ದಾವಣಗೆರೆ; ಫೆ.21 : ದಾವಣಗೆರೆ ಸಮೀಪವಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಯದೇವಪ್ಪ ಪಾರ್ವತಮ್ಮ ಸಮುದಾಯ ಭವನದ ಎದುರಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸುಮಾರು 40 ರಿಂದ 45 ವಯಸ್ಸಿನ ಅನಾಮಧೇಯ ವ್ಯಕ್ತಿಗೆ ಡಿಕ್ಕಿ ಹೊಡೆದುದರಿಂದ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.
ಚಹರೆ ವಿವರ: 5 ಅಡಿ ಎತ್ತರ, ಕೋಲು ಮುಖ, ಗೋಧಿ ಮೈ ಬಣ್ಣ, ತೆಳ್ಳನೆಯ ಮೈಕಟ್ಟು, ಉದ್ದನೆಯ ಉಬ್ಬು ಹಲ್ಲುಗಳು, 3 ಇಂಚು ಉದ್ದದ ಕಪ್ಪು ಮತ್ತು ಬಿಳಿ ಬಣ್ಣ ಕುರುಚಲಿನಂತೆ ಕಾಣುವ ಕೂದಲು, ಕೊಳಕಾದ ಹಳದಿ ಬಣ್ಣದ ಅರ್ಧ ತೋಳಿನ ಟಿ-ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು. ಈ ವ್ಯಕ್ತಿಯ ಮಾಹಿತಿ ದೊರೆತಲ್ಲಿ ದಕ್ಷಿಣ ಸಂಚಾರ ಪೆÇಲೀಸ್ ಠಾಣೆ ದೂ.ಸಂಖ್ಯೆ 08192-59238, 253400, 259213, 9480803253, 9480803237, ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡಲು ಸಂಚಾರ ವೃತ್ತ ನಿರೀಕ್ಷಕರು ನಲವಾಗಿಲು ಮಂಜುನಾಥ ತಿಳಿಸಿರುತ್ತಾರೆ.