ಬಾಗಲಕೊಟೆ ಕ್ಷೇತ್ರದ ಟಿಕೆಟ್ ಬದಲಾವಣೆ ಮಾಡಲ್ಲ.. ವೀಣಾ ಕಾಶಪ್ಪನವರ್ ಮತ್ತು ಬೆಂಬಲಿಗರಿಗೆ ಸಿಎಂ ಸ್ಪಷ್ಟ ಸಂದೇಶ.. ತಮ್ಮನ್ನು ಭೇಟಿಯಾದ ವೀಣಾ ಕಾಶಪ್ಪನವರ್ ಬೆಂಬಲಿಗರಿಗೆ ಖಡಕ್ ಆಗಿ ಹೇಳಿದ ಸಿಎಂ..!

ನಿಮಗೆ ಟಿಕೆಟ್ ಕೊಡುವಂತೆ ಯಾವುದೇ ಜಿಲ್ಲಾ ನಾಯಕರು ಹೇಳಿಲ್ಲ.. ಜಿಲ್ಲೆಯಲ್ಲಿನ ಸಮಸ್ಯೆ ಪರಿಹಾರ ಮಾಡಿಕೊಳ್ಳುವಂತೆ ಮೊದಲೇ ಹೇಳಿದ್ದೆ.. ಶಾಸಕ ವಿಜಯಾನಂದ ಕಾಶಪ್ಪನವರ್ ಅವರಿಗೆ ಹೇಳಿದ ಸಿಎಂ ಸಿದ್ಧರಾಮಯ್ಯ..

ಲೋಕಸಭಾ ಕ್ಷೇತ್ರ ಉಸ್ತುವಾರಿ ಪ್ರಿಯಾಂಕಾ ಖರ್ಗೆಯಿಂದಲೂ ವೀಣಾ ಹೆಸರು ಪ್ರಸ್ತಾಪವಾಗಿಲ್ಲ.. ಸಂಯುಕ್ತಾ ಪಾಟೀಲ್ ಪಕ್ಷದ ಕೆಲಸ ಮಾಡಿದ್ದಾರೆ.. ಜಿಲ್ಲೆಯ ಐದು ನಾಯಕರು ವೀಣಾ ಹೆಸರು ಹೇಳಲೇ ಇಲ್ಲ.. ಈಗ ಯಾವುದೇ ಕಾರಣಕ್ಕೂ ಅಭ್ಯರ್ಥಿ ಬದಲಾವಣೆ ಮಾಡೋದಿಲ್ಲ.. ಬೇರೆ ಎನಾದರೂ ಇದ್ದರೆ ಹೇಳಿ ಎಂದು ಖಡಕ್ ಆಗಿಯೇ ಹೇಳಿದ ಸಿಎಂ ಸಿದ್ಧರಾಮಯ್ಯ.. ಹೊರಗಿನವರಿಗೆ ಯಾಕೆ ಟಿಕೆಟ್ ಕೊಟ್ರಿ ಅಂತ ಪ್ರಶ್ನಿಸಿದ ಬೆಂಬಲಿಗರಿಗೆ ಸಿಎಂ ತಿರುಗೇಟು..

ನಾನು ಮೈಸೂರಿನಿಂದ ಬಂದು ಬಾದಾಮಿಯಲ್ಲಿ ಸ್ಪರ್ಧೆ ಮಾಡಿರಲಿಲ್ಲವೇ..? ನನ್ನನ್ನು ನೀವು ಆಯ್ಕೆ ಮಾಡಿಲ್ವಾ..? ಬಾದಾಮಿಯವರು ಆಯ್ಕೆ ಮಾಡಿರಲಿಲ್ಲವಾ..? ಹೊರಗಿನವರು ಅನ್ನೋದನ್ನು ಬಿಟ್ಟು ಬೇರೆ ಏನಾದರೂ ಇದ್ರೆ ಹೇಳಿ ಎಂದ ಸಿಎಂ.. ಮುಂದಿನ ದಿನಗಳಲ್ಲಿ ರಾಜಕೀಯ ಅಧಿಕಾರ ನೀಡುತ್ತೇನೆ ಎಂದು ಭರವಸೆ ಕೊಟ್ಟ ಸಿಎಂ..

ಆದರೆ ಯಾವುದೇ ನಿರ್ದಿಷ್ಟ ಹುದ್ದೆ ಅಂತ ಹೇಳಲಾರೆ ಎಂದು ಸಮಜಾಯಿಸಿ ಕೊಟ್ಟ ಸಿದ್ಧರಾಮಯ್ಯ.. ಸಿಎಂ ಉತ್ತರದಿಂದ ಸ್ಥಳದಲ್ಲಿ ಕಣ್ಣಿರು ಹಾಕಿದ ವೀಣಾ ಕಾಶಪ್ಪನವರ್.. ಅಳುತ್ತಲೇ ಸಭೆಯಿಂದ ಹೊರನಡೆದ ವೀಣಾ ಕಾಶಪ್ಪನವರ್.. ಸಮಾಧಾನ ಮಾಡುವ ಪ್ರಯತ್ನ ಮಾಡಿದ ಬೆಂಬಲಿಗರು..!

LEAVE A REPLY

Please enter your comment!
Please enter your name here