ಜಗಳೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲೆ ವಿಭಾಗ ಹಾಗೂ ಅಗ್ನಿ ಶಾಮಕ ಠಾಣೆ ಜಗಳೂರು ಇವರ ಸಹಯೋಗದೊಂದಿಗೆ “ಅಗ್ನಿ ಅವಘಡಗಳ ಅರಿವು ಮತ್ತು ಅಗ್ನಿ ಅನಾಹುತ ತಡೆಗಟ್ಟುವ ದಿನ” ಹಿನ್ನೆಲೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ಇದೇ ವೇಳೆ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಫಕ್ಕಿರಪ್ಪ ಕೆ ಉಪ್ಪಾರ್ ಅವರು “ಅಗ್ನಿ ಅವಘಡಗಳ ಅರಿವು ಮತ್ತು ಅಗ್ನಿ ಅನಾಹುತ ತಡೆಗಟ್ಟುವ
ಕುರಿತು ಉಪನ್ಯಾಸ ಮತ್ತು ಅಣಕು ಪ್ರದರ್ಶನ ಮೂಲಕ ವಿದ್ಯಾರ್ಥಿಗಳಿಗೆ ಜಾಗೃತಿ ಮಾಡಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿ ಡಿಡಿ ಹಾಲಪ್ಪ, ಅಗ್ನಿಶಾಮಕ ಠಾಣೆ ಸಿಬ್ಬಂದಿಗಳು
ಅಫ್ತಾಬ್ ಅಹಮದ್ , ಮತ್ತೂರು ಜೋತಿ , ಸುಭಾಷ್ ಮುನುವಳ್ಳಿ , ಪೃಥ್ವಿರಾಜ್ , ಮರುಳ ಸಿದ್ದಯ್ಯ ಸೇರಿದಂತೆ ಮತ್ತಿತರರಿದ್ದರು.