ದಾವಣಗೆರೆ: ಫೆ 21ರಂದು ಕರವೇ ವತಿಯಿಂದ ಕನ್ನಡ ಜಾಗೃತಿ ಬೃಹತ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ರಾಮೇಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫೆ. 21ರ ಬುಧವಾರ ಬೆಳಿಗ್ಗೆ 11 -30ಕ್ಕೆ ನಗರದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ವೃತ್ತದ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಕನ್ನಡ ಜಾಗೃತಿ ಜಾಥಾಕ್ಕೆ ಚಾಲನೆಗೆ ದಾವಣಗೆರೆ ಜಿಲ್ಲಾಧಿಕಾರಿ ಯಾದ ಡಾ. ಎಮ್ ವಿ ವೆಂಕಟೇಶರವರು ಚಾಲನೆ ನೀಡುವರು . ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಬಿ. ವಾಮದೇವಪ್ಪ ಮತ್ತು ಕ.ಸಾ.ಪ ಮಾಜಿ ಅಧ್ಯಕ್ಷ ಮಂಜುನಾಥ್ ಕುರ್ಕಿ, ಹಿರಿಯ ಪತ್ರಕರ್ತ ಬಾ .ಮ ಬಸವರಾಜಯ್ಯ ಇವರುಗಳು ಕನ್ನಡ ಬಾವುಟದ ಚಾಲನೆ ನೀಡುವರು ಎಂದು ಅವರು ತಿಳಿಸಿದ್ದಾರೆ.
ಮೆರವಣಿಗೆ ಅಂಬೇಡ್ಕರ್ ವೃತ್ತದಿಂದ ಜಯದೇವ ವೃತ್ತ, ಪಿ ಬಿ ರಸ್ತೆ , ಅಕ್ಕಮಹಾದೇವಿ ರಸ್ತೆ, ರಾಮ್ ಅಂಡ್ ಕೋ ವೃತ್ತ, ರಾಯ್ಕರ್ ಜ್ಯುವೆಲರಿ ಪಕ್ಕದ ರಸ್ತೆಯಿಂದ ಡಾ. ಮೋದಿ ವೃತ್ತ, ಮಾಮಾಸ್ ಜಾಯಿಂಟ್ ರಸ್ತೆ , ಕಾಲೇಜ್ ರಸ್ತೆ, ಮೆಡಿಕಲ್ ಹಾಸ್ಟೆಲ್ ರಸ್ತೆ , ಆಂಜನೇಯ ಬಡಾವಣೆಯ ಬೀದಿಗಳಲ್ಲಿ ಕನ್ನಡ ಜಾಗೃತಿಯ ಬೃಹತ್ ಜಾಥಾ ನಡೆಯಲಿದೆ ಎಂದಿದ್ದಾರೆ.
ಡಿಸೆಂಬರ್ 27ರಂದು ಕರವೇ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯ ಫಲವಾಗಿ ರಾಜ್ಯದಲ್ಲಿ ಅಂಗಡಿಯ ನಾಮಫಲಕಗಳು, ಬ್ಯಾಂಕುಗಳು, ಪೆಟ್ರೋಲ್ ಬಂಕ್ ಗಳು, ಶಾಲಾ-ಕಾಲೇಜುಗಳು, ಇನ್ನಿತರೆ ಖಾಸಗಿ ಸಂಸ್ಥೆಗಳು ಸೇರಿದಂತೆ ಎಲ್ಲಾ ನಾಮಫಲಕಗಳು ಕನ್ನಡದಲ್ಲಿ ಶೇಕಡ 60ರಷ್ಟು , ಇನ್ನುಳಿದ 40 ಭಾಗ ಆಂಗ್ಲ ಭಾಷೆಯಲ್ಲಿ ಬಳಸಬಹುದೆಂದು ಸರ್ಕಾರವು ಆದೇಶಿಸಿದ್ದು , ಪಾಲಿಸದವರು ಇವುಗಳನ್ನು ಸರಿಪಡಿಸಿಕೊಳ್ಳಲು ಸರ್ಕಾರವೇ ಫೆಬ್ರವರಿ 28 ರವರೆಗೆ ಗಡುವು ನೀಡಿದೆ. ಅದರಂತೆ 21 ರಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಕನ್ನಡದ ಜಾಗೃತಿ ಅಭಿಯಾನ ನಡೆಸಲು ಜಿಲ್ಲಾ ಘಟಕದ ವತಿಯಿಂದ ಸುಮಾರು 200 ಜನ ಕಾರ್ಯಕರ್ತರು ಭಾಗವಹಿಸುವುದಾಗಿ ಅವರು ತಿಳಿಸಿದ್ದಾರೆ. ಶೇಕಡ 60ರಷ್ಟು ಕಡ್ಡಾಯವಾಗಿ ಕನ್ನಡದ ನಾಮಫಲಕ ಹಾಕದವರ ವಿರುದ್ಧ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲು ಅಂತಹ ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿ ಮಾರ್ಚ್ 5 ರಂದು ಮಹಾನಗರ ಪಾಲಿಕೆಗೆ ಬೀಗ ಹಾಕ ಲಾಗುವುದೆಂದು ತಿಳಿಸಿದರು. ಇದಕ್ಕೂ ಬಗ್ಗದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ ವತಿ ಯಿಂದನೆ ಮಾರ್ಚ್ 15 ರಂದು. ಆಂಗ್ಲ ನಾಮಫಲಕಗಳನ್ನು ಕಿತ್ತು ಹಾಕಲಾಗುವುದೆಂದು ಎಚ್ಚರಿಸಿದರು ಈ ಸಂದರ್ಭದಲ್ಲಿ ಜಿಲ್ಲಾ ಗೌರವ ಅಧ್ಯಕ್ಷರಾದ ವಾಸುದೇವ ರಾಯ್ಕರ್ ಮಲ್ಲಿಕಾರ್ಜುನ್ ರವಿ ಕುಮಾರ್ ಎನ್ ಟಿ ಹನುಮಂತಪ್ಪ ಎಂಡಿ ರಫೀಕ್ ಜಬಿವುಲ್ಲಾ ಪೈಲ್ವಾನ್ ಆಟೋ ರಾಫಿಕ್ ಮತ್ತಿತರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here