ದಾವಣಗೆರೆ:, ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಕುತೂಹಲ ಮೂಡಿಸಿದ ಕ್ಷೇತ್ರ ಎಂದರೆ ಬೆಣ್ಣೆ ನಗರಿ ದಾವಣಗೆರೆ ಹೌದು ,1991ರವರೆಗೆ ಅಹಿಂದ ನಾಯಕರ ಗುರುಗಳೆಂದು ಇಡೀ ದೇಶದಲ್ಲಿ ಗಮನ ಸೆಳೆದ ಶ್ರೀ ಚನ್ನಯ್ಯ ಒಡೆಯರ್ ನಂತರ ದಾವಣಗೆರೆ ಲೋಕಸಭಾ ಕ್ಷೇತ್ರ ಅಳಿಯ,ಮಾವ ಎಂದು ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಬಂದರೆ ವಿನಃ ಕ್ಷೇತ್ರ ಅಭಿವೃದ್ಧಿ ಕಾಣಲಿಲ್ಲ ಕೇವಲ ಇವರ ಯೋಜಯ ಸಾಧನೆಗಳು ದಾವಣಗೆರೆ ನಗರಕ್ಕೆ ಸೀಮಿತವಾದವೆ ಹೊರತು ಕ್ಷೇತ್ರದಲ್ಲಿನ ಹರಿಹರ,ಜಗಳೂರು,ಹರಪನಹಳ್ಳಿ, ಚನ್ನಗಿರಿ,ಹೊನ್ನಾಳಿ ಹಾಗೂ ಮಾಯಕೊಂಡದಂತಹ ವಿಧಾನಸಭಾ ಕ್ಷೇತ್ರಗಳ ಗ್ರಾಮಗಳಲ್ಲಿ ಅಭಿವೃದ್ಧಿ ಶೂನ್ಯ ಆದರೆ,ದಾವಣಗೆರೆಯ ಯಾವ ಮೂಲೆಗಳಲ್ಲಿ ಹೋದರು ಎಸ್ ಎಸ್- ಎಸ್ ಎಸ್ ಎಂದು,ಜಿ ಎಂ ಎಸ್ ,ಜಿ ಎಂ ಎಸ್ ಬೋರ್ಡ್ ಗಳು ಇವರ ಪೋಟೋಗಳು ಕಾಣುತ್ತವೆ ಆದರೆ,ಗ್ರಾಮಗಳ ಉದ್ಧಾರವಂತು ಆಗಲಿಲ್ಲ. ಮತ್ತೊಂದು ಕಡೆ ಈ ಲೋಕಸಭಾ ಕ್ಷೇತ್ರದಲ್ಲಿ ಕುರುಬ,ನಾಯಕ,ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ,ಮುಸ್ಲಿಂ ಹಾಗೂ ಇತರೆ ಸಮೂದಯಗಳಿದ್ದರೂ ಆ ಸಮುದಾಯಗಳಿಗೆ ರಾಜಕೀಯವಾಗಿ,ಸಾಮಾಜಿಕ ವಾಗಿ,ಆರ್ಥಿಕವಾಗಿ ಸೌಲಭ್ಯಗಳಿಲ್ಲ.ಕೇವಲ ತಮ್ಮ ಸ್ವಾರ್ಥಕ್ಕಾಗಿ ತಮ್ಮಗಳ ಆಸ್ತಿಯ ಉಳಿವಿಗಾಗಿ ಇವರು ಜನಪ್ರತಿನಿದಿಗಳಾದರೆ ಹೊರತು ಕ್ಷೇತ್ರದ ಜನರ ಉದ್ಧಾರ ಮಾಡಲಿಲ್ಲ.ಇಂತಹ ಸರ್ವಾಧಿಕಾರಿ ನಡೆಯ ವಿರುದ್ಧ ದನಿ ಎತ್ತಿ ಜನರ ಸಮಸ್ಯೆಗಳನ್ನು ತಿಳಿದುಕೊಳ್ಳಲು ಕಾಲ್ನಡಿಗೆ ಮೂಲಕ ಹಲವಾರು ಕಾರ್ಯಕ್ರಮಗಳ ಮೂಲಕ ಜನರಿಗೆ ಸ್ಪಂದಿಸಿ ಜನಮನಗಳಿಸಿ ಜನರ ಮನಸ್ಸಲ್ಲಿ ಪ್ರೀತಿಯ ಗಾಳಿ ಬೀಸಿ ಕ್ಷೇತ್ರದ ಮತದಾರರುಗಳ ಒತ್ತಾಯಕ್ಕೆ ಅವರ ಆಶಯ ಮತ್ತು ಭರವಸೆಗಳ ಮಹಾಪೂರಕ್ಕೆ ಈವತ್ತು ತಲೆಬಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಜಿ.ಬಿ.ವಿನಯ್ ಕುಮಾರ್ ರವರು ಯಾವುದೇ ವ್ಯಕ್ತಿಯ ವಿರುದ್ಧವಲ್ಲಾ,ಯಾವುದೇ ಜಾತಿಯ ವಿರುದ್ಧವಲ್ಲಾ,ಯಾವುದೇ ಪಕ್ಷಗಳ ವಿರುದ್ಧವಲ್ಲಾ ಹಾಗೂ ಯಾವುದೇ ಮಠಗಳ ವಿರುದ್ಧವಲ್ಲಾ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ.ಈವತ್ತು ಎಲ್ಲೆಂದರಲ್ಲಿ ನಡೆಯುತ್ತಿರುವ ಜಾತಿಶೋಷಣೆ,ತಾರತಮ್ಯ, ದೌರ್ಜನ್ಯ ,ಅಸಮಾನತೆ ಹಾಗೂ ರಾಜಕೀಯ ಕಪಿಮುಷ್ಟಿಯೊಳಗಿನ ವ್ಯವಸ್ಥೆಗಳ ವಿರುದ್ಧ ಸ್ಪರ್ಧೆ ಎಂಬುದನ್ನು ನಾವು ಮನಗಂಡು ಅವರನ್ನು ಬೆಂಬಲಿಸುವ ಅನಿವಾರ್ಯತೆ ಈ ಕ್ಷೇತ್ರದ ಮತದಾರರುಗಳಿಗಿದೆ ಈ ಅಸಮಾನತೆಯುಳ್ಳ ರಾಜಕೀಯ ವ್ಯವಸ್ಥೆಯನ್ನು ಹುಟ್ಟುಹಾಕಿರುವ ಜಾತಿ ವ್ಯವಸ್ಥೆ ಹೋಗಲಾಡಿಸಿ ಮನುಷ್ಯರೆಲ್ಲರೂ ಸಮಾನರು ಎಂಬ ಪರಿಕಲ್ಪನೆ ಬೆಳಸಿಕೊಳ್ಳಲು ಈವತ್ತು ಅಹಿಂದ ಸಮಾಜ ಒಂದಾಗಬೇಕಿದೆ ಈ ಲೋಕಸಭಾ ಚುನಾವಣೆ ಇಡೀ ಕ್ಷೇತ್ರದ ಅಹಿಂದ ಸಮುದಾಯಗಳಿಗೆ ಸವಾಲಾಗಿದೆ ಈ ಸವಾಲನ್ನು ಒಗ್ಗಟ್ಟಾಗಿ ಸ್ವೀಕರಿಸಿ ಹೋರಾಟ ಮಾಡದಿದ್ದರೆ ಪುನಃ ನಾವು ಗುಲಾಮರಾಗಿ ಬದುಕುವ ಪರಿಸ್ಥಿತಿಯನ್ನು ಅನುಭವಿಸಬೇಕಾಗುತ್ತದೆ ಬಂಧುಗಳೆ, ಈ ನೆಲದಲ್ಲಿ ನಿಜವಾದ ಸ್ವಾತಂತ್ರ್ಯ- ಸಮಾನತೆ- ಭ್ರಾತೃತ್ವಗಳು ನೆಲೆಗೊಳ್ಳಬೇಕಾದರೆ ಜಾತಿ ವಿನಾಶವಾಗಬೇಕು ಮತ್ತು ಪ್ರಭುತ್ವವೇ ಸಮಾಜವಾದವನ್ನು ಜಾರಿ ಮಾಡಬೇಕೆ ಹೊರತು ಲಾಭಕ್ಕಾಗಿ ಉದ್ಯಮಗಳನ್ನು ಮಾಡುವ ಖಾಸಗಿ ಬಂಡವಾಳಶಾಹಿಗಳು ಎಂದಿಗೂ ಈ ಆರ್ಥಿಕ ಮತ್ತು ಸಮಾನತೆ ನ್ಯಾಯವನ್ನು ಮಾಡಲಾರರು ಎಂದು ಸ್ಪಷ್ಟವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಹೇಳಿದ್ದಾರೆ ಈ ಮಾತುಗಳನ್ನು ಅರ್ಥ ಮಾಡಿಕೊಂಡು ಸರ್ವರೂ ಒಗ್ಗಟ್ಟಾಗಿ ಹೋರಾಟ ಮಾಡಿ ಅಹಿಂದ ನಾಯಕ ಜಿ.ಬಿ.ವಿನಯ್ ಕುಮಾರ್ ರವರನ್ನು ಬೆಂಬಲಿಸಿ ಉಳಿಸಿಕೊಳ್ಳುವ ಅನಿವಾರ್ಯತೆ ಅಹಿಂದ ಬಂಧುಗಳಿಗಿದೆ ಈ ಕಾರಣಕ್ಕಾಗಿ, ಮತದಾರರಿಗೆ ವಾಸ್ತವ ಸಂಗತಿಗಳನ್ನು ತಿಳಿಸಿ ಜಾಗೃತಿ ಮೂಡಿಸಿ,ಕಡ್ಡಾಯವಾಗಿ ಎಲ್ಲರೂ ಮತದಾನದಲ್ಲಿ ಭಾಗಿಯಾಗುವಂತೆ ಮಾಡಬೇಕಿದೆ ಏನೇ ಮಾಡಿದರೂ ಯಾರ ಮೇಲೂ ದ್ವೇಷ ಮಾಡದೆ ಪ್ರೀತಿಯಿಂದ ಸರ್ವಾಧಿಕಾರ ಧೋರಣೆಯನ್ನು ಪ್ರೀತಿಯ ತಾಕತ್ತಿನಿಂದ ಛಿದ್ರಗೊಳಿಸಲು ಸಾಧ್ಯವಿದೆ. ಬಂಧಗಳೇ , ” ಹೇಳಿ ಎದ್ದೇಳಿ ಜಾಗೃತರಾಗಿ ಸಮಾಸಮಾಜ ಕಟ್ಟುವ ಕನಸ್ಸು- ಮನಸ್ಸು ನಿಮ್ಮ ಕೈಲಿದೆ “….ನಿಮ್ಮ ಸಂಗಾತಿ ಅಂಜಿನಪ್ಪಲೋಕಿಕೆರೆ.