ವಿಜಯಪುರ:– ಎಸ್ಎಸ್ ಎಲ್ ಸಿ.ಪಿಯುಸಿ.ಪದವಿ ಪಾಸಾದ ವಿದ್ಯಾರ್ಥಿಗಳಿಗೆ ಮುಂದೇನು ಮಾಡುವುದು ಎಂಬ ಯಕ್ಷಪ್ರಶ್ನೆ ಕಾಡುತ್ತಿರುತ್ತದೆ. ಅವರಿಗೆ ವೃತ್ತಿ ಮಾರ್ಗದರ್ಶನ ತರಬೇತಿ ಅತ್ಯಗತ್ಯ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಯಲ್ಲಪ್ಪ ಈರಕಲ್ ನುಡಿದರು.
ದಿನಾಂಕ 30-05-2024 ರಂದು ಗುರುವಾರ ಆಶ್ರಮ ರಸ್ತೆಯ ಶ್ರೀ ಬಸವೇಶ್ವರ ದೇವಾಲಯ ಸಭಾಂಗಣದಲ್ಲಿ ಚಿಲ್ಡ್ರನ್ ಆಫ್ ಇಂಡಿಯಾ ಫೌಂಡೇಶನ್ ವತಿಯಿಂದ ಏರ್ಪಡಿಸಿದ್ದ
‘ಬದಲಾವಣೆಯ ಹರಿಕಾರರಿಗೆ ಸಮಗ್ರ ವೃತ್ತಿ ಮಾರ್ಗದರ್ಶನ ತರಬೇತಿ’ ಕಾರ್ಯಕ್ರಮವನ್ನು ಜ್ಯೋತಿ ಪಜ್ವಲಿಸಿ ಮಾತನಾಡಿದ ಅವರು. ವಿದ್ಯಾರ್ಥಿಗಳ ತಂದೆ ತಾಯಿ ಪೋಷಕರು ಸರಕಾರಿ ನೌಕರಿ ಒಂದನ್ನೇ ಜೀವನದ ಉದ್ದೇಶ ಎಂದು ಭಾವಿಸದೇ. ಜೀವನದಲ್ಲಿ ಅನೇಕ ವೃತ್ತಿ ಕೌಶಲ್ಯತೆ ಬೆಳೆಸಿಕೊಂಡು ಉತ್ತಮ ಜೀವನ ಸಾಗಿಸಬಹದು ಎಂಬುದನ್ನು ಮನಗಾಣಬೇಕು.ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ದಾನೇಶ ಅವಟಿ ಮಾತನಾಡಿ ವಿದ್ಯಾರ್ಥಿ ಜೀವನ ಜೀವನದ ಸುವರ್ಣ ಕಾಲ ಈ ಸಂದರ್ಭದಲ್ಲಿ ಹತ್ತು ಹಲವು ಕನಸುಗಳನ್ನು ಹೊಂದಿ ಬೆಳೆಯುತ್ತಿರುತ್ತಾರೆ.ಸಂದರ್ಭದಲ್ಲಿ ಅವರಿಗೆ ಬರಿ ವಿದ್ಯಾಭ್ಯಾಸ. ರ್ಯಾಂಕ್ ಪಡೆಯುವದು. ಉನ್ನತ ಹುದ್ದೆಯ ನೌಕರಿ ಗಿಟ್ಟಿ ಸುವದು.ವಿದೇಶಕ್ಕೆ ಹಾರುವುದು.ಐಟಿ ಬಿಟಿ ಕಂಪನಿಗಳಲ್ಲಿ ಉದ್ಯೋಗ ಮಾಡುವದೇ ಜೀವನ ಎಂಬುವ ಕನಸನ್ನು ತುಂಬದೇ.ದೇಸೀಯ ವೃತ್ತಿ ಕೌಶಲ್ಯ ಬೆಳೆಸಿಕೊಂಡು.ಕುಟುಂಬದೊಂದಿಗೆ ಒಳ್ಳೆಯ ಉದ್ಯೋಗ ಮಾಡಿಕೊಂಡು ನೆಮ್ಮದಿಯ ಬದುಕು ಸಾಗಿಸಬಹುದು. ಎಲ್ಲರೂ ಸರಕಾರಿ ನೌಕರಿಯ ಆಯಾ ಆಸೆ ಪಡದೆ ವಿವಿಧ ಕ್ಷೇತ್ರಗಳ ವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕೆಂದರು.
ಸೇವಕ ಸಂಸ್ಥೆಯ ಸಂಯೋಜಕಿ ವಿಮಲಾಕ್ಷಿ ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚಿಲ್ಡ್ರನ್ ಆಫ್ ಇಂಡಿಯಾ ಫೌಂಡೇಶನ್ ಜಿಲ್ಲಾ ಸಂಯೋಜಕಿ ಕಾರ್ಯಕ್ರಮ ಆಯೋಜಿಸಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಚಿಲ್ಡ್ರನ್ ಆಫ್ ಇಂಡಿಯಾ ಫೌಂಡೇಶನ್ ಜಿಲ್ಲಾ ಸಂಯೋಜಕಿ ಶಾಂತಾ ಬ್ಯಾಲ್ಯಾ ಳ ಕಾರ್ಯಕ್ರಮ ಆಯೋಜಿಸಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕುಮಾರಿ ಅಕ್ಷತಾ ನಾವದಗಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು
—-ದಾನೇಶ ಅವಟಿ ವಕೀಲರು.ವಿಜಯಪುರ.
ಮೋ –09535390588

LEAVE A REPLY

Please enter your comment!
Please enter your name here