ದಾವಣಗೆರೆ:2024ಫೆಬ್ರುವರಿ 3&4,ರಂದು ಡಾ.ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪ. ಶರಣ ಮಾಗನೂರು ಬಸಪ್ಪ (ಹದಡಿ)ರಸ್ತೆ ದಾವಣಗೆರೆಯಲ್ಲಿ ಪತ್ರಕರ್ತರ 38ನೇ ರಾಜ್ಯ ಸಮ್ಮೇಳನ ನಡೆಯಲಿದೆ.
ಈ ಸಮ್ಮೇಳನದಲ್ಲಿ ಹೊರರಾಜ್ಯದ ಪತ್ರಿಕಾ ಪ್ರತಿನಿಧಿಗಳು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಪತ್ರಿಕಾಪ್ರತಿನಿಧಿಗಳು,ಅತಿಥಿ ಗಳು,ಸನ್ಮಾನಿತರು ಸೇರಿದಂತೆ ಕನಿಷ್ಟ ನಾಲ್ಕರಿಂದ ಆರು ಸಾವಿರ ಪತ್ರಿಕಾ ಪ್ರತಿನಿಧಿಗಳು ಭಾಗವಹಿಸುವರು.
ಎರಡು ದಿನಗಳಕಾಲ ನಡೆಯಲಿರುವ ಈ ಸಮ್ಮೇಳನವನ್ನು ಸನ್ಮಾನ್ಯ ಮುಖ್ಯಮಂತ್ರಿ ಗಳಾದ ಶ್ರೀ ಸಿದ್ದರಾಮಯ್ಯನವರು ಉದ್ಘಾಟನೆ ನೆರವೇರಿಸುವರು ಮತ್ತು ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ವಿಧಾನಸಭೆಯ ವಿರೋಧಪಕ್ಷನಾಯಕರಾದ ಶ್ರೀ ಆರ್.ಅಶೋಕ್ ರವರು ಭಾಗವಹಿಸುವರು.ಹಾಗೂ ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪನವರು,ವಿಧಾನಸಭಾಧ್ಯಕ್ಷರಾದ ಶ್ರೀ ಯು.ಟಿ.ಖಾದರ್ ರವರು,ವಿಧಾನಪರಿಷತ್ ಅಧ್ಯಕ್ಷರಾದ ಶ್ರೀ ಬಸವರಾಜ್ ಹೊರಟ್ಟಿಯವರು ಭಾಗವಹಿಸುವ ನಿರೀಕ್ಷೆ ಇದೆ.
ಈ ಸಮ್ಮೇಳನದ ಸ್ವಾಗತ ಸಮಿತಿಯ ಮಹಾ ಪೋಷಕರಾದ ಮಾಜಿ ಸಂಸದರು,ಮಾಜಿ ಸಚಿವರು ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭೆ ಶಾಸಕರಾದ ಡಾ.ಶಾಮನೂರು ಶಿಶಂಕರಪ್ಪನವರು ಮತ್ತು ಪೋಷಕರಾದ ಸಂಸದ ಜಿ.ಎಂ.ಸಿದ್ದೇಶ್ವರ ರವರು ಹಾಗೂ ಜಿಲ್ಲೆಯ ಎಲ್ಲ ವಿಧಾನಸಭೆ ಕ್ಷೇತ್ರದ ಮಾಜಿ ಮತ್ತು ಹಾಲಿ ಶಾಸಕರುಗಳು,ಪರಿಷತ್ ಸದಸ್ಯರುಗಳು,ಅತಿಥಿ ಗಣ್ಯಮಾನ್ಯರು ಮತ್ತು ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಎಸ್.ಎಸ್.ಮಲ್ಲಿಕಾರ್ಜುನ ರವರ ಸಹಾಯ ಸಹಕಾರದಿಂದ ನಡೆಯಲಿರುವ ಸಮ್ಮೇಳನದ ಕಾರ್ಯಕ್ರಮ ಹಾಗೂ ಪ್ರತಿನಿಧಿಗಳ ವಸತಿ,ಊಟ,ಮುಂತಾದ ವ್ಯವಸ್ಥೆಯ ಕುರಿತು ರೂಪುರೇಷೆ ಗಳಕುರಿತು ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ರವರ ಬೆಂಗಳೂರಿನ ಗೃಹಕಚೇರಿಯಲ್ಲಿ ಚರ್ಚಿಸಲಾಯಿತು.ಅತ್ಯುತ್ಸಾಹದಿಂದ ಸಮ್ಮೇಳನದ ಕಾರ್ಯಕಲಾಪಗಳು ಸುಗಮವಾಗಿ ನಡೆಯಬೇಕು ಸಮ್ಮೇಳಕ್ಕೆ ಆಗಮಿಸಲಿರುವ ರಾಜ್ಯದ ಪತ್ರಿಕಾಪ್ರತಿನಿಧಿಗಳಿಗೆ ಊಟ,ವಸತಿಗಳಿಗೆ ತೊಂದರೆಯಾಗದಂತೆ ಸಹಕರಿಸಿ ಆತಿಥ್ಯನೀಡಬೇಕೆಂದು ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ರವರು ಸೂಚಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರು ರಾಜ್ಯಪ್ರಧಾನಕಾರ್ಯದರ್ಶಿಗಳಾದ ಜಿ.ಸಿ.ಲೋಕೇಶ್ ರವರು ಸಮ್ಮೇಳನದ ಕಾರ್ಯಕಲಾಪಗಳು ನಡೆಯಬೇಕಾದ ವಿವರ ಕುರಿತು ಸಚಿವರ ಗಮನಕ್ಕೆ ತಂದರು.
ಈ ಸಮಯದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾದ ಇ.ಎಂ.ಮಂಜುನಾಥ್,ಪ್ರಧಾನಕಾರ್ಯದರ್ಶಿ ಎ.ಫಕೃದ್ದೀನ್, ಖಜಾಂಚಿ ಎನ್.ವಿ.ಬದ್ರಿನಾಥ್,ನಿರ್ದೀಶಕ ಕೃಷ್ಣೋಜಿರಾವ್,ಕಾರ್ಯದರ್ಶಿ ಜೆ.ಎಸ್.ವಿರೇಶ್, ಮತ್ತು ವರದಿಗಾರರಕೂಟದ ಅಧ್ಯಕ್ಷರಾದ ಕೆ.ಏಕಾಂತಪ್ಪ,ಬಂಡಾಯ ಸಾಹಿತಿ ಪತ್ರಕರ್ತ ಬಿ.ಎನ್.ಮಲ್ಲೇಶ್,ಲೇಖಕ ಬಾ.ಮ.ಬಸವರಾಜಯ್ಯ,ರುದ್ರೇಶ್, ಮತ್ತು ರಾಷ್ಟ್ರೀಯ ಮಂಡಳಿಸದಸ್ಯ ಎಸ್.ಕೆ.ಒಡೆಯರ್ ಸೇರಿದಂತೆ ಇತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here