮೆ ಇರುವುದಿಲ್ಲ ಹಾಗೂ ಸರ್ಕಾರದಿಂದಲೇ ತರಬೇತಿ ಪಡೆದ ಎಲ್ಲಾ ಸ್ವಚ್ಛವಾಹಿನಿ ನೌಕರರಿಗೆ ವರ್ಷಪೂರ್ತಿ ಕೆಲಸ ಕೊಡದೆ ಅಮಾಯಕ ಮಹಿಳೆಯರಿಗೆ ಅನ್ಯಾಯವಾಗುತ್ತಿದೆಯಲ್ಲದೇ ಗ್ರಾಮಗಳ ನೈರ್ಮಲ್ಯಿಕರಣಕ್ಕೆ ಧಕ್ಕೆಯಾಗಿದೆ, ಸ್ವಚ್ಛತಾ ಕೆಲಸವು ಖಾಯಂ ಕೆಲಸದ ಸ್ವರೂಪವಾಗಿದ್ದು ಕನಿಷ್ಟ ವೇತನ ರೂ.೨೬,೦೦೦ ನಿಗಧಿಪಡಿಸಬೇಕು, ಸರ್ಕಾರದಿಂದ ತರಬೇತಿ ಪಡೆದ ಮಹಿಳಾ ಡ್ರೆöÊವರ್ ಗಳಿಗೆ ಇದುವರೆಗೆ ಆಟೋಗಳನ್ನ ಕೊಟ್ಟಿರುವುದಿಲ್ಲ, ಕೆಟ್ಟು ನಿಂತಿರುವ ಆಟೋಗಳ ದುರಸ್ತಿಯನ್ನ ಮಾಡಿಸುತ್ತಿಲ್ಲ, ಸ್ವಚ್ಛವಾಹಿನಿ ಮಹಿಳೆಯರ ಕುಂದುಕೊರತೆಗಳನ್ನ ಚರ್ಚಿಸುವ ಸಮಿತಿಯು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ.
ಹಲವಾರುಬಾರಿ ಕೆಲವು ಜಿಲ್ಲೆಗಳಲ್ಲಿ ಜಿಲ್ಲಾಡಳಿತಕ್ಕೆ ಮತ್ತು ಜಿಲ್ಲಾಪಂಚಾಯತಿಗಳಿಗೆ ಮನವಿ ಸಲ್ಲಿಸಿದ್ದರೂ ಬೇಡಿಕೆಗಳ ಈಡೇರಿಕೆಗೆ ಸೂಕ್ತ ಕ್ರಮಗಳನ್ನ ಕೈಗೊಂಡಿರುವುದಿಲ್ಲ, ಈ ಎಲ್ಲಾ ಕಾರಣಗಳಿಂದಾಗಿ ಇಂದು ‘ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸ್ವಚ್ಛವಾಹಿನಿ ಆಟೋ ಡ್ರೆöÊರ‍್ಸ್ ಮತ್ತು ಸಹಾಯಕಿಯರ ಸಂಘ’, ದಾವಣಗೆರೆ ಜಿಲ್ಲಾ ಸಮಿತಿಯು ಜಿಲ್ಲಾ ಪಂಚಾಯತಿಯ ಮುಂದೆ ಪ್ರತಿಭಟನಾ ಧರಣ ಸತ್ಯಗ್ರಹ ಮಾಡಿ ಈ ಕೆಳಗಿನ ಬೇಡಿಕೆಗಳ ಮನವಿ ಸಲ್ಲಿಸುತ್ತಿದ್ದೇವೆ. ಜಿಲ್ಲೆಗೆ ಸಂಬAಧಿಸಿದ ಬೇಡಿಕೆಗಳ ಬಗ್ಗೆ ಚರ್ಚಿಸಲು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ನೇತೃತ್ವದಲ್ಲಿ ಸಭೆಯ ದಿನಾಂಕವನ್ನು ನಿಗಧಿಪಡಿಸಿ ಸಭೆ ಕರೆಯಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ, ರಾಜ್ಯ ಸರ್ಕಾರವು ಈ ಕೆಳಗಿನ ಬೇಡಿಕೆಗಳಿಗೆ ಸ್ಪಂದಿಸಿ ತಕ್ಷಣ ಸೂಕ್ತ ಕ್ರಮಗಳನ್ನ ಕೈಗೊಳ್ಳಬೇಕು, ಇಲ್ಲವಾದಲ್ಲಿ ರಾಜ್ಯಾದ್ಯಂತ ಅನಿರ್ಧಿಷ್ಟಾವಧಿ ಪ್ರತಿಭಟನೆಗಳನ್ನ ಹಮ್ಮಿಕೊಳ್ಳಲಾಗುವುದು. ಬೇಡಿಕೆಗಳು:
ತರಬೇತಿ ಪಡೆದ ಸ್ವಚ್ಛವಾಹಿನಿ ನೌಕರರಿಗೆ ಗ್ರಾಮ ಪಂಚಾಯತಿಗಳಲ್ಲಿ ಕೆಲಸ ಕೊಡಲು ಸೂಕ್ತ ಕ್ರಮ ಕೈಗೊಳ್ಳಬೇಕು.
ಸ್ವಚ್ಛವಾಹಿನಿ ಗಾಡಿಗಳಿಗೆ ವಿಮೆ ನವಿಕರಣ ಮಾಡಿಕೊಡಲು ತಕ್ಷಣ ಕ್ರಮ ಕೈಗೊಳ್ಳಬೇಕು.
ಬಾಕೀ ವೇತನನ್ನು ತಕ್ಷಣ ಪಾವತಿಸಬೇಕು.
ಸ್ವಚ್ಛತಾ ಸಿಬ್ಬಂಧಿಗಳಿಗೆ ರಕ್ಷಣಾ ಸಲಕರಣೆಗಳನ್ನ ಒದಗಿಸಬೇಕು.
ಸ್ವಚ್ಛವಾಹಿನಿ ಮಹಿಳಾ ಸಿಬ್ಬಂದಿಗಳಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಆರೋಗ್ಯ ವಿಮೆ ಜಾರಿ ಮಾಡಬೇಕು.
ಸ್ವಚ್ಛವಾಹಿನಿ ಮಹಿಳಾ ಸಿಬ್ಬಂದಿಗಳಿಗೆ ರೂ.೨೬,೦೦೦ ಕನಿಷ್ಟ ವೇತನ ನಿಗಧಿಪಡೆಸಬೇಕು.
ತರಬೇತಿ ಪಡೆದ ಮಹಿಳಾ ಡ್ರೆöÊವರ್ ಗಳಿಗೆ ಮಾತ್ರ ಆಟೋಗಳನ್ನ ಕೊಡಲು ಕ್ರಮ ಕೈಗೊಳ್ಳಬೇಕು.
ಗ್ರಾಮ ಪಂಚಾಯತಿಗಳಲ್ಲಿ ಕೆಟ್ಟು ನಿಂತಿರುವ ಆಟೋಗಳ ದುರಸ್ತಿಯನ್ನ ಮಾಡಲು ಸೂಕ್ತ ಕ್ರಮ ವಹಿಸಬೇಕು.
ಸ್ವಚ್ಚವಾಹಿನಿ ನೌಕರರ ಕುಂದುಕೊರತೆ ಸಮಿತಿ ರಚಿಸಬೇಕು ಮತ್ತು ಕಾಲ ಕಾಲಕ್ಕೆ ಸಭೆ ಕರೆಯಬೇಕು.
ಚರ್ಚೆ ಮಾಡುವ ಸಮಯದಲ್ಲಿ ಇತರೆ ಬಿಟ್ಟುಹೋದ ಬೇಡಿಕೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಡಿ.ಎಂ. ಮಲಿಯಪ್ಪ, ಆನಂದರಾಜು ಕೆ.ಹೆಚ್. ರಾಜ್ಯ ಸಂಚಾಲಕರು ಜಿಲ್ಲಾ ಸಂಚಾಲಕರು
ಸ್ವಚ್ಛವಾಹಿನಿ ನೌಕರರು ಒತ್ತಾಯಿಸಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಿದ್ದಾರೆ.