ನನ್ನ ಬಗ್ಗೆ ಹೇಳು ಬೇಕು ಎಂದರೆ. ನಾನು ಯಾವುದೇ ಪಕ್ಷದ ಕಾರ್ಯಕರ್ತನಲ್ಲ, ನಾನು ಈಗ ಮೋದಿ ಸರ್ಕಾರವನ್ನು ವಿರೋದಿಸುವುದು ಕಾರಣ ಏನೆಂದರೆ ಸಂವಿಧಾನ ವಿರೋದಿ ನಡೆಯನ್ನು ನಡೆದುಕೊಳ್ಳುವ ಕಾರಣ ಹಾಗೂ ಜನ ಸಾಮಾನ್ಯರ ಸಮಸ್ಯೆಗಳ ರೈತರ ಬಗ್ಗೆ ಕಾರ್ಮಿಕರ ಸಮಸ್ಯೆಗಳನ್ನು ನಿವಾರಣೆ ಮಾಡುವ ಬದಲು ಬಂಡವಾಳ ಶಾಹಿಗಳ ಪರ ಕಾ ಪೊರೆಟ್ ಪರ ಇರುವುದು ಕಂಡು ಬರುತ್ತಿದೆ. ಭ್ರಷ್ಯಾ ಚಾರದಲ್ಲೂ ಕಾಂಗ್ರೇಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ ಮಾಡಿದ ಆ ವ್ಯಹಾರಕ್ಕಿಂತ ಹೆಚ್ಚಾಗಿ ಮಾಡಿದೆ. ಕಾಂಗ್ರೇಸ್ ತನ್ನ ಆಡಳಿತಾವಧಿಯಲ್ಲಿಮಾಡಿದ ತಪ್ಪುಗಳ ಕಾರಣ ಮತದಾರರು ಬುದ್ದಿ ಕಲಿಸಿದರು. ಈಗ ಮಾಡುತ್ತಿರುವ ಕೇಂದ್ರ ಸರ್ಕಾರ ಮಾಡುತ್ತಿರುವ ತಪ್ಪುಗಳಿಗೆ ಮತದಾರರು ಏಕೆ ಶಿಕ್ಷೆ ನೀಡಬಾರದು. ? ಯಾವುದೇ ಪಕ್ಷ ಆಡಳಿತಾವದಿಯಲ್ಲಿ ತಪ್ಪುಗಳು ಮಾಡಿದ ದಾಗ ಮತದಾರರು ತಿರಸ್ಕರಿಸದೆ ಹೋದರೆ ಆಡಳಿತ ಮಾಡುವ ಪ್ರಧಾನಿ ಸರ್ವಾಧಿಕಾರಿಯಾಗಿ ಮುಂದೆ ತನ್ನ ಆಸ್ತಿತ್ವವನ್ನು ಉಳಿಸಿಕೊಳ್ಳಲು ತನ್ನಗೆ ಬೇಕಾದ ರೀತಿಯಲ್ಲಿ ಸಂವಿ ಧಾನ್ಮಾಕ ಸಂಸ್ಥೆಗಳನ್ನು ದುರಪಯೊಗ ಮಾಡಿಕೊಳ್ಳುವ ಸಾಧ್ಯತೆ ಇದೆ.
ಹಿಂದೆ ಇಂದಿರಾ ಗಾಂಧಿ ನಡೆದಕೊಂಡ ಕೆಲವು ನಡೆಗೆ ಆಗ ಇಡೀ ದೇಶದಲ್ಲಿ ಅಂದೊಲನ ರೂಪದಲ್ಲಿ ವಿರೋದಿಸಿದ್ದು ಇದೆ. ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಿ ಇಂದಿರಾ ಗಾಂಧಿಯನ್ನು ಮಣಿಸುವ ಪ್ರಯತ್ನ ನಡೆಯುತ್ತು. ಇದು ಸಹಾ ಅಂದಿನ ಕಾಲಕ್ಕೆ ಹೋರಾಟ ಮಾಡಿದು ಸರಿ. ಈಗಲೂ ಅಷ್ಟೆ ಮೋದಿ ಸರ್ವಾಧಿಕಾರಿ ಆಗುವುದನ್ನು ತಪ್ಪಿಸಲು ಪ್ರಜ್ಞಾವಂತರು ಜಾಗೃತಿ ಮೂಡಿಸಬೇಕಾಗಿದೆ.
ರಾಜ್ಯ ಸರ್ಕಾರ ಮಾಡುವ ತಪ್ಪುಗಳುನ್ನು ವಿರೋದಿ ಸೊಣ್ಣ. ಮೇಕೆದಾಟು ನೀರಾವಾರಿ ಯೋಜನೆ ವಿಷಯವಾಗಿ ವಿರೋದ ಪಕ್ಷದಲ್ಲಿ ಇದ್ದ ಶಿವಕುಮಾರ್ ಸಿದ್ದರಾಮಯ್ಯ ಮಾಡಿದ ಹೋರಾಟವನ್ನು ಅಧಿಕಾರಕ್ಕೆ ಬಂದ ಮೇಲೆ ತಟಸ್ಥರಾಗಿ ಇರುವುದನ್ನು ವಿರೋದಿಸಬೇಕಾಗಿದೆ. ಅದೇ ರೀತಿ ಹಿಂದಿನ ಅವಧಿ ಮುಖ್ಯಮಂತ್ರಿ ಆಗಿದ್ದ ಸಿದ್ದಾರಾಮಯ್ನವರು ಲೋಕಾಯುಕ್ತ ದುರ್ಬಲಗೊಳಿಸಿ A.C.B. ಮಾಡಿದಾಗಲೂ ವಿರೋದಿಸಿದ್ದೇನೆ. ಈಗಲೂ ಲೋಕಾಯುಕ್ತವನ್ನು ಬಲವರ್ಧನೆ ಮಾಡಬೇಕಾಗಿದೆ ಇದನ್ನು ರಾಜ್ಯ ಸರ್ಕಾರ ದುರ್ಬಲಗೊಳಿಸುವುದನ್ನು ವಿರೋದಿಸುತ್ತೇನೆ ಹಾಗೂ ಮತಾಂದತೆಯನ್ನು ಹಾಗೂ ಉಗ್ರರಿಗೆ ಮೃದು ದೋರಣೆ ಅನುಸರಿದರೆ ಇದನ್ನು ವಿರೋದಿಸುತ್ತೇನೆ.
ಇತ್ತೀಚಿಗೆ ರಾಜ್ಯದಲ್ಲಿ ಪಾಕ್ತಿಸ್ತಾನ ಜಿಂದಾಬಾದ್ ಹಾಗೂ ಬಾಂಬ್ ಸ್ಪೋಟ್ ವಿಷಯದಲ್ಲಿ ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡಲು ಪ್ರಯತ್ನಸದೇ ಪ್ರಾಮಾಣಿಕತನಿಖೆಗೆ ಒಪ್ಪಿಸಿರುವುದು ಒಪ್ಪತಕ್ಕ ಕ್ರಮ ಆಗಿದೆ. ಇದರಲ್ಲಿ ತಪ್ಪು ನಡೆ ನಡೆದುಕೊಂಡಿದರೆ ನಾನು ವಿರೋದಿಸುತ್ತದೆ.
ಜನಸಾಮಾನ್ಯರಿಗೆ ರೈತರಿಗೆ ಕಾರ್ಮಿಕರಿಗೆ ವಿರೋಧಿ ನಿಲುವುಗಳನ್ನು ಯಾವುದೇ ಸರ್ಕಾರ ನಡೆದುಕೊಂಡರೆ ಮತದಾರರು ವಿರೋದಿಸಬೇಕು ಹಾಗೂ ಚುನಾವಣೆ ಸಂಧರ್ಭದಲ್ಲಿ ಮತದಾರರು ಬುದ್ದಿ ಕಲಿಸಿವುದು ಅನಿವಾರ್ಯ ಸಹಾ ಆಗಿದೆ. ಅದೇ ರೀತಿ ಸಂವಿಧಾನ ವಿರೋಧಿ ನಡೆಯನ್ನು ಯಾರೇ ನಡೆದುಕೊಂಡರು ಅವರನ್ನು ತಿರಸ್ಕಾರ ಮಾಡಬೇಕಾಗಿದೆ. ನಮಗೆ ಬೇಕಾಗಿರುವುದು ಅಂಬೇಡ್ಕರ್ ಬರೆದ ಸಂವಿಧಾನ ಬೇಕೆ ಹೊರತು. ಮನು ಸಿದ್ಧಾಂತ ಅಲ್ಲಾ ಮನು ಸಿದ್ಧಾಂತ ಹೇರಿಕೆ ಮಾಡುವ ಪಕ್ಷಗಳನ್ನು ನಾಯಕರನ್ನು ತಿರಸ್ಕಾರ ಮಾಡಬೇಕಾಗಿದೆ. ದೇಶದ 97% ಜನರು ಅಂಬೇಡ್ಕರ ಸಿದ್ಧಾಂತದಿಂದ ಉಸಿರು ಆಡುವಂತೆ ಆಗಿದೆ. ಎಂಬುದನ್ನು ಅರ್ಥ ಮಾಡಿಕೊಂಡಾಗ ಮಾತ್ರ ನಮ್ಮ ಉಳಿವು ಸಾಧ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಯಾವುದೇ ಸರ್ಕಾರ ತಪ್ಪುಗಳನ್ನು ಮಾಡಿದಾಗ ವಿರೋದಿಸುವುದು ಸಹಾ ನಮ್ಮ ಕರ್ತವ್ಯ ಆಗಿದೆ.
(N.S. ಈಶ್ವರಪ್ರಸಾದ್.)