ದಾವಣಗೆರೆ: ಯುವ ಸಮುದಾಯ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ನಿರಂತರ ಪುಸ್ತಕಗಳ ಅಧ್ಯಯನ ಸಹಾಯ ಮಾಡುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ವೆಂಕಟೇಶ ಬಾಬು ರವರು ಹೇಳಿದರು.
ಅವರು ಇಂದು ನಗರದ ಪಿ ಜೆ ಬಡಾವಣೆಯ ಸಮೃದ್ಧಿ ಕೋಚಿಂಗ್ ಅಕಾಡೆಮಿಯಲ್ಲಿ ಪುಸ್ತಕ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ ನೋಡುವ ಪ್ರವೃತ್ತಿ ಹೆಚ್ಚಾಗುತ್ತಿದೆ ಡಿಜಿಟಲ್ ಮಾಧ್ಯಮ ಬಂದ ನಂತರ ಓದುವುದಕ್ಕಿಂತ ನೋಡುವುದೇ ಹೆಚ್ಚಾಗಿದೆ ಆದರೆ ಪ್ರತಿನಿತ್ಯ ಪುಸ್ತಕಗಳನ್ನು ಓದುವುದರಿಂದ ಜ್ಞಾನ ಹೆಚ್ಚಾಗುತ್ತದೆ ಎಂದು ಹೇಳಿದರು. ಪುಸ್ತಕಗಳು ನಿಜವಾದ ಸ್ನೇಹಿತರಂತೆ ಹಾಗೂ ಅವುಗಳು ಸಮುದ್ರವಿದ್ದಂತೆ ಸಮುದ್ರದ ದಡದಲ್ಲಿ ನಮಗೆ ಸಿಗುವುದಾದರೆ ಏನು ಬರಿ ಉಪ್ಪು ಮತ್ತು ಕಪ್ಪೆ ಚಿಪ್ಪು ಆದರೆ ಸಮುದ್ರದ ಆಳಕ್ಕೆ ಹೋದಂತೆಲ್ಲ ನಮಗೆ ಮುತ್ತು ರತ್ನಗಳು ಸಿಗುತ್ತವೆ. ಹಾಗೆ ಪುಸ್ತಕಗಳನ್ನು ಆಳವಾಗಿ ಓದುತ್ತಾ ಹೋದಂತೆಲ್ಲ ಜ್ಞಾನ ನಮ್ಮದಾಗುತ್ತದೆ ಅದರಿಂದ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸ್ವಾಮಿ ಲಿಂಗೇಶ್ ಸಂಕೋಚ ಅವರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಮಂಜುನಾಥ್ ಅವರು ಮತ್ತು ಎಲ್ಲಾ ಉಪನ್ಯಾಸಕ ವರ್ಗದವರು ಹಾಜರಿದ್ದರು.