ಹುಣಸಗಿ: ಪಟ್ಟಣದ 16 ವಾರ್ಡುಗಳಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳನ್ನು ಬಹುಮತದಿಂದ ಆರಿಸ
ತರಬೇಕೆಂದು ಶಾಸಕ ರಾಜಾವೆಂಕಟಪ್ಪನಾಯಕ ಮತದಾರರಲ್ಲಿ ಮತಯಾಚಿಸಿದರು.

ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ಪಟ್ಟಣ ಪಂಚಾಯತ ಚುನಾವಣೆ ನೆಡಯುತ್ತಿದ್ದು ಮತದಾರರು ನಮ್ಮ ಕಾಂಗ್ರೆಸ್ ಪರ ಅಭ್ಯರ್ಥಿಗಳನ್ನು ಬಹುಮತದೊಂದಿಗೆ ಆರಿಸಿ ತರಬೇಕು ಜೊತೆಗೆ ಮುಂದಿನ ದಿನಗಳಲ್ಲಿ ಪಟ್ಟಣಕ್ಕೆ ಅವಶ್ಯಕತೆ ಇರುವ ಎಲ್ಲಾ ಸೌಲಭ್ಯಗಳನ್ನು ಮಾಡಿಸಿಕೊಡಲಾಗುವುದು ಈ ನಿಟ್ಟಿನಲ್ಲಿ ಪಟ್ಣದ 2ನೇ ವಾರ್ಡಿನ ಅಭ್ಯರ್ಥಿ ಯಾದ ಶಾಂತಪ್ಪ ಮಲಗಲದಿನ್ನಿ ಸೇರಿದಂತೆ ಎಲ್ಲ 16 ವಾರ್ಡುಗಳ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಯಾಚನೆ ಮಾಡಿದರು.

ಈ ವೇಳೆ ಕಾಂಗ್ರೆಸ್ ಯುವ ಮುಖಂಡರಾದ ರಾಜಾ ವೇಣುಗೋಪಾಲ್ ನಾಯಕ ಕೆಪಿಸಿಸಿ ಸದಸ್ಯರಾದ ಸಿದ್ದಣ್ಣ ಸಾಹು ಮಲಗಲದಿನ್ನಿ ಮಲ್ಲಣ್ಣ ಸಾವು ಮುಧೋಳ್. ಬ್ಲಾಕ್ ಮಹಾಂತೇಶ್ ಮಲಗುಲದಿನ್ನಿ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ್ ಸಾಹು ದಂಡಿನ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಆರ್ ಎಂ ರೇವಡಿ ಸಾಹು ಬಾಪುಗೌಡ ಪಾಟೀಲ್ ಬಿಜಿ ಸಜ್ಜನ್ ಅಂಬು ದೇಸಾಯಿ ರವಿ ಮಲಗಲದಿನ್ನಿ ಇನ್ನೂ ಅನೇಕ ಮುಖಂಡರುಗಳೂ ಉಪಸ್ಥಿತರಿದ್ದರು.





