ಹುಣಸೂರು ತಾಲೂಕಿನ ದಾಸನಪುರ ಗ್ರಾಮದ ಪಿ.ಯು.ಸಿ. ವಿಧ್ಯಾರ್ಥಿ ಮುತ್ತುರಾಜ್(17) ಸಾವಿಗೆ ಕಾರಣರಾದ ಆರೋಪಿಗಳಿಗೆ ಶಿಕ್ಷೆ ಆಗಬೇಕೆಂದು ಒತ್ತಾಯಿಸಿ ಇಂದು ಕುಟುಂಬಸ್ಥರು ಹಾಗೂ ಸಂಭಂಧಿಕರು ಪ್ರತಿಭಟನೆ ನಡೆಸಿದರು.ಹುಣಸೂರಿನ ಕಲ್ಪತರು ಸರ್ಕಲ್ ನಲ್ಲಿ ಶವ ಇಟ್ಟು ಪ್ರತಿಭಟನೆ ನಡೆಸಿ ಆಕ್ರೋಷ ವ್ಯಕ್ತಪಡಿಸಿದರು.ಫೆ19 ರಂದು ರಾತ್ರಿ ಪ್ರಥಮ ವಿದ್ಯಾರ್ಥಿಮುತ್ತುರಾಜ್ ಶವ ಚೌಡಿಕಟ್ಟೆಯ ರಮೇಶ ಬೋರ ಜಮೀನಿನ ಶೆಡ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ.ಈ ಬಗ್ಗೆ ಮೃತನ ತಂದೆ ರವಿ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಮುತ್ತುರಾಜ್ ಅನ್ಯಕೋಮಿನ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿರುತ್ತಾನೆಂದು ಆರೋಪಿಸಿ ಕೆಲವು ಯುವಕರು ಗಲಾಟೆ ಮಾಡಿದ್ದಾಗಿ ತಿಳಿದು ಬಂದಿರುತ್ತದೆ.ಇಂದು ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹವನ್ನು ಹುಣಸೂರಿಗೆ ವಾಪಸ್ ತಂದಿದ್ದು ಸಂಜೆ ಮೃತನ ಸ್ನೇಹಿತರು, ಗ್ರಾಮಸ್ಥರು, ಮತ್ತು ಪೋಷಕರು ಹಾಗೂ ಇತರೆ ಹಿಂದೂ ಸಂಘಟನೆಗಳ ಮುಖಂಡರು ಮುತ್ತುರಾಜನ ಸಾವು ಅನುಮಾನಾಸ್ಪದವಾಗಿದ್ದು ಇದೊಂದು ಕೊಲೆ ಎಂದು ಆರೋಪಿಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ ನಡೆಸಿದರು.
ನಂತರ ಪೊಲೀಸರ ಮನವಿಗೆ ಸ್ಪಂದಿಸಿ ಆಂಬುಲೆನ್ಸ್ ನಲ್ಲಿದ್ದ ಮೃತದೇಹವನ್ನು ಮೆರವಣಿಗೆ ಮುಖಾಂತರ ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಿದ್ದಾರೆ.
ಈ ಸಂದರ್ಭದಲ್ಲಿ ಡಿವೈಎಸ್ಪಿ ಗೋಪಾಲಕೃಷ್ಣ ,ಇನ್ಸ್ ಪೆಕ್ಟರ್ ಗಳು ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿದ್ದು ಸೂಕ್ತ ಪೊಲೀಸ್ ಬಂದೂಬಸ್ತ್ ಮಾಡಿದ್ದಾರೆ…(ಕೃಪೆ:ಹುಣಸೂರು,ಫೆ20,Tv10 ಕನ್ನಡ)