ವಿಜಯನಗರ:ಹೂವಿನಹಡಗಲಿ ತಾಲೂಕಿನ ಮೈಲಾರ್ ಗ್ರಾಮವು ರಾಜ್ಯದ ಹೆಸರಾಂತ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನವು ರಾಜ್ಯದ ಪ್ರತಿ ಗ್ರಾ ಮನೆಮನಗಳಲ್ಲಿ ಅಷ್ಟೇ ಅಲ್ಲದೆ ವಿವಿಧ ರಾಜ್ಯಗಳೂ ಸೇರಿದಂತೆ ದೇಶ ವಿದೇಶಗಳಲ್ಲಿ ಭಕ್ತಸಮುದಾಯವನ್ನು ಹೊಂದಿರುವ ಶ್ರೀ ಮೈಲಾರಲಿಂಗೇಶ್ವರ ಧಾರ್ಮಿಕ ಕ್ಷೇತ್ರವು ಜಾತಿ,ಮತ,ಧರ್ಮ,ಭಾಷೆಗಳನ್ನು ಮೀರಿ ಎಲ್ಲಾ ಜಾತಿ,ಧರ್ಮ,ಭಾಷಿಕರನ್ನು ಐಕ್ಯತೆಯಿಂದ ಒಡಗೂಡಿದ ಭಕ್ತಸಮುದಾಯವನ್ನು ಹೊಂದಿರುವಂಥ ಕ್ಷೇತ್ರವೆಂದರೆ ಅಕ್ಷರಸಹ ತಪ್ಪಾಗಲಾರದು.
ಈ ಧಾರ್ಮಿಕ ಕ್ಷೇತ್ರದಲ್ಲಿ ಪ್ರತಿ ಹುಣ್ಣುಮೆ ಗಳಂದು ಭಕ್ತರ ದಂಡು ಸದಾ ಜಾತ್ರೆಯಂತೆ ಕಾಣುತ್ತದೆ.ಅಲ್ಲದೆ ಪ್ರತಿವರ್ಷ ನಡೆಯುವ ಶ್ರೀ ಮೇಲಾರಲಿಂಗೇಶ್ವಜಾತ್ರೆ ಒಂದು ದೊಡ್ಡಪರಂಪರೆ ಇತಿಹಾಸ ವಿದೆ.ಪ್ರತಿವರ್ಷ ನಡೆಯುವ ಈ ಜಾತ್ರೆಗೆ ಭಕ್ತರ ದಂಡು ಅಂತರ್ ರಾಜ್ಯಗಳಿಂದ ಒಂದುವಾರ ಹದಿನೈದು ದಿನಗಳಮೊದಲೇ ಎತ್ತಿನಬಂಡಿ,ಪಾದಯಾತ್ರೆ,ಉರುಳುಸೇವೆ ಮುಂತಾದ ಅನೇಕರೀತಿಯಲ್ಲಿ ಮೈಲಾರಕ್ಕೆ ಬರತೊಡಗುತ್ತಾರೆ ಏಳು ಕೋಟಿ ಏಳು ಕೋಟಿ ಚಾಂಗಮಲೋ ಚಾಂಗಮಲೋ ಎಂಬ ಶಬ್ದದನಾದವು ಆಕಾಶದೆತ್ತರಕ್ಕೆ ಮುಟ್ಟುವಹಾಗೆ ಭಕ್ತರು ಕೂಗುತ್ತಾ ಹೆಜ್ಜೆಹಾಕುತ್ತಾರೆ.
ಈ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಬಂದು ಅಲ್ಲಲ್ಲಿ ಗಿಡ,ಮರ,ತೋಟ,ಶಾಲೆ,ದೇವಸ್ಥಾನ ಹೀಗೆ ಎಲ್ಲೆಲ್ಲಿ ಜಾಗಮಾಡಿಕೊಂಡು ಟೆಂಟುಹಾಕಿಕೊಂಡು ಕುಟುಂಬಸಮೇತರಾಗಿ ಬಂದು ವಾರಗಳಕಾಲಿಲ್ಲೇಇದ್ದು ದೇವರ ಹರಕೆಗಳನ್ನು ತೀರಿಸುವುದರ ಜೊತೆಗೆ ವಿವಿಧ ಮನರಂಜನಾ ನಾಟಕ,ಸಿನಿಮಾ,ಭಜನೆ,ಜಾಣಪದ,ಬಯಲಾಟ ಹತ್ತುಹಲವಾರು ಗ್ರಾಮೀಣ ಕಲೆಗಳಪ್ರದರ್ಶನಗಳನ್ನು ಅನುಭವಿಸುತ್ತಾ ವರ್ಷಾನುಗಟ್ಟಲೆ ಬಂಧುಬಾಂಧವರ ಸಂಪರ್ಕ ಕಡೆದುಕೊಂಡವರೂ ಸಹ ಈ ಜಾತ್ರೆಯಲ್ಲಿ ಪರಸ್ಪರರು ಭೇಟಿಯಾಗಿ ಕುಶಲೋಪಚರಿ ಹಂಚಿಕೊಳ್ಳುತ್ತಾ ಜಾತ್ರೆಯಲ್ಲಿ ಮೈಮರೆತು ಎಲ್ಲರೂ ಆನಂದಭಾಷ್ಪವನ್ನು ಹರಿಸುತ್ತಾರೆ.
ಇಷ್ಟೆಲ್ಲಾ ಒಂದುಕಡೆಯಾದರೆ ಮೈಲಾರಲಿಂಗೇಶ್ವರನ ಕಾರ್ಣಿಕವು ದೇಶದ ರಾಜಕೀಯ,ಆರ್ಥಿಕ,ಮಳೆ,ಬೆಳೆ,ಆರೋಗ್ಯ,ಅಧಿಕಾರದ ಮತ್ತು ದೇಶದಲ್ಲಿ ನಡೆಯಬಹುದಾದ ಬದಲಾವಣೆಗಳಕುರಿತು ಮುಂದಿನ ಭವಿಷ್ಯವಾಣಿಯನುಡಿಯನ್ನು ಕೇಳಲು ಕೋಟ್ಯಾಂತರ ಜನರು ಕಾತುರರಾಗಿ ಕಾಯುತ್ತಿರುತ್ತಾರೆ.ಮಾಧ್ಯಮ,ಸೋಷಿಯಲ್‌ ಮಿಡೀಯಾ,ದೂರವಾಣಿಗಳಮುಖಾಂತರ ಮೈಲಾರಕಾರ್ಣಿಕವಾಣಿ ಕೇಳಲು ಅತ್ಯುತ್ಸುಕರಾಗಿರುತ್ತಾರೆ.ಇದು ಇಂದು ನಿನ್ನೆ ಮೊನ್ನೆಯಯದಲ್ಲಾ ಕಾಲಾನುಕಾಲದಿಂದ ನಡೆದುಬಂದ ಭವ್ಯ ಐತಿಹಾಸಿಕ ಪರಂಪರೆ.ಶ್ರೀ ಮೈಲಾರಲಿಂಗೇಶ್ವರ ಭಕ್ತಸಮುದಾಯವು ಕುರುಬ,ಲಿಂಗಾಯತ,ಬ್ರಾಹ್ಮಣ,ಬಂಜಾರ,ಮರಾಠಿ,ದಲಿತ ಹಿಂದುಳಿದವರೆನ್ನದೆ ಇಡೀ ಮಾನವಕುಲದ ಸರ್ವರ ಆರಾಧ್ಯದೇವಸ್ಥಾನವೆಂದರೆ ಈ ಮೈಲಾರಕ್ಷೇತ್ರ.
ಆದರೆ ಇತ್ತೀಚೆಗೆ ಶಕುಣಿಗಳಂಥಾ, ಸುಖಸಂಸಾರದಲ್ಲಿ ಹುಳಿಹಿಂಡುವಂಥಾ,ಮನೆಮುರುಕರಂಥಾ,ಐಕ್ಯತೆ ಸಮಗ್ರತೆಯನ್ನು ಸಹಿಸಿಕೊಳ್ಳಲಾಗದಂಥಾ,ಸಮಾಜದ ಸ್ವಾಸ್ಥ್ಯ ಹಾಳುಗೆಡುವುವಂಥಾ ಮನೋಸ್ಥಿತಿಯ ಸಮಾಜಘಾತುಕ ಶಕ್ತಿಗಳು ಪವಿತ್ರ ಧಾರ್ಮಿಕ ಸಮಸಮಾಜನಿರ್ಮಾಣದ ಸುಕ್ಷೇತ್ರ ಮೈಲಾರದಲ್ಲಿ ತಮ್ಮ ಅತೃಪ್ತಾತ್ಮಗಳಹಾಗೆ ಒಳನುಸುಳಿ ಸಮಾಜದ ಸ್ವಸ್ಥ್ಯ ಹಾಳುಗೆಡುವುದರಜೊತೆಗೆ ಪವಿತ್ರ ಧಾರ್ಮಿಕ ಕ್ಷೇತ್ರವನ್ನು ಜಾತೀಕರಣ ಮಾಡಲು ಹೊಟರಿರುವುದು ದುರಾದೃಷ್ಟವೇ ಸರಿ.ಭಕ್ತಸಮುದಾಯವು ಜಾತಿ ಧರ್ಮಗಳ ಹೆಸರಲ್ಲಿ ಸಮಸಮಾಜದ ಬುಡಕ್ಕೇ ಬೆಂಕಿಇಡಲು ಹವಣಿಸುತ್ತಿರುವ ಸ್ವಾರ್ಥಸಾಧಕರಕುರಿತು ಎಚ್ಚರ ವಹಿಸಬೇಕು ಮತ್ತು ಅಂಥವರ ಆಟ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ ಶ್ರೀ ಮೈಲಾರಕ್ಷೇತ್ರವು ಒಂದು ಜಾತಿ ಧರ್ಮ ಪಂಥ ಪಂಗಡಗಳ ಒಳಕುತಂತ್ರಕ್ಕೆ ಬಲಿಕೊಡಬಾರದೆಂದು ಸದಭ್ತರಲ್ಲಿ ಬೇಡ ಬೇಧಭಾವ.ಏಳುಕೋಟಿ ಏಳುಕೋಟಿ ಚಾಂಗಮಲೋ ಚಾಂಗಮಲೋ..

LEAVE A REPLY

Please enter your comment!
Please enter your name here