ಸಹೋದರರು,ಪ್ರಜಾ ಪರಿವರ್ತನಾ ವೇದಿಕೆ ಜಿಲ್ಲಾಧ್ಯಕ್ಷರಾದ ಹೆಚ್.ಕೆ.ಕೃಷ್ಣಾ ಅರಕೆರೆ ಸಾರ್ ರವರ ಸಂದೇಶವನ್ನು ನೋಡಿದೆ ತುಂಬಾ ಖುಷಿಯಾಯಿತು. ಸಾರ್ ತಪ್ಪು ತಿಳಿಬೇಡಿ ಬುದ್ಧ ಬಸವ ಅಂಬೇಡ್ಕರ್ ಹಾಗೂ ಇತರೆ ಸಮಾಜ ಸುಧಾರಕರು,ಶ್ರೇಷ್ಠ ದಾಸರು,ವಚನಕಾರರು ಕೇವಲ ವೇದಿಕೆಯ ಭಾಷಣಗಳಲ್ಲಿ,ರಾಜಕೀಯ ಪ್ರತೀಷ್ಟೇಗಾಗಿ ಕೆಲವರು ಬಳಸಿಕೊಳ್ಳುತ್ತಾರೆ ಅವರ ತತ್ವನಿಷ್ಟೆಗಳಿಗೆ ಬದ್ದರಾಗಿ ನಿರಂತರ ಕೆಲಸ ಮಾಡುವ ರಾಜ್ಯದಲ್ಲಿನ ಏಕೈಕ ರಾಜಕಾರಣಿ ಸತೀಶ್ ಜಾರಕಿಹೊಳಿ ಸಾಹೇಬರು ಎಂದು ಹೆಮ್ಮೆಯಿಂದ ಹೇಳುತ್ತೇನೆ.ನೀವು ಹೇಳಿದ ರೀತಿಯಲ್ಲಿ ಸಂತೋಷ್ ಲಾಡ್ ಕೂಡ ಒಬ್ಬರು ಹೌದು,ಅದು ಬಿಟ್ಟರೆ ರಾಜ್ಯದಲ್ಲಿ ನೀವು ಹೆಸರು ಸೂಚಿಸಿರುವ ಯಾವ ಅಹಿಂದ ನಾಯಕರು ಇಲ್ಲಾ ಇದು ನನ್ನ ವೈಯಕ್ತಿಕ ಅಭಿಪ್ರಾಯ ಸಾರ್, ಅಹಿಂದ ಸಮುದಾಯ ಒಂದಾಗಬೇಕು ಎಚ್ಚರವಾಗಬೇಕು ಅನ್ನುವ ಕನಸ್ಸು ಈ 2024 ರ ಚುನಾವಣೆಯಲ್ಲಿ ಕಂಡಿದ್ದೆವು ಆದರೂ ಸಾಧ್ಯವಾಗಲಿಲ್ಲ ಇನ್ನೂ ನಾವು ಅಹಿಂದ ಸಮುದಾಯ ಗುಲಾಮರಾಗುತ್ತಿದ್ದೇವೆ ಸಾರ್. ನೀವು ಹೇಳಿದ ಪ್ರಕಾರ ಅಹಿಂದ ಸಮುದಾಯ ಒಂದಾದರೆ ಇಡೀ ಹೌದು, ನೀವು ಹೇಳುವುದು ಸರಿಯಿದೆ ಆದರೆ, ಮೂವತ್ತು ನಲವತ್ತು ವರ್ಷಗಳಿಂದ ತಾವೇ ತಮ್ಮ ಕುಟುಂಬಕ್ಕೆ ರಾಜಕಾರಣ ಸೀಮಿತ ಎಂದು ಮೆರೆಯುವ ಕುಟುಂಬ ರಾಜಕಾರಣದ ದುರಂಹಕಾರಿಗಳ ವಿರುದ್ಧ ತೊಡೆ ತೊಟ್ಟು ನಿಂತು ಜನರ ಪ್ರೀತಿಗಳಿಸಿದ ವ್ಯಕ್ತಿ ದಾವಣಗೆರೆ ಜಿ.ಬಿ.ವಿನಯ್ ಕುಮಾರ್ ಅಹಿಂದ ಸಮುದಾಯದ ಯುವ ನಾಯಕ ನಾವು ಬೆಂಬಲಿಸುತ್ತೇವೆ ಅವರ ಜೊತೆ ಇರುತ್ತೇವೆ ನಿಜಾ ಆದರೆ,ನೀವು ಹೇಳಿದ ಮಹಾನ್ ರಾಜಕೀಯ ನಾಯಕರು ಯಾರೂ ಅಹಿಂದ ಸಮುದಾಯದವರಲ್ಲವೇ..? ಇವರಿಗೆ ಅಹಿಂದ ಸಮುದಾಯ ಯುವಕರು ರಾಜಕೀಯವಾಗಿ ಬೆಳೆದು ಮುನ್ನೆಡೆಯಬೇಕೆಂಬ ಆಶಯಗಳಿಲ್ಲವೇ..? ಹಾಗಾದರೆ ನಿರಂತರ ಜನರ ನಡುವೆ ಕೆಲಸ ಮಾಡಿದ ಜಿ.ಬಿ.ವಿನಯ್ ಕುಮಾರ್ ರವರಿಗೆ ನೀವು ಹೇಳಿದ ಅಹಿಂದ ನಾಯಕರು ಟಿಕೇಟ್ ಯಾಕೆ ತಪ್ಪಿಸಿದರು ಇದು ಜಾತಿ,ಹಣಬಲ,ತೋಳ್ಬಲವಲ್ಲವೇ ಹೇಳಿ ಸಾರ್, ಹಣ,ಆಸ್ತಿ, ಸಂಪತ್ತು ಇದೆ ಎಂದು ಪಕ್ಷಕ್ಕಾಗಿ ದುಡಿದ ವಿನಯ್ ಕುಮಾರ್ ಹೊರತು ಪಡಿಸಿ ಅದೇ ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಹೆಚ್,ಬಿ,ಮಂಜಪ್ಪ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಹಂತರದಿಂದ ಸೋತ ಅಭ್ಯರ್ಥಿಯಾಗಿದ್ದರು ಅವರಿಗೆ ಟಿಕೇಟ್ ವಂಚಿಸಿದ್ದು ತಪ್ಪಲ್ಲವೇ..? ಅವರು ಅಹಿಂದ ನಾಯಕರಲ್ಲವೇ ..? ಹಗಲಿರುಳು ದುಡಿದ ಕಾರ್ಯಕರ್ತರುಗಳನ್ನು ಮರೆತು ಈ ಬಾರಿ ಕಾಂಗ್ರೇಸ್ ನೀಡಿರುವ ಗ್ಯಾರಂಟಿಗಳಿಂದ ನಮಗೆ ಜಯ ಸಿಗುತ್ತೆಂಬ ದುರಾಸೆಯಿಂದ ತಮ್ಮ ಕುಟುಂಬಕ್ಕೆ ಟಿಕೇಟ್ ಪಡೆದಿದ್ದು ಸರಿಯೇ ಸಾರ್ ನೀವು ಯೋಚಿಸಿ ಸಾರ್ ನಮಗೆ ಯಾರೂ ವೈರಿಗಳಲ್ಲಾ ಇಲ್ಲಿ ದಲಿತರು,ಅಸ್ಪೃಶ್ಯರು,ಮುಸ್ಲಿಂ,ಕ್ರಿಶ್ಚಿಯನ್ ಎಂದು ಜಾತಿವಿಷಬೀಜ ಬಿತ್ತಿ ನಮ್ಮವರೇ ನಮ್ಮ ಸಮುದಾಯದ ನಡುವೆ ಜಗಳ ಹಚ್ಚಿ ನಮ್ಮ ಸಮುದಾಯಗಳ ಜನರನ್ನು ಗುಲಾಮರಾಗಿ ಮಾಡತ್ತಿದ್ದಾರಲ್ಲಾ,ಅವರ ಮತಗಳಿಂದ ಜಯಗಳಿಸಿ ಶಾಸಕರಾಗಿ,ಸಚಿವರಾಗಿ ಮೆರೆಯುತ್ತಾ ತಿಪ್ಪೇಗುಂಡಿಯಲ್ಲಿರುವ ಜಾತಿ ಸಮೀಕ್ಷೆ ಎಂದು ಗೇಲಿ ಹೇಳಿಕೆ ನೀಡಿ ಅದೇ ತಿಪ್ಪೇಗುಂಡಿಯ ಹಾಗೂ ಅಹಿಂದ ಮತಗಳಿಗೆ ಹಣ,ಹೆಂಡ ಹಂಚಿ ಮೋಸ ಮಾಡಿ ಓಟು ಪಡೆಯಲು ಯತ್ನಿಸುತ್ತಿದ್ದಾರಲ್ಲಾ ಅವರ ನೀಚತನದ ಗೋಸುಂಬೆ ವ್ಯಕ್ತಿ ಗಳ ನೀಚ ರಾಜಕಾರಣದ ವಿರುದ್ಧ ನಮ್ಮ ಹೋರಾಟನೇ ಹೊರತು ಬೇರೆಯಲ್ಲಾ ಸಾರ್ ಆದರೆ, ನೀವು ಹೇಳಿದ ಪ್ರಕಾರ ಸಿದ್ಧರಾಮಯ್ಯ ನಂತರ ಮತ್ತೊಬ್ಬ ಅಹಿಂದ ನಾಯಕನಾಗಬೇಕೆಂಬ ಆಶಯ ಖಂಡಿತಾ ಇದೆ ಅದು ನಮ್ಮ ಆಶಯನೂ ಕೂಡ. ನಾವು ನೀವು ಜೊತೆಗೂಡಿ ಕೆಲಸ ಮಾಡೋಣ ನಾವು ದಾವಣಗೆರೆ ಜಿಲ್ಲೆಗೆ ಪರ್ಯಾಯವಾಗಿ ಮಾತ್ರ ಅಹಿಂದ ನಾಯಕ ಜಿ.ಬಿ.ವಿನಯ್ ಕುಮಾರ್ ಅಂತಹ ಭಾವಿಸಿಕೊಂಡು ಎಲ್ಲರನ್ನೂ ಒಗ್ಗೂಡಿಕೊಂಡು ಕೆಲಸ ಮಾಡುತ್ತೇವೆ ಇಲ್ಲಿ ” ಯಾರೂ ಮುಖ್ಯರಲ್ಲಾ- ಯಾರೂ ಅಮುಖ್ಯರಲ್ಲಾ” ಎಂದು ಕುವೆಂಪು ರವರು ಹೇಳಿದ್ದಾರೆ.ಇಲ್ಲಿ ಎಲ್ಲಾ ಸಮುದಾಯಗಳು ಮುಖ್ಯ ಯಾರೂ ಬೇರೆಯಲ್ಲಾ ನಾವು ನೀವು ಒಂದಾಗೋಣ ಗುಲಾಮಗಿರಿ ಬಿಟ್ಟು ಕೆಲಸ ಮಾಡೋಣ ಈ ಸಾಮಾನ್ಯ ಜ್ಞಾನ ಎಲ್ಲರಲ್ಲೂ ಬರಲಿ ಎಂಬ ಆಶಯ ನನ್ನದು. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಹೇಳಿದಾಗೆ ನಮಗೆ ಗೌರವ ಸಿಗದ ಜಾಗದಲ್ಲಿ ನಮ್ಮ ಚಪ್ಪಲಿ ಬಿಡಲ್ಲಾ ಇದು ನಮ್ಮ ಸ್ವಾಭಿಮಾನ ಸಾರ್ ಧನ್ಯವಾದಗಳು,… ನಿಮ್ಮ ಗೆಳೆಯ ಅಂಜಿನಪ್ಪಲೋಕಿಕೆರೆ.