ಕೃಷ್ಣಾ ಮೇಲ್ದಂಡೆ ಯೋಜನೆಯ ನಾರಾಯಣಪೂರ ಆಣೆಕಟ್ಟೆಯ ಹಿನ್ನೀರಿನಲ್ಳಿ ಮುಳುಗಡೆಯಾದ ಗ್ರಾಮದ ರೈತರುಗಳಿಗೆ ದಶಕಗಳು ಕಳೆದುಹೋದರು ಸರಿಯಾದ ಪರಿಹಾರ ವದಗಿಸದ ದರಿದ್ರ ಸರ್ಕಾರಗಳ ಮತ್ತು ಜನಪ್ರತಿನಿಧಿಗಳ ಜನವಿರೋಧಿ ನೀತಿಯನ್ನು ಅಖಿಲ ಕರ್ನಾಟಕ ರಾಜ್ಯ ರೈತ ಸಂಘ ಬಾಗಲಕೋಟ ಜಿಲ್ಲಾಧ್ಯಕ್ಷರಾದ ಶ್ರೀ ನಾಗರಾಜ ಭೀಮಪ್ಪ ಹೂಗಾರ ಖಂಡಿಸಿದ್ದಾರೆ.ಸಂಘದ ರಾಜ್ಯ ಅಧ್ಯಕ್ಷರಾದ ಶ್ರೀ ಹನುಮಂತಪ್ಪ ದಿವಿಗಿಹಳ್ಳಿಯವರು ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಈ ಭಾಗದ ರೈತರ ಕಣ್ಣೀರ ಪರಿಸ್ಥಿತಿಯನ್ನು ಸರ್ಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಹರಿಹಾಯ್ದರು. ಈ ಬೇಡಿಕೆಗಳಿಗೆ ಸರ್ಕಾರ ಮತ್ತು ಸಂಭಂದಿಸಿದವರಿಗೆ ಪತ್ರಿಕಾ ಘೋಷ್ಠಿ ಮುಖಾಂತರ ವಿಶ್ರಾಂತ ನ್ಯಾಯಮೂರ್ತಿ ಶ್ರೀ ಸಂತೋಷಹೆಗಡೆಯವರು ನ್ಯಾಯಾಲಯದಲ್ಲಿರುವ ಕೇಸುಗಳಿಗೆ ಕಾನೂನಾತ್ಮಕ ಸಹಕಾರ ನೀಡಿ ತ್ವರಿತವಾಗಿ ಇತ್ಯರ್ಥವಾಗಿಸಲು ಸಲಹೆ ನೀಡಬೇಕೆಂದು ವಿನಂತಿಸಿಕೊoಡೆದ್ದಾರೆ.

೧) ಕೃಷ್ಣಾ ಮೇಲ್ದಂಡೆ ಯೋಜನೆಯ ನಾರಾಯಣಪೂರ ಹಾಗೂ ಆಲಮಟ್ಟಿ ಎಡದಂಡೆ ಹಾಗೂ ಬಲದಂಡೆ ಡ್ಯಾಮಿನ ಹಿನ್ನೀರಿನಲ್ಲಿ ೧೯೭೯
ರಲ್ಲಿ ಸಾಕಷ್ಟು ಜಮೀನುಗಳು ಮುಳುಗಡೆಯಾಗಿ ಹೋಗಿದ್ದು ಇನ್ನುವರೆಗಾದರೂ ಕೂಡಾ ಮುಳುಗಡೆಯಾದ ಜಮೀನುಗಳಿಗೆ ಪರಿಹಾರ ಧನ ದೊರಕಿರುವುದಿಲ್ಲ.

ಹುನಗುಂದ ನ್ಯಾಯಾಲಯದಲ್ಲಿ ಎಲ್.ಎ.ಸಿ. ಕೇಸ್ ಹಾಗೂ ಬಾಗಲಕೋಟ ಜಿಲ್ಲಾ ನ್ಯಾಯಾಲಯದಲ್ಲಿ ಕೃಷ್ಣಾ ಮೇಲ್ದಂಡೆ
ಯೋಜನೆಯ ವಿಶೇಷ ಭೂಸ್ವಾಧೀನ ಅಧಿಕಾರಿಗಳು ಇಲಕಲ್ಲ ಹಾಗೂ ಬಾಗಲಕೋಟ ಯು.ಕೆ.ಪಿ. ಅಧಿಕಾರಿಗಳು
ಸ್ವಾಧೀನಪಡಿಸಿಕೊಂಡ ಜಮೀನುಗಳನ್ನು ನ್ಯಾಯಾಲಯದಲ್ಲಿ ದಾವೆ ಹಾಕಿದ್ದು, ಇಲ್ಲಿಯವರೆಗೂ ಕೂಡಾ ಒಂದೂ
ಆದೇಶವಾಗಿರುವುದಿಲ್ಲ. ರಾಜ್ಯದಲ್ಲಿ ವಿಪರೀತ ಬರಗಾಲ ಇರುವುದರಿಂದ ೬೯೨ ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಅದರಲ್ಲಿ ನಮ್ಮ
ಜಿಲ್ಲೆಯಲ್ಲಿ ೧೧ ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಷ್ಟೆಲ್ಲಾ ಆದರೂ ಕೂಡಾ ಇನ್ನುವರೆಗಾದರೂ ಒಂದೂ ಎಲ್.ಎ.ಸಿ. ಕೇಸ್
ಹಾಗೂ ಎಲ್.ಎ.ಸಿ. ಅಪೀಲು ನ್ಯಾಯಾಲಯದಲ್ಲಿ ಆದೇಶವಾಗಿರುವುದಿಲ್ಲ. ಆದಕಾರಣ ನಾವು ಅಖಿಲ ರ‍್ನಾಟಕ ಸಂಘ ಬಾಗಲಕೋಟ ರೈತರು
ಗೌರವಾನ್ವಿತ ಮಾನ್ಯಶ್ರೀ ಸಂತೋಷ ಹೆಗಡೆಯವರು ಹೈಕರ‍್ಟ್ ವಿಶ್ರಾಂತ ನ್ಯಾಯಮರ‍್ತಿಗಳು ಬೆಂಗಳೂರು ಇವರಿಗೆ
ನಾವೆಲ್ಲರೂ ಕೂಡಾ ಮನವಿ ಮಾಡಿಕೊಳ್ಳುವುದೇನೆಂದರೆ, ಆದಷ್ಟು ಬೇಗನೇ ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ಥರ ಜಮೀನುಗಳಿಗೆ ಆದೇಶ ಮಾಡಿಸಬೇಕೆಂದು ತಮ್ಮಲ್ಲಿ ವಿನಂತಿ ಮನವಿ.

೨) ರೈತನ ಬಗ್ಗೆ ಮಲತಾಯಿ ಧೋರಣೆ ಹೊಂದಿರುವ ಸರಕಾರವನ್ನು ಹತೋಟಿಗೆ ತೆಗೆದುಕೊಳ್ಳುವ
ಮರ‍್ಗಗಳನ್ನು, ಕಿರುಕುಳ ಕೊಡುತ್ತಿರುವ ಅಧಿಕಾರಿಗಳನ್ನು ನಿಯಂತ್ರಿಸುವ ಮರ‍್ಗಗಳನ್ನು ಮತ್ತು
ಬೇನಾಮಿ ಕ್ಷೇತ್ರಗಳನ್ನು ದರೋಡೆ ಮಾಡುತ್ತಿರುವ ಅಧಿಕಾರಿಗಳನ್ನು ಹಾಗೂ ಕೈಗಾರಿಕಾ &ಚಿmಠಿ; ವಾಣಿಜ್ಯ
ಕ್ಷೇತ್ರಗಳನ್ನು ನಿಯಂತ್ರಿಸುವ ಮರ‍್ಗಗಳನ್ನು ರೈತರು ಈ ಹೋರಾಟಗಳನ್ನು ಕಂಡುಕೊಳ್ಳಬೇಕಾಗಿದೆ.
ಬೇರೆಲ್ಲಾ ಕ್ಷೇತ್ರಗಳೊಂದಿಗೆ ಸಮನ್ವಯ ಸ್ಥಾಪಿಸಿಕೊಳ್ಳುವ ಸಲುವಾಗಿ ಈ ಪತ್ರಿಕಾ ಗೋಷ್ಠಿ.
೩) ಸರಕಾರ ಮಾಡಿದ ಕೆಟ್ಟ ಕೆಲಸಗಳನ್ನು ಸರಕಾರವೇ ರದ್ದು ಮಾಡಬೇಕು. ರೈತನ ಮೇಲೆ ಹೊರಿಸಿರುವ ಸಾಲಗಳನ್ನು
ಸರಕಾರವೇ ತೀರಿಸಬೇಕು. ರೈತರ ಎಲ್ಲಾ ಸಾಲ ಮತ್ತು ಕಂದಾಯದ ಬಾಕಿಗಳನ್ನು ಸರಕಾರವೇ ತೀರಿಸಬೇಕು.

೪) ಇಷ್ಟು ದಿವಸ ನಡೆದ ಕೇಂದ್ರ ಸರಕಾರದಲ್ಲಿ ರೈತ ವಿರೋಧಿ ಜಿ.ಎಸ್.ಟಿ. ಹಾಗೂ ಎಲ್ಲಾ ತೆರಿಗೆ ಬಾಕಿಗಳು ರದ್ದಾಗಬೇಕು. ಮತ್ತು
ರೈತ ಸಾಲಗಾರನಾಗದಂತೆ ಅವನ ಬೆಳೆಗಳಿಗೆ ನ್ಯಾಯವಾದ ಬೆಲೆ ಸಿಗಬೇಕು. ಅನ್ಯಾಯದ ತೆರಿಗೆಗಳು ಹಾಗೂ ರೈತರು,
ಕೂಲಿಕರ‍್ಮಿಕರು, ಬಡವರನ್ನು ಕೊಲ್ಲುತ್ತಿರುವ ಜಿ.ಎಸ್.ಟಿ. ಹಾಗೂ ತೆರಿಗೆಗಳನ್ನು ತೆಗೆದು ಹಾಕಬೇಕು.
೫) ರಾಜ್ಯದ ಸರಕಾರಿ ನೌಕರಸ್ಥರು ಅವರೂ ಕೂಡಾ ರೈತರ ಮಕ್ಕಳು, ಕೂಲಿ ಕರ‍್ಮಿಕರ ಮಕ್ಕಳು ಇರುವುದರಿಂದ ಅವರಿಗೆ
೭ನೇ ವೇತನವನ್ನು ರಾಜ್ಯ ರ‍್ಕಾರದಲ್ಲಿ ಆದೇಶವನ್ನು ಜಾರಿ ಮಾಡಬೇಕೆಂದು ಸನ್ಮಾನ್ಯ ಸಿದ್ದರಾಮಯ್ಯನವರು
ಮುಖ್ಯಮಂತ್ರಿಗಳು ರ‍್ನಾಟಕ ಸರಕಾರ ವಿಧಾನಸೌಧ ಬೆಂಗಳೂರು ಬಾಗಲಕೋಟೆ ಜಿಲ್ಲೆಯ ರೈತರ ಮನವಿಯ
ಸುದ್ಧಿಗೋಷ್ಠಿ.
೬) ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಹಾವರಗಿ ಗ್ರಾಮ ಪಂಚಾಯತಿಯಲ್ಲಿ ಬರುವ ಇಂದವಾರ ಗ್ರಾಮದ ಕಿರಿಯ
ಪ್ರಾಥಮಿಕ ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷರು ಹಾಗೂ ಅಖಿಲ ರ‍್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷರಾಗಿದ್ದು, ಈ
ಶಾಲೆಯಲ್ಲಿ ೧ ರಿಂದ ೫ವರೆಗೆ ಮಕ್ಕಳು ಶಿಕ್ಷಣವನ್ನು ಪಡೆಯುತ್ತಿದ್ದು, ೧೯೭೯ ರಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ
ನಿಯಮಿತ ಪುರ‍್ವಸತಿ ಅಧಿಕಾರಿಗಳು ಆಲಮಟ್ಟಿ ಇವರು ಶಾಲೆಯನ್ನು ನರ‍್ಮಾಣ ಮಾಡಿದ್ದು ಇರುತ್ತದೆ. ೪೫ ರ‍್ಷಗಳು
ಗತಿಸಿದ ಕಟ್ಟಡಗಳು ಬೀಳುವಂತಾಗಿವೆ. ಇನ್ನುವರೆಗಾದರೂ ಸಂಬಂಧಪಟ್ಟ ತಾಲೂಕಿನ ಶಿಕ್ಷಣ ಅಧಿಕಾರಿಗಳು ಇಂದವಾರ

ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿರುವುದಿಲ್ಲ. ೧ ರಿಂದ ೫ನೇ ತರಗತಿ ಮಕ್ಕಳು ಕಲಿಯುತ್ತಿದ್ದು, ಸೂಕ್ಷö್ಮ,
ಅತೀ ಸೂಕ್ಷö್ಮ ಸ್ಥಳ ಅಂತಾ ಗುರುತಿಸಬೇಕು. ಈ ಶಾಲೆಯೂ ತುಂಬಾ ಶಿಥಿಲಗೊಂಡಿದ್ದು, ಅದೇ ಶಾಲೆಯಲ್ಲಿ ಮಕ್ಕಳು
ಓದುತ್ತಿದ್ದು, ಶಾಲೆಯು ಮಗುವಿನ ಮೇಲೆ ಒಂದೇ ಕಲ್ಲು ಬಿದ್ದರೂ ಇದಕ್ಕೆ ನೇರವಾಗಿ ಸರಕಾರವೇ ಹೊಣೆಹೊರಬೇಕಾಗುತ್ತದೆ ಕೂಡಲೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಕಾರ್ಯಪ್ರವೃತ್ತರಾಗಲು ಅಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here