ಸಂಸದ ಪ್ರತಾಪ ಸಿಂಹನ ರಾಜಕೀಯ ಬುಡಕ್ಕೆ ಬತ್ತಿ ಹಚ್ಚಿರೊದು ಸಿದ್ದರಾಮಯ್ಯನ ಸರಕಾರ ಎಂದು ಬಂಬಡ ಬಜಾಯಿಸುತ್ತಿರುವ ಈ ತೆಪರನಿಗೆ ದೇವೇಗೌಡರ ಕುಟುಂಬ ತನ್ನ ರಾಜಕೀಯ ಶವಪೆಟ್ಟಿಗೆಗ ಮೊಳೆ ಜಡಿಯಲು ಹುನ್ನಾರ ಹೆಣೆದದ್ದರ ಬಗ್ಗೆ ಅರಿವೇ ಇಲ್ಲ…ದೇವೇಗೌಡರ ಕುಟುಂಬ ಜೆಡಿಎಸ್ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನ ಕ್ಷಮಿಸಿ‌,NDA ನಲ್ಲಿ ವಿಲಿನಗೊಂಡು ತಮ್ಮ ರಾಜಕೀಯ ಅಸ್ಥಿತ್ವ ಉಳಿಸಿಕೊಂಡದ್ದು ಹಳೆಯ ಸಂಗತಿಯದರೂ ಬಿಜೆಪಿಯ ಯಾವ ಯಾವ ಸಂಸದರ ಬುಡಕ್ಕೆ ಸಮಾಧಿ ತೋಡಬೇಕು ಎನ್ನುವ ಪ್ಲಾನು ಮಾಡುತ್ತಲೇ ಇತ್ತು…ಈ ಕುಟುಂಬ ಯಾರಿಗೆ ಯಾವಾಗ ಬತ್ತಿ ಹಚ್ಚುತ್ತದೋ ಹೇಳಲಾಗುವುದಿಲ್ಲ ದೇವೇಗೌಡರ ಸುಧೀಘ ರಾಜಕೀಯ ಹಿತಿಯಾಸ ಗೊತ್ತಿದ್ದವರಿಗಷ್ಟೇ ಗುತ್ತು….ಹಾಗಾಗಿಯೇ ಪ್ರತಾಪ ಸಿಂಹನ ಬುಡಕ್ಕೂ ಡೈನಾಮೆಟ್ ಮಡುಗಿದ್ದು ಈ ಪೆದ್ದ ಪ್ರತಾಪನಿಗೂ ಅರ್ಥವಾಗಿಲ್ಲ.NDA ನಲ್ಲಿ ಯಾವಾಗ ಕೂರಲು ಗೌಡರಿಗೊಂದು ಚಿಟಿಕೆ ಜಾಗ ಸಿಕ್ಕಿತೋ ಆಗಲೇ ವಯೋವೃದ್ದ ರಾಜಕಾರಿಣಿ ತಮ್ಮ ಬತ್ತಳಿಕೆಯಲ್ಲಿದ್ದ ಚದುರಂಗದ ಕುತಂತ್ರ ದಾಳಗಳನ್ನು ಸಂಸದ ಪ್ರತಾಪ ಸಿಂಹನ ಹೆಸರೇಳಿ ಉರುಳಿಸಿದ್ದು….ಜೆಡಿಎಸ್ ಯಾವಾಗ ಬಿಜೆಪಿ ಜೊತೆ ರಾಜಕೀಯ ತೆಕ್ಕೆಗೆ ಸರಿಯಿತೋ ಆಗಲೇ ತಮ್ಮ ಪಕ್ಷಕ್ಕೆ ನಾಲ್ಕು ಲೋಕದಭಾಕ್ಷೇತ್ರ ಸ್ಥಾನಗಳನ್ನು ಬಿಟ್ಟು ಕೊಡಬೇಕು ಎಂಬ ಬೇಡಿಕೆ ಇಟ್ಟಿದೆ ತುಮಕೂರು,ಹಾಸನ,ಮಂಡ್ಯ ಮತ್ತು ಮೈಸೂರು.ಹಾಗೆನೋಡಿದರೆ ತುಮಕೂರು ಹಾಸನ ಮಂಡ್ಯಗಳು ಸಿಗುವ ಭರವಸೆ ದೇವೇಗೌಡರ ಕುಟುಂಬಕ್ಕಿದೆ…ಆದರೆ ಅವರಿಗೆ ಮೈಸೂರೂ ಲೊಕ ಸಭಾಕ್ಷೇತ್ರ ಬಹಳ ಪ್ರಮುಖವಾಗಿದೆ…ಕೊಡಗು ಮತ್ತು ಮೈಸೂರು ಕ್ಷೇತ್ರದಲ್ಲಿ ತಮ್ಮದೇ ಜಾತಿಯ ಒಕ್ಕಲಿಗ ಮತಗಳಿರುವ ಕಾರಣ ಮೈಸೂರಿನ‌ಮೇಲೂ ಅವರ ವಕ್ರದೃಷ್ಟಿ ಸಹಜವಾಗಿಯೇ ನೆಟ್ಟಿದೆ.ಈಗಾಗಲೆ ಅಲ್ಲಿಂದ ಎರಡುಬಾರಿ ಪ್ರತಾಪ ಸಿಂಹ ಸಂಸದನಾಗಿರುವ ಕಾರಣ ಅದು ಅಷ್ಟು ಸುಲಭವಾಗಿ ದೇವೇಗೌಡರ ತೆಕ್ಕೆ ಸೇರುವುದು ಕಷ್ಟವೇ ಎಂದರಿತ ಗೌಡರು….ಪ್ರತಾಪನ ವಿರುದ್ದ ಯಾವುದಾದರೂ ಗುರುತರವಾದ ಹಗರಣಗಳು ಸಿಗಬಹುದಾ ಎಂದು ತೆಲೆಕೆಡಿಸಿ ಕೊಂಡಿದ್ದರು…ಅದೇನು ಕಾಕತಾಳಿಯೊ…ಪ್ರತಾಪ ಸಿಂಹ ನೆಂಬ ಬೆತ್ತಲೆ ಜಗತ್ತಿನ ಬೆತ್ತಲೆ ಸಂಸದ,ಸಂಸತ್ ಭವನ ನುಗ್ಗಿ ಸ್ಮೋಕ್ ಬಾಂಬ್ ಹಾಕಿದವರಿಗೆ ಮೈಸೂರಿನ ತನ್ನ ಕಛೇರಿ ಇಂದಲೇ ಸಂಸತ್ ಭವನ ಪ್ರವೇಶಿಸಲು ಪಾಸ್ ಕೊಟ್ಟಿದ್ದ ಪ್ರಕರಣ ಸಂಸತ್ ಅಧಿವೇಶನದಲ್ಲಿ ದೊಡ್ಡ ರಾದ್ದಾಂತವೇ ನಡೆದು ಹೋಯಿತು…ವಿರೋಧ ಪಕ್ಷಗಳೂ ಅಧಿವೇಶನದಲ್ಲಿ ದೊಡ್ಡ ಪ್ರತಿಭಟನೆಯನ್ನೇ ಮಾಡಿದವು….ಇದಿಷ್ಟೇ ಸಾಕಾಯಿತು ಗೌಡರಿಗೆ…ಇವರ ಮಗ ಕುಮಾರಸ್ವಾಮಿ ಹೇಳೀಕೇಳಿ ಕುತಂತ್ರ ರಾಜಕಾರದಲ್ಲಿ ಅಪ್ಪ ದೇವೇಗೌಡರನ್ನೂ ಮೀರಿಸುವೊಷ್ಟು ಚಾಣಾಕ್ಷನೇ ಆಗಿರುವುದರಿಂದ ಪ್ರತಾಪನ ವಿರುದ್ದದ ಈ ಪ್ರಕರಣವನ್ನೇ ಜಾಣತನ ದಿಂದ ಬಳಸಿಕೊಂಡರು….ತಾವು ಹಚ್ಚುವ ಬೆಂಕಿಯ ಕಿಡಿಯನ್ನೂ ಬಯಲಿಗೆ ಬಿಡದಂತೇ ಬಿಜೆಪಿ ಹೈಕಮಾಂಡಿನ ಮೆದುಳಿಗೇ ತಾಗಿಸಿದರು ಅದು ಹಾಗೇ ಪ್ರತಾಪನ ವಿರುದ್ದ ಅದಮಧಾನ ಗೊಂಡರಲ್ಲ ಅದೇ ಅಸಮಧಾನದ ಗಾಳಿಯೂ ಹೈಕಮಾಂಡಿನ ತಲೆಯಲ್ಲಿ ಬೆಂಕಿ ಕಿಡಿಯಾಗಿ ಉರಿಯಲಾರಂಭಿಸಿತು….ಪ್ರತಾಪ ಸಿಂಹ ನಿಗೆ ಕ್ಷೇತ್ರ ಕೈ ತಪ್ಪಿಸಲು ಇದೊಂದೇ ಪ್ರಕರಣ ಸಾಲದಾಯಿತು ಎಂದೇ ಭಾವಿಸಿದ ಗೌಡರ ಕುಟುಂಬ ಕಾಯುತಿತ್ತು….ಅದೇನು ದೇವೇಗೌಡರ ತಂತ್ರಗಾರಿಕೆಯ ಅದೃಷ್ಟವೋ ಪ್ರತಾಪ ಸಿಂಹನ ದುರಾದೃಷ್ಟವೋ ಇವನ ಖಾಸಾ ತಮ್ಮ ವಿಕ್ರಂ ಸಿಂಹ ಎಂಬ ಮರಿ ಚಿಮ್ಮ ಬೇಲೂರು ಹೊಬಳಿಯ ಹಳ್ಳಿಯೊಂದರ ಜಮೀನಿನಲ್ಲಿದ್ದ ನೂರೂ ಚಿಲ್ಲರೆ ಬಿಟೆ ತೆಗ ದಂಥಾ ಬಹುಬೆಲೆ ಬಾಳುವ ಮರಗಳನ್ನು ಕಡಿದು ಸಾಗಿಸಿದನೆಂಬ ಪ್ರಕರಣವೊಂದು ಪೋಲೀಸ್ ಠಾಣೆಯಲ್ಲಿ ಧಾಕಲಾಯಿತು….ಇಲ್ಲಿಂದಲೇ ಪ್ರತಾಪ ಸಿಂಹನ ಶನಿ ಹೆಗಲೇರಿದ್ದು…ಹಾಸನ ಜಿಲ್ಲೆ ಹೇಳೀಕೇಳಿ ದೇವೇಗೌಡರ ಮಗ ರೇವಣ್ಣ ಮತ್ತು ಭವಾನಿ ರೇವಣ್ಣ ಕುಟುಂಬ ರಾಜಕಾರಣದ ರಿಪಬ್ಲಿಕ್ ಆಡಳಿತವಿದೆ ಇಲ್ಲಿ ರೇವಣ್ಣನ ಧರ್ಮ ಪತ್ನಿ ಭವಾನಿ ರೇವಣ್ಣನ ಅಪ್ಪಣೆ ಇಲ್ಲದೆ ಒಂದೇ ಒಂದು ಹುಲ್ಲುಕಡ್ಡಿಯೂ ಅಲ್ಲಾಡದಷ್ಟು ರಾಜಕೀಯ ಬಿಗಿ ಹಿಡಿತವಿದೆ…ಬೇಲೂರು ತಾಲೊಕಿನ ತಹಶೀಲ್ದಾರ್ ಮಮತಾ ಹೇಳೀಕೇಳಿ ಭವಾನಿ ರೇವಣ್ಣನ ಪರಮಾಪ್ತೆ ಹಾಗಾಗಿಯೇ ಮಮತಾರನ್ನೆ ತಂದು ಕೂರಿಸಿ ಕೊಂಡಿರೋದು ಎನ್ನುವ ಸಂಗತಿ ಹೊಸದೇನೂ ಅಲ್ಲ….ಇಲ್ಲಿ ಪ್ರತಾಪ ಸಿಂಹನ ತಮ್ಮ ವಿಕ್ರಂ ಸಿಂಹ ಸರಕಾರಿ ಗೋಮಾಳದಲ್ಲಿದ್ದ ಮರಗಳನ್ನು ಕಡಿದ ಪ್ರಕರಣವನ್ನು ದೇವೆಗೌಡರ ಕುಟುಂಬ ಜಾಣತನ ದಿಂದಲೇ ತಹಶೀಲ್ದಾರ್ ಮಮತಾರನ್ನು ಬಳಸಿಕೊಳ್ಳುವ ಪ್ಲಾನ್ ಮಾಡಿತು ಹಾಗೆ ನೋಡಿದರೆ ಪ್ರತಾಪ ಸಿಂಹನಿಗೆ ಮೈಸೂರು ಕೊಡಗು ಲೊಕ ಸಭಾ ಕ್ಷೇತ್ರದಲ್ಲಿ ಟಿಕೇಟ್ ತಪ್ಪಿಸಿ ರಾಜಕೀಯ ಉಂಡೆ ನಾಮ ತಿಕ್ಕಲು ತಮ್ಮ ಹಳೇ ಕುತಂತ್ರ ಪ್ರಯೊಗಿಸಿದರು…ದೆಹಲಿ ಬಿಜೆಪಿ ಹೈಕಮಾಂಡಿನೆದುರು ಮರ ಕಡಿದ ಪ್ರಕರಣವನ್ನೇ ಮುನ್ನೆಲೆಗೆ ತಂದು ಪಾಸ್ ಕೊಟ್ಟ ಪ್ರಕಣದ ಬೆಂಕಿಗೆ ಅಕ್ರಮವಾಗಿ ಮರ ಕಡಿದ ಪ್ರಕರಕ್ಕೆ ಪೆಟ್ರೊಲ್ ಸುರಿದು ಧಗಧಗಿಸುವಂತೆ ಮಾಡಿದರು…..ಇದು ಪ್ರತಾಪ ಸಿಂಹನಿಗೆ ದೇವೇಗೌಡರು ತೊಡಲೊರಟ ರಾಜಕೀಯ ಸಮಾಧಿ….ಇಂಥಾ ನಿಗೂಢ ಸತ್ಯ ಒಂದನ್ನು ತನ್ನ ಕುಂಡೆ ಬುಡದಲ್ಲೆ ಇಟ್ಟುಕೊಂಡು ಸಿದ್ದರಾಮಯ್ಯನ ಕಡೆ ಬೊಡ್ಟು ಮಾಡಿ ತೊರಿಸುತ್ತಿರುವ ಶತದಡ್ಡ ಪ್ರತಾಪನ ಧುಖಕ್ಕೆ ಸುರಿಯುತ್ತಿರುವ ಕಂಬನಿ ಒರೆಸಿಕೊಳ್ಳಲು ಯಾವ ಕರ್ಚಿಪ್ಪು ಕೊಡಬೇಕು

LEAVE A REPLY

Please enter your comment!
Please enter your name here