ಬೆಂಗಳೂರು:ಪ್ರಪಂಚದಾದ್ಯಂತ ಹಲವು ರಾಷ್ಟ್ರಗಳಿಂದ ಅದರಲ್ಲೂ ಭಾರತೀಯರು ಕೆಲಸವನ್ನರಸಿ ಗಲ್ಫ್ ರಾಷ್ಟ್ರಗಳಿಗೆ ತಮ್ಮ ಜೀವನ ಗುಣಮಟ್ಟ ಸುಧಾರಣೆಗಾಗಿ ವಲಸೆ ಹೋಗುವುದು ಸರ್ವೆಸಾಮಾನ್ಯವಾಗಿದೆ.
ದಿನಾಂಕ:12.06.2024ರಂದು ಕುವೈತ್‌ನ ಮಾಂಗಾಫ್‌ನಲ್ಲಿರುವ ವಸತಿ ಸಮುಚ್ಚಯವೊಂದರಲ್ಲಿ ಆಕಸ್ಮಿಕವಾಗಿ ನಡೆದ ಅಗ್ನಿ ದುರಂತದಲ್ಲಿ ಸುಮಾರು 45 ಭಾರತೀಯ ಪ್ರಜೆಗಳು ಸಾವನ್ನಪ್ಪಿದ್ದು, ಹಲವರು ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆಯನ್ನು ಅಲ್ಲಿನ ಆಸ್ಪತ್ರೆಗಳಲ್ಲಿ ಪಡೆಯುತ್ತಿದ್ದಾರೆ. ಇದೊಂದು ದುರಾದೃಷ್ಟಕರ ಸಂಗತಿಯಾಗಿದ್ದು ಘಟನೆಯ ಕುರಿತು ನಮ್ಮೆಲ್ಲರಿಗೂ ವಿಷಾಧವಿದೆ.
ಈ ಸದರಿ ಅಗ್ನಿ ದುರಂತದಲ್ಲಿ ಪ್ರಾಣ ಕಳಕೊಂಡವರ ಪೈಕಿ ಕೇರಳ ರಾಜ್ಯದವರೇ
ಹೆಚ್ಚಿನವರಾಗಿದ್ದು, ನಮ್ಮ ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಸರಸಂಬ ಗ್ರಾಮದ 40 ವರ್ಷ ವಯಸ್ಸಿನ ಶ್ರೀ ವಿಜಯಕುಮಾರ್ ಬಿನ್ ಕೊಬ್ಬಣ್ಣ ಪ್ರಸನ್ನ ಸಹ ಒಬ್ಬರಾಗಿದ್ದರು. ಇವರು ವಾಹನ ಚಾಲಕರಾಗಿ ಕುವೈತ್‌ನಲ್ಲಿ ಸುಮಾರು 8 ವರ್ಷಗಳಿಂದ ನೆಲೆಸಿದ ಮೃತರ ಅವಲಂಬಿತ ಕುಟುಂಬದಲ್ಲಿ 8 ಸದಸ್ಯರಿದ್ದಾರೆ. ಸದರಿಯವರ ಮೃತ ದೇಹವನ್ನು ಕುವೈತ್ ನಿಂದ ಭಾರತಕ್ಕೆ ತರುವ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಅನಿವಾಸಿ ಭಾರತೀಯ ಸಮಿತಿಯು ಭಾರತ ಸರ್ಕಾರದೊಂದಿಗೆ
ಹಾಗೂ ಕುವೈತ್ ನ ರಾಯಭಾರಿ ಕಚೇರಿಯೊಂದಿಗೆ ನಿಕಟ ಸಂಪರ್ಕದಲ್ಲಿತ್ತು. ತದನಂತರ ಮೃತದೇಹವನ್ನು ಕೊಚ್ಚಿಯಿಂದ ಹೈದರಾಬಾದ್ ಮೂಲಕ ಮೃತರ ಸ್ವಗ್ರಾಮಕ್ಕೆ ತಲುಪಿಸುವಲ್ಲಿ ಸರ್ಕಾರದ ಅನೇಕ ಅಧಿಕಾರಿ
ಸಿಬ್ಬಂದಿಗಳು ಕಾರ್ಯನಿರ್ವಹಿಸಿರುತ್ತಾರೆ. ನಂತರ ಹಸ್ತಾಂತರಿಸಲಾಗಿದೆ.ಮೃತ ದೇಹವನ್ನು ಕುಟುಂಬಸ್ಮರಿಗೆ ಈಗಾಗಲೇ ಕೇರಳ ರಾಜ್ಯ ಸರ್ಕಾರವು ಸದರಿ ಅಗ್ನಿ ದುರಂತದಲ್ಲಿ ಸತ್ತವರ ಕುಟುಂಬದ ಅವಲಂಭಿತ ಸದಸ್ಯರಿಗೆ ರೂ.5 ಲಕ್ಷಗಳ ಆರ್ಥಿಕ ಪರಿಹಾರ ಘೋಷಿಸಿದೆ. ಮುಂದುವರೆದು ಅನಿವಾಸಿ ಭಾರತೀಯ ಸಮಿತಿ, ಕರ್ನಾಟಕ ವತಿಯಿಂದ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಕರ್ನಾಟಕ ರಾಜ್ಯ ಸರ್ಕಾರವು ಸಹ ದಿವಂಗತ ವಿಜಯಕುಮಾರ್ ಬಿನ್ ಕೊಬ್ಬಣ್ಣ ಪ್ರಸನ್ನ ಇವರ ಕುಟುಂಬಕ್ಕೆ ಗರಿಷ್ಠ ಮಟ್ಟದ ಆರ್ಥಿಕ ನೆರವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪಾವತಿಸುವಂತೆ ಕೋರಲಾಗಿತ್ತು. ಇದಕ್ಕೆ ಸ್ಪಂದಿಸಿದ ಮಾನ್ಯ ಮುಖ್ಯಮಂತ್ರಿಗಳು ಸದರಿ ಅವಲಂಬಿತ ಕುಟುಂಬದವರಿಗೆ ರೂ. ಐದು ಲಕ್ಷಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೀಡುವಂತೆ ಅನುಮೋದಿಸಿರುತ್ತಾರೆ ಎಂದು ಅನಿವಾಸಿ ಭಾರತೀಯ ಸಮಿತಿ, ಕರ್ನಾಟಕ ಉಪಾಧ್ಯಕ್ಷರ ಕಛೇರಿಯ ಆಪ್ತಸಹಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here