ಬೆಂಗಳೂರು:ಕನಕಶ್ರೀ ಚಾರಿಟಬಲ್ ಟ್ರಸ್ಟ್ (ರಿ.), ಬೆಂಗಳೂರು ವತಿಯಿಂದ 2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನಿಷ್ಠ ಶೇಕಡ 95 ಅಂಕಗಳು ಮತ್ತು ಅದಕ್ಕಿಂತಲೂ ಹೆಚ್ಚಿನ ಅಂಕಗಳನ್ನು ಗಳಿಸಿದ ಹಾಗೂ ಪಿ.ಯು.ಸಿ. ಪರೀಕ್ಷೆಯಲ್ಲಿ ಕನಿಷ್ಠ ಶೇಕಡ 90 ಅಂಕಗಳು ಮತ್ತು ಅದಕ್ಕಿಂತಲೂ ಹೆಚ್ಚಿನ ಅಂಕಗಳನ್ನು ಗಳಿಸಿದ ಕುರುಬ (ಹಾಲುಮತ) ಸಮಾಜದ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬೆಳಗಾವಿ ಕಂದಾಯ ವಿಭಾಗದ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬಿಜಾಪುರ, ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಿದ್ಯಾಭ್ಯಾಸ ಮಾಡಿರುವವರು ಮಾತ್ರ ಅರ್ಜಿ ಸಲ್ಲಿಸಬಹುದು. ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ನಗದು ಪ್ರೋತ್ಸಾಹಧನ ಮತ್ತು ಪ್ರಶಂಸಾ ಪತ್ರ ನೀಡಿ ಪುರಸ್ಕರಿಸಲಾಗುವುದು. ಅಂಕಪಟ್ಟಿಯ ದೃಢೀಕೃತ ನಕಲು ಪ್ರತಿ, ವರ್ಗಾವಣೆ ಪ್ರಮಾಣ ಪತ್ರ (T.C.) ಅಥವಾ ಜಾತಿ ಪ್ರಮಾಣ ಪತ್ರದ (ಪ್ರವರ್ಗ-II ಎ) ದೃಢೀಕೃತ ನಕಲು ಪ್ರತಿ, ವಿದ್ಯಾರ್ಥಿಯ ಅಧಾರ್ ಕಾರ್ಡ್ ನಕಲು ಪ್ರತಿ ಮತ್ತು ವಿದ್ಯಾರ್ಥಿಯ ಭಾವಚಿತ್ರದೊಂದಿಗೆ ತಂದೆ ತಾಯಿ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮುಂತಾದ ವಿವರಗಳನ್ನೊಳಗೊಂಡ ಅರ್ಜಿಯನ್ನು ದಿನಾಂಕ 15/06/2024 ರ ಒಳಗೆ ಖುದ್ದಾಗಿ ಅಥವಾ ನೋಂದಾಯಿತ ಅಂಚೆ (Registered Post Acknowledgement Due) De 3.0 w. ಅಧ್ಯಕ್ಷರು, ಕನಕಶ್ರೀ ಚಾರಿಟಬಲ್ ಟ್ರಸ್ಟ್ (ರಿ), ಕೇರ್ ಆಫ್ ಕನಕಶ್ರೀ ಗೃಹ ನಿರ್ಮಾಣ ಸಹಕಾರ ಸಂಘ, ನಂ.20/31, 6ನೇ ಮುಖ್ಯರಸ್ತೆ, 80 ಅಡಿ ರಸ್ತೆ, ಕೆ.ಹೆಚ್.ಬಿ. ಕಾಲೋನಿ 1ನೇ ಹಂತ, ಬಸವೇಶ್ವರನಗರ, ಬೆಂಗಳೂರು-560079, ದೂರವಾಣಿ ಸಂಖ್ಯೆ 080-23585684 ಇವರಿಗೆ ಸಲ್ಲಿಸುವುದು. ಧಾರವಾಡದಲ್ಲಿ ನಡೆಯಲಿರುವ ಪ್ರತಿಭಾ ಪುರಸ್ಕಾರ ಸಮಾರಂಭದ ದಿನಾಂಕ ಮತ್ತು ಸ್ಥಳವನ್ನು ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ನಂತರ ತಿಳಿಸಲಾಗುವುದು. ನಿಗಧಿತ ಅರ್ಜಿ ನಮೂನೆ

ಮತ್ತು ಹೆಚ್ಚಿನ ಮಾಹಿತಿಗಾಗಿ ಶ್ರೀ ಪಿ.ಎನ್. ಕೃಷ್ಣಮೂರ್ತಿ, ಕಾರ್ಯದರ್ಶಿ, ಕನಕಶ್ರೀ ಚಾರಿಟಬಲ್ ಟ್ರಸ್ಟ್, ಮೊ.ಸಂ. 9483425046, ಶ್ರೀ ಎಂ. ಪ್ರಕಾಶ್, ಖಜಾಂಚಿ, ಕನಕಶ್ರೀ ಚಾರಿಟಬಲ್ ಟ್ರಸ್ಟ್, ಮೊ.ಸಂ. 9845101696, ಶ್ರೀ ಸಿ. ಬಸವರಾಜು, ಟ್ರಸ್ಟಿ, ಕನಕಶ್ರೀ ಚಾರಿಟಬಲ್ ಟ್ರಸ್ಟ್, ಮೊ.ಸಂ. 9980804115, ಶ್ರೀ ವೀರೇಶ್ ಹೆಚ್.ಎಂ, ಮೊ. . 9916606066. 6.20. 4, .. 9844389916 2 ಯಾರನ್ನಾದರೂ ಸಂಪರ್ಕಿಸುವುದು.(ಪಿ.ಎನ್. ಕೃಷ್ಣಮೂರ್ತಿ) ಕಾರ್ಯದರ್ಶಿ .. 9483425046

LEAVE A REPLY

Please enter your comment!
Please enter your name here