ಬೆಂಗಳೂರು. ಮೇ-15: ಅಖಿಲ ಭಾರತ ಅಸಂಘಟಿತ ರೋಹಿತ ಕಾರ್ಮಿಕರ ಫೆಡರೇಶನ್ನಿಗೆ ನೂತನ ರಾಜ್ಯ ಸಮಿತಿಯನ್ನು ಫೆಡರೇಶನ್ನಿನ ರಾಜ್ಯ ಅಧ್ಯಕ್ಷ ಡಾ. ಜೋಯಿಸ್ ಶ್ರೀನಿವಾಸ ಮೂರ್ತಿ ಬುಧವಾರ ಬನ್ನೇರುಘಟ್ಟ ಅರಕೆರೆಯ ಜೈ ಸಂತೋಷಿ ಮಾತಾ ದೇವಸ್ಥಾನದಲ್ಲಿ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ರಾಷ್ಟ್ರೀಯ ಅಧ್ಯಕ್ಷರು ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಿ ರಾಜ್ಯ ಪದಾಧಿಕಾರಿಗಳನ್ನು ಆಯ್ಕೆ ಮಾಡುವಂತೆ ಆದೇಶ ಹೊರಡಿಸಿದ್ದರು ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಪ್ರವಾಸ ಮಾಡಿ ಸಂಘಟನೆಯನ್ನು ಬಲಪಡಿಸಲು ಸಮಯಾವಕಾಶ ನೀಡಿ ಉತ್ತಮ ಕೆಲಸ ಮಾಡುವ ಅನೇಕರಿಗೆ ಜವಾಬ್ದಾರಿಗಳನ್ನು ನೀಡಿ ರಾಜ್ಯ ಸಮಿತಿಗೆ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ.
ರಾಜ್ಯ ಸಮಿತಿಯ ಪದಾಧಿಕಾರಿಗಳು:
ಹರೀಶ್ ಜಿ ರಾಜ್ಯ ಗೌರವಾಧ್ಯಕ್ಷ., ವೆಂಕಟರಮಣ ಜೆ ಎಸ್ .ರಾಜ್ಯ ಆಡಳಿತಾಧಿಕಾರಿ, ಶ್ರೀನಿವಾಸ ಆರ್. ರಾಜ್ಯ ನಿರ್ದೇಶಕ, ಸತೀಶ್ ಹೆಚ್.ಎಸ್ ರಾಜ್ಯ ಕಾರ್ಯಕಾರಿ ಅಧ್ಯಕ್ಷ, ಗೋಪಾಲಕೃಷ್ಣ ರಾಜ್ಯ ಉಪಾಧ್ಯಕ್ಷ, ಫಣೀಂದ್ರ ಕುಮಾರ್ ಹೆಚ್ ಜೆ ರಾಜ್ಯ ಜಂಟಿ ಕಾರ್ಯದರ್ಶಿ ಖಣೇಂದ್ರ ರಾವ್ ಕೆ. ರಾಜ್ಯ ಜಂಟಿ ಕಾರ್ಯದರ್ಶಿ, ಶ್ಯಾಮ ಸುಂದರ ಜೋಯಿಸ್
ರಾಜ್ಯ ಕೋಶಾಧ್ಯಕ್ಷ. ಅರವಿಂದ ಸಗರದ
ಕಲ್ಯಾಣ ಕರ್ನಾಟಕ ಇನ್ ಚಾರ್ಜ್ ಕಾರ್ಯದರ್ಶಿ
ಪ್ರಹಲ್ಲಾದ.ಕೆ ರಾಜ್ಯ ಸಾಮಾನ್ಯ ಕಾರ್ಯದರ್ಶಿ
ಕೇಶವ ಶರ್ಮಾ ಬೆಂಗಳೂರು ಇನ್ ಚಾರ್ಜ್ ಕಾರ್ಯದರ್ಶಿ. ಇವರುಗಳನ್ನು ಆಯ್ಕೆ ಮಾಡಿದ್ದು ಎಲ್ಲರೂ ಸಂಘವನ್ನು ಬಲಪಡಿಸಲು ತಮ್ಮ ಕಾರ್ಯ ನಿಭಾಯಿಸುವಂತೆ ಅವರು ತಿಳಿಸಿದ್ದಾರೆ.