ವಿಜಯಪುರ:ವಿಜಯಪುರ ತಾಲೂಕಿನ ವ್ಯಾಪ್ತಿಯ ಹೊನಗನಹಳ್ಳಿ ಮತ್ತು ಸವನಹಳ್ಳಿ ಅವಳಿಗ್ರಾಮಗಳು ಬಬಲೇಶ್ವರ ವಿಧಾನಸಭೆವ್ಯಾಪ್ತಿಗೆ ಒಳಪಡುತ್ತವೆ.ಈ ಎರಡೂ ಗ್ರಾಮಗಳು ಮೊದಲಿನಿಂದಲೂ ಅಭಿವೃದ್ಧಿಯಿಂದ ಹಿಂದಿದೆ.ಮೊದಲು ಬಸವನಬಾಗೇವಾಡಿ ವಿಧಾನಸಭೆವ್ಯಾಪ್ತಿಯಲ್ಲಿತ್ತು.ಆ ಸಂಧರ್ಭದಲ್ಲಿ ಆಡಳಿತಾತ್ಮಕವಾಗಿ ವಿಜಯಪುರ ತಾಲೂಕಿಗೆ ಒಳಪಟ್ಟಿತ್ತು.ಆ ಸಮಯದಲ್ಲಿಯೂ ಕೂಡಾ ಅಭಿವೃದ್ಧಿ ದೃಷ್ಟಿಯಿಂದ ಬಹಳವೇ ಹಿಂದುಳಿದಿತ್ತು.
ಕ್ಷೇತ್ರವಿಂಗಡನಾ ಸಂದರ್ಭದಲ್ಲಿ ಮತ್ತು ಹೊಸ ತಾಲೂಕು ರವಣೆಸಮಯದಲ್ಲಿ ರಾಜಕಾರಣಿಗಳು ತಮ್ಮ ಪ್ರಭಾವ ಬಳಸಿ ಈ ಗ್ರಾಮಗಳ ಜನರಿಗೆ ಅಭಿವೃದ್ಧಿಯ ಹಸಿಸುಳ್ಳುಗಳಿಂದ ಮನವಲಿಸಿ ಹತ್ತಿರದಲ್ಲಿ ಇದ್ದ ವಿಜಯಪುರ ತಾಲೂಕಿನಿಂದ ಬೇರ್ಪಡಿಸಿ ಸ್ವಾರ್ಥ ರಾಜಕೀಯಕ್ಕಾಗಿ ಯಾವುದೇ ಸಾರಿಗೆ ಸಂಪರ್ಕ ರಸ್ತೆಗಳ ಅನುಕೂಲಗಳು ಈ ಗ್ರಾಮಗಳಿಂದ ಇರದಿದ್ದರೂ ಸಹ ಬಬಲೇಶ್ವರ ನೂತನ ಬಬಲೇಶ್ವರ ತಾಲೂಕಿಗೆ ಸೇರಿಸಿ ಇಡೀ ಗ್ರಾಮದ ಸರ್ವಜನಗಕ್ಕೂ ಕಚೇರಿಯ ಕಾರ್ಯಕೆಲಸಗಳಿಗೆ ಅನಾನುಕೂಲ ಮಾಡಲಾಗಿತ್ತು.ಇದನ್ನು ಮರಳಿ ವಿಜಯಪುರ ತಾಲೂಕಿಗೆ ಸೇರಿಸಬೇಕೆಂದು ಎರಡೂ ಗ್ರಾಮದ ಜನರು ಜಾತಿ,ಮತ,ಪಕ್ಷ,ಪಂಗಡಗಳನ್ನು ಬದಿಗಿಟ್ಟು ಗ್ರಾಮದ ಜನರ ಅನುಕೂಲಕ್ಕಾಗಿ ಅಧಿಕಾರಿ,ರಾಜಕಾರಣಿಗಳ ಮನೊಲಿಸಿ ಹೋರಾಟಗಳಮುಖಾಂತರ ಸರ್ಕಾರದ ಗಮನಸೆಳೆದು ಜಯಸಾಧಿಸಲಾಯಿತು.
ಈ ಎರಡೂ ಗ್ರಾಮಗಳಲ್ಲಿ ಬಹುತೇಕರು ಎಲ್ಲರೂ ಬಡರೈತರು,ಕೂಲಿಕಾರರು,ಇರುವುದರಿಂದ ಬಹಳ ಮುಗ್ದತೆ ಹಾಗೂ ನಮಗ್ಯಾಕೆ ಬೇಕು ಊರುಸಾಬರಿ ಎಂದು ತಲೆ ತಗ್ಗಿಸಿ ಎಡಕೆಣ್ಣೆಗೆ ಹೊಡೆದರೆ ಬಲಕೆಣ್ಣೆಯನ್ನೂ ಮುಂದೊಡ್ಡುವ ಮನಸುಳ್ಳವರು.ಹಾಗಾಗಿ ಇವರಿಗೆ ರಾಜಕಾರಣಿಗಳ ಚೇಲಾಗಳು ಮೂಡಿಸುವ ಭಯದವಾತಾವರಣಕ್ಕೆ ಹೊಂದಿಕೊಂಡಂತನಿಸುತ್ತದೆ.
ಇಲ್ಲಿಯ ಅಧಿಕಾರಿಗಳಿಗೆ ಮತ್ತು ರಾಜಕಾರಣಿಗಳಿಗೆ ತಮ್ಮಸ್ವಾರ್ಥ ಸಾಧನೆಬೇಕೆಹೊರತು ಅಭಿವೃದ್ಧಿ ಗಳಲ್ಲಾ. ಸದಾ ಜನರನ್ನು ಗೊಂದಲದಲ್ಲಿ ಸಿಲುಕಿಸುವುದೇ ಇವರ ಕೆಲಸ.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ತನಕ ರಾಜಕೀಯ ಕುಸಿದುಬಿದ್ದಿದೆ ಎಂದರೆ ಪ್ರಜ್ಞಾವಂತರೆಸಿಕೊಂಡವರೆಲ್ಲರಿಗೂ ನಾಚಿಕೆಯಾಗಬೇಕು.ಹಿಂದೆಕೆಲವರು ಹೇಳ್ತಿದ್ರು ಏನ್ರಿ ಅವನು ಗ್ರಾಮಪಂಚಾಯತಿಮಟ್ಟದ ರಾಜಕಾರಣಕ್ಕೆ ಇಳಿದಿದ್ದಾನೆ ಅಂತ. ಈಗ ಶಾಲಾಅಭಿವೃದ್ಧಿ ಸಮಿತಿಯ ಮಟ್ಟಕ್ಕೆ ಇಳಿದಿದೆ.ನಾಚಿಕೆಯಾಗಲ್ವೆ?

LEAVE A REPLY

Please enter your comment!
Please enter your name here