ದಾವಣಗೆರೆ:ದಿನಾಂಕ 26, 27 ಮತ್ತು 28.01.2024 ಮೂರು ದಿನಗಳ ಕೌಶಲ್ಯ ತರಬೇತಿ ಕುರಿತು.. ಹರಿಹರದ ಮೈತ್ರಿವನದಲ್ಲಿ ಜನವರಿ 26, 27 ಮತ್ತು 28.01.2024 ಈ ಮೂರು ದಿನಗಳ ಕಾಲ ಕೌಶಲ್ಯ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. ಮೌಡ್ಯವೇ ಪ್ರಧಾನವಾಗುತ್ತಿರುವ ಈ ಕಾಲಸಂದರ್ಭದಲ್ಲಿ ವೈಚಾರಿಕತೆ ವಿಜ್ಞಾನ ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಚರ್ಚೆ ಸಂವಾದಗಳು ಆಗಬೇಕೆಂಬ ಒತ್ತಾಸೆ. ಇದರ ಅಂಗವಾಗಿ ಡಿಸೆಂಬರ್ 29 ಮತ್ತು 30 ರಂದು ಅಂಗಸೂರಿನಲ್ಲಿ ವೈಜ್ಞಾನಿಕ ಸಮ್ಮೇಳನ ನಡೆಸಲಾಯಿತು. ಇದರ ಭಾಗವಾಗಿ ಮುಂದುವರೆದು ವೈಜ್ಞಾನಿಕತೆ, ವೈಚಾರಿಕತೆಗೆ ಪೂರಕವಾಗಿ ಮೂರು ದಿನಗಳ ಕೌಶಲ್ಯ ತರಬೇತಿಯನ್ನು ಹರಿಹರದ ಮೈತ್ರಿವನದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಉದ್ಘಾಟನೆ ದಿನಾಂಕ 26.01.2024ರ ಸಂಜೆ 06:00 ಗಂಟೆಗೆ ನಡೆಯಲಿದೆ. ಈ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯವನ್ನು ಪರಮಪೂಜ್ಯ ಶ್ರೀಪಂಡಿತರಾಧ್ಯ ಸ್ವಾಮಿಗಳು ಸಾನಿಧ್ಯವಹಿಸುವವರು, ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕರಾದ ಡಾ.ಎ.ಬಿ.ರಾಮಚಂದ್ರಪ್ಪರವರು ಉದ್ಘಾಟಿಸುವವರು, ಶ್ರೀಯುತ ಡಾ.ಹುಲಿಕಲ್ಲು ನಟರಾಜ್‌ರವರು ಅಧ್ಯಕ್ಷತೆಯನ್ನು ವಹಿಸುವವರು, ದಿನಾಂಕ 27.01.2024ರಂದು ವಿಷಯಕ್ಕೆ ಪೂರಕವಾದ ಸಂವಾದ ಚರ್ಚೆಗಳಾಗುತ್ತವೆ,, ದಿನಾಂಕ:28.01.2024ರ ಮದ್ಯಾಹ್ನ 02.30ಕ್ಕೆ ಕಾರ್ಯಕ್ರಮದ ಸಮಾರೋಪ ಸಮಾರಂಭವಿದೆ. ಈ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀಗುರುಬಸವ ಮಹಾಸ್ವಾಮಿಗಳು, ಪಾಂಡುಮಟ್ಟಿ ಇವರು ವಹಿಸುವವರು, ಅಧ್ಯಕ್ಷತೆಯನ್ನು ಡಾ.ಹುಲಿಕಲ್ಲು ನಟರಾಜ್‌ರವರು ವಹಿಸುವರು, ವಿಜ್ಞಾನ ಸಿರಿ ಸಂಚಿಕೆಯನ್ನು ಹಟ್ಟಿ ಚಿನ್ನದಗಣಿ ವ್ಯವಸ್ಥಾಪಕರಾದ ಸಂಜಯ್.ಬಿ.ಶೆಟ್ಟಣ್ಣನ್ನವರು ಬಿಡುಗಡೆ ಮಾಡುವವರು, ಮೂರನೇ ವೈಜ್ಞಾನಿಕ ಸಮ್ಮೇಳನದ ಕಿರುಪುಸ್ತಕವನ್ನು ಡಾ. ಎ.ಬಿ.ರಾಮಚಂದ್ರಪ್ಪನವರು ಬಿಡುಗಡೆ ಮಾಡುವವರು,

LEAVE A REPLY

Please enter your comment!
Please enter your name here