ಕಲಬುರಗಿ ಜಿಲ್ಲೆಯ ಸನ್ನತಿ ಕನಗನಹಳ್ಳಿ ಬೌದ್ಧ ಸ್ತೂಪದ ಸುಂದರವಾದ ನೋಟದ ದೃಶ್ಯಗಳನ್ನು ಎರಡು ಕಣ್ಣಲ್ಲಿ ನೋಡಿದರು ಸಾಲದು ಅಂತಹ ಅದ್ಭುತ ಕಲೆಯನ್ನು ಹೊಂದಿದೆ ಆ ಸ್ತೂಪ.

ಕನಗನಹಳ್ಳಿ ಸ್ತೂಪದ ಇನ್ನೊಂದು ವಿಶೇಷತೆ ಏನೆಂದರೆ ಅಶೋಕ ಚಕ್ರವರ್ತಿಯು ಮಧ್ಯ ಏಷ್ಯಾದಿಂದ ಹಿಡಿದು ಶ್ರೀಲಂಕಾದವರೆಗೆ ಸಾರನಾಥ, ಸಾಂಚಿ, ಅಮರಾವತಿ ಅಂತಹ ಮಾಹಸ್ತೂಪಗಳನ್ನು ನಿರ್ಮಿಸಿದ್ದಾನೆ ಅವುಗಳಲ್ಲಿ ಕೇವಲ “ದೇವನಂ ಪ್ರಿಯ” ಎಂದು ಮಾತ್ರ ಉಲ್ಲೇಖಿಸಿಕೊಂಡಿದ್ದಾನೆ ಯಾವ ಸ್ತೂಪದಲ್ಲೂ ಕೂಡ ರಾಯ ಅಶೋಕ ಎಂದು ತನ್ನ ಭಾವ ಚಿತ್ರದ ಮೇಲ್ಭಾಗದಲ್ಲಿ ಬರೆಸಿಕೊಂಡಿರಲಿಲ್ಲ ಆದರೆ ಸನ್ನತ್ತಿ ಕನಗನಹಳ್ಳಿ ಸ್ತೂಪ ಮತ್ತು ಮಸ್ಕಿ ಶಾಸನಗಳಲ್ಲಿ ಮಾತ್ರ ದೇವನಂ ಪ್ರಿಯ ರಾಯ ಅಶೋಕ ಎಂದು ಉಲ್ಲೇಖವಿದೆ.

ಆ ಸ್ತೂಪದ ಮತ್ತೊಂದು ವಿಶೇಷವೆಂದರೆ ಈ ಸ್ತೂಪಕ್ಕೆ ಶಾಕ್ಯ ಮಾಹಚೈತ್ಯ ಎಂದು ಕೂಡ ಉಲ್ಲೇಖಿಸಲಾಗಿದೆ ಅಂದರೆ ಇದು ಬುದ್ಧ ಶಾಕ್ಯ ವಂಶದವರಾಗಿರುವುದರಿಂದ ಶಾಕ್ಯ ಮಾಹಚೈತ್ಯ ಭೂಮಿ ಎಂದು ಉಲ್ಲೇಖಿಸಲಾಗಿದೆ ಎಂತಹ ಅದ್ಭುತ ಯೋಚನೆ.
ಅಶೋಕ ಕ್ರಿಸ್ತ ಪೂರ್ವ ೩ ನೆಯ ಶತಮಾನದಲ್ಲೇ ಈ ಮಟ್ಟಿಗೆ ತನ್ನ ಇತಿಹಾಸ ಗೀಚಿ ಹೋಗಿದ್ದಾನೆ ಎಂದರೆ ಅದನ್ನು ನಾವು ಪ್ರಸ್ತುತ ೨೩೦೦ ವರ್ಷಗಳ ನಂತರವು ಕೂಡ ಸಾಮ್ರಾಟ್ ನಿರ್ಮಿಸಿದ ಸ್ತೂಪ ನೋಡುತ್ತಿದ್ದೇವೆ ಹಾಗೆ ಸಾಮ್ರಾಟ್ ಸ್ಪರ್ಶಿಸಿದ ನೆಲದ ಮೇಲೆ ನಾವು ಕೂಡ ಇವತ್ತು ಆ ಸ್ಥಳಕ್ಕೆ ಭೇಟಿ ಮಾಡಿ ಕಣ್ಣು ತುಂಬಿಕೊಳ್ಳುತ್ತದೇವೆ ಎಂದರೆ ಎಂತಹ ಅದ್ಭುತ ಕ್ಷಣವದು.
ಆ ಸ್ಥಳದಲ್ಲಿ ಅಶೋಕನ ಕೆತ್ತನೆ ಮಾಡಿಸಿದ ಆ ಮೂರ್ತಿಗಳೆಲ್ಲ ನೋಡುತ್ತ ನಿಂತರೆ ಆ ಸ್ಥಳ ನಮ್ಮನ್ನು ಅಶೋಕನ ಕಾಲದ ವೈಭವದ ಆಡಳಿತ ನಮ್ಮ ಕಣ್ಣೆದುರಿಗೆ ನೋಡುತ್ತಿದ್ದೇವೆ ಎಂಬಂತೆ ಮನಸ್ಸಿನ ಭಾವನೆಗಳನ್ನು ತಾನಾಗಿಯೇ ಹುಟ್ಟಿಕೊಳ್ಳುತ ಹೋಗುತ್ತವೆ.

ಅಷ್ಟೊಂದು ಅದ್ಭುತ ಸ್ಥಳ ಅದಾಗಿದೆ ನಾವು ಆ ಕಲಾಕೃತಿಗಳು ನೋಡುತ್ತಿದ್ದಂತೆ ನಮ್ಮನ್ನು ಆ ಸ್ಥಳ ಎರಡು ಸಾವಿರ ವರ್ಷಗಳ ಹಿಂದಕ್ಕೆ ಕರೆದುಕೊಂಡು ಹೋಗುತ್ತದೆ ಎಂದರೆ ನೀವೊಮ್ಮೆ ಯೋಚನೆ ಮಾಡಿ ಎಂತಹ ಅದ್ಭುತವಾಗಿ ನಿರ್ಮಿಸಲಾಗಿದೆ ಎಂದು.
ಸಾಮ್ರಾಟ್ ಅಶೋಕ ಚಕ್ರವರ್ತಿ ಎಂತಹ ಮುನ್ನಾಲೋಚನೆ ಹೊಂದಿದ್ದ ಎಂದರೆ ತನ್ನ ಇತಿಹಾಸ ಮುಂದೆ ಯಾರು ಕೂಡ ತಿರುಚಬಾರದು ಎನ್ನುವ ಕಾರಣಕ್ಕೆ ಕೆತ್ತನೆ ಮಾಡಿದ ಒಂದೊಂದು ಬಂಡೆಯ ಮೇಲು ತನ್ನ ಛಾಪನ್ನು ಒತ್ತಿ ಹೋಗಿದ್ದಾನೆ ಅವನು ಒತ್ತಿ ಹೋದ ಒಂದೊಂದು ಛಾಪನ್ನು ಕೂಡ ೨೩೦೦ ವರ್ಷಗಳ ನಂತರವೂ ಅಚ್ಚಳಿಯದೆ ಹಾಗೆ ಉಳಿದುಕೊಂಡಿವೆ.

ಅಶೋಕ ಚಕ್ರವರ್ತಿ ಹಾಗೆ ಮಾಡದಿದ್ದರೆ ಇವತ್ತು ಈ ಮನುವಾದಿಗಳು ಅವನ ಇತಿಹಾಸ ಯಾವುದಾದರೊಂದು ಪುರಾಣದ ಕಥೆಗಳಿಗೆ ಜೋಡಿಸಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವ ಕೆಲಸ ಮಾಡುತ್ತಿದ್ದರು ಹೀಗೆ ಮಾಡಲಿಕ್ಕೆ ಅಶೋಕ ಚಕ್ರವರ್ತಿ ಅವಕಾಶ ಮಾಡಿಕೊಟ್ಟಿಲ್ಲ ಇದೆ ಕಾರಣಕ್ಕೆ ಇವತ್ತು ಅಶೋಕ ಚಕ್ರವರ್ತಿಯು ನಿರ್ಮಿಸಿರುವ ಹಲವಾರು ಸ್ತೂಪಗಳು ಹೀಗೆ ಮಣ್ಣಿನಲ್ಲಿ ಮುಚ್ಚಿ ಹೋಗಿವೆ ಏಕೆಂದರೆ ಎಲ್ಲಿ ನಮ್ಮ ಜನಗಳಿಗೆ ತಮ್ಮ ನೆಲದ ನೈಜ ಇತಿಹಾಸ ತಿಳಿಯಬಾರದೆಂದು ಹೀಗೆ ಅಶೋಕನ ಇತಿಹಾಸ ನಿರ್ಲಕ್ಷಿಸಲಾಗಿದೆ .
ಅಶೋಕನ ನಾಡಿನಲ್ಲಿ ಯಾವ ರಾಮ ರಾಜ್ಯವು ಇರಲಿಲ್ಲ ಇದ್ದದ್ದು ಒಂದೇ ರಾಜ್ಯ ಅದು ಅಶೋಕ ಕಟ್ಟಿ ಆಳಿದ ಅಶೋಕ ಬೌದ್ಧ ರಾಜ್ಯ ಅದನ್ನು ಮರೆಮಾಚಲು ಆರ್ಯನ್ ವೈದಿಕರು ಕಾಲ್ಪನಿಕ ರಾಮಾಯಣ ಮಹಾಭಾರತ ಪುರಾಣದ ಕಥೆಗಳನ್ನು ಸೃಷ್ಟಿಸಿ ರಾಮ ರಾಜ್ಯ ಇತ್ತೆಂದು ಅಂದಿನಿಂದ ಇಂದಿನವರೆಗೂ ಜನರಿಂದ ಲಕ್ಷ್ಮೀ ನಾರಾಯಣ ಪೂಜೆ ಮಾಡಿಸುವ ನೆಪದಲ್ಲಿ ಮದುವೆ ಮನೆಗಳಲ್ಲೆಲ್ಲ ಗೊಂದಳ ಹಾಕಿಸಬೇಕೆಂಬ ಆಚರಣೆ ಮಾಡುವ ನೆಪದಲ್ಲಿ ಸಮಾರಂಭಗಳಲೆಲ್ಲ ತಾವೇ ಸೃಷ್ಟಿಸಿದ ಪುರಾಣದ ಕಥೆಗಳನ್ನು ಇಡೀ ರಾತ್ರಿ ಪುಂಗುತ್ತ ಬಂದು ಪುರಾಣದ ಕಥೆಗಳನ್ನೆ ಇತಿಹಾಸವೆಂದು ನಮ್ಮ ಜನರಿಗೆ ಈಗಲೂ ಟಿವಿ ಸಿನಿಮಾಗಳ ಮೂಲಕ ನಂಬಿಸುತ್ತ ಹೊರಟಿದ್ದಾರೆ.

ನೀವು ೩೦ ವರ್ಷ ಹಿಂದಕ್ಕೆ ಹೋಗಿ ಆಗ ಮನೋರಂಜನೆಗಾಗಿ ಯಾವುದೇ ಟಿವಿ ಗಳಿರುತ್ತಿರಲಿಲ್ಲ ಆಗ ನಿಮ್ಮ ಮನೆಗಳಲ್ಲಿ ಮದುವೆಗಳಿದ್ದರೆ ಮನೆಗಳಲ್ಲಿ ಸತ್ತವರ ದಿನ ಮಾಡಿಸುವಾಗ ಹೀಗೆ ಪುರಾಣ ಹೇಳುವ ಸ್ವಾಮಿ ಸಂತರಿಗೆ ಹಣ ನೀಡಿ ಕರೆಸುತ್ತಿದ್ದರು ಅವರಿಂದ ಇಡೀ ರಾತ್ರಿ ಇಂತಹ ಕಾಲ್ಪನಿಕ ಕಥೆಗಳನ್ನು ಕೇಳಿಸಿಕೆಳ್ಳುತ್ತಿದ್ದರು.
ಈಗಿನ ಕಂಪ್ಯೂಟರ್ ಕಾಲದಲ್ಲಿ ಸ್ವಲ್ಪ ಬದಲಾವಣೆಯಾಗಿದೆ ಈಗಿನ ಜನರಲ್ಲಿ ಸಿನಿಮಾ ಧಾರವಾಹಿಗಳ ಮೂಲಕ ಮತ್ತದೆ ಕಾಲ್ಪನಿಕ ಪುರಾಣದ ಕಥೆಗಳನ್ನು ಜನರ ತಲೆ ತುಂಬಿ ನಮ್ಮ ನೆಲದ ನೈಜ ಇತಿಹಾಸವನ್ನೇ ಮರೆಮಾಚುವಂತೆ ಮಾಡುತ್ತಿದ್ದಾರೆ.

ನಮ್ಮಲ್ಲಿ ಸಾವಿರಾರು ವರ್ಷಗಳಿಂದ ನಮ್ಮ ನೆಲದ ನೈಜ ಇತಿಹಾಸ ಮಣ್ಣಿನಲ್ಲಿ ಮುಚ್ಚಿಹೋಗುತ್ತಿದೆ ಹೊರಗಿನಿಂದ ಬಂದ ಆರ್ಯನ್ ಬ್ರಾಹ್ಮಣರ ಕಾಲ್ಪನಿಕ ಪುರಾಣ ಕಥೆಗಳ ಇತಿಹಾಸ ನೂರಾರು ವರ್ಷಗಳಿಂದ ನಮ್ಮ ತಲೆಯ ಮೇಲೆ ಕೂತು ಕುಣಿಯುತ್ತಿದೆ. ನಮ್ಮ ನೆಲದ ನೈಜವಾಗಿ ಐತಿಹಾಸಿಕವಾಗಿ ಆಳ್ವಿಕೆ ಮಾಡಿ ಹೋದ ನಮ್ಮ ಪೂರ್ವಜರ ಇತಿಹಾಸ ಹೀಗೆ ಮಣ್ಣಿನಲ್ಲಿ ಮುಚ್ಚಿಹೋಗುತ್ತಿದೆ.
ಒಂದು ವೇಳೆ ಈ ಕನಗನಹಳ್ಳಿ ಸ್ತೂಪದ ಜಾಗದಲ್ಲಿ ರಾಮಾಯಣ ಮಹಾಭಾರತದ ಕುರುಹುಗಳು ಸಿಕ್ಕಿದಿದ್ದರೆ ಅಲ್ಲಿ ಇಲ್ಲಿಯವರೆಗೆ ದೊಡ್ಡ ದೇವಲಯವೆ ನಿರ್ಮಾಣಮಾಡಿಸುತ್ತಿದ್ದರು ಆದರೆ ಅಲ್ಲಿ ಸಿಕ್ಕಿದ್ದು ನಮ್ಮ ಪೂರ್ವಜರು ಆಳ್ವಿಕೆ ಮಾಡಿದ ಮೌರ್ಯ ಶಾತವಾಹನರ ಕುರುಹುಗಳು ಇದೆ ಕಾರಣಕ್ಕೆ ಆ ಜಾಗಕ್ಕೆ ನ್ಯಾಯ ಸಿಕ್ಕಿಲ್ಲ ನ್ಯಾಯ ಏಕೆ ಸಿಕ್ಕಿಲ್ಲ ಎಂದರೆ ನಾವೆ ವೈದಿಕ ಧರ್ಮದ ಗುಲಾಮರಾಗಿ ನಮ್ಮ ಇತಿಹಾಸ ನಾವು ಮರೆತ ಕಾರಣ.
ಇವತ್ತು ಅದೆ ನಮ್ಮ ಜನರು ೯ ನೆಯ ಶತಮಾನದಲ್ಲಿ ನಿರ್ಮಿಸಲಾದ ಚಂದ್ರಲಾಪರಮೇಶ್ವರಿ ದೇವಸ್ಥಾನಕ್ಕೆ ದಿನಾಲೂ ಸಾವಿರಾರು ಜನರು ದೇವಸ್ಥಾನಕ್ಕೆ ಹೋಗಿ ಬರುತ್ತಾರೆ ಅದೆ ಪಕ್ಕದಲ್ಲಿ ನಮ್ಮ ಪೂರ್ವಜರೆ ಆದ ಅಶೋಕ ಚಕ್ರವರ್ತಿ ಶಾತವಾಹನರು ೨೩೦೦ ವರ್ಷಗಳ ಹಿಂದೆ ನಿರ್ಮಿಸಿದ ಬೌದ್ಧ ಸ್ತೂಪಕ್ಕೆ ಭೇಟಿ ನೀಡುವುದಿಲ್ಲ ಎಂದರೆ ಇಲ್ಲಿ ನಾವೆ ದ್ರೋಹಿಗಳೆಂದು ಅರ್ಥ.

ಇದೆ ಕಾರಣಕ್ಕೆ ನಮ್ಮ ನೆಲದ ನೈಜ ಇತಿಹಾಸ ಮರೆಮಾಚಲೆಂದೆ ನಮ್ಮ ಕಣ್ಣ ಎದುರಿಗೆ ನಮ್ಮ ಇತಿಹಾಸ ಮಣ್ಣಲ್ಲಿ ಮಣ್ಣಾಗುತ್ತಿದ್ದರು ನಮಗೂ ಅದಕ್ಕೂ ಯಾವುದೇ ಸಂಬಂಧವೆ ಇಲ್ಲವೆಂದು ಕಣ್ಣು ಮುಚ್ಚಿ ಕೂತಿದ್ದೇವೆ ಆದರೆ ನಮಗೆ ಗೊತ್ತಿಲ್ಲ ಅಶೋಕ ಚಕ್ರವರ್ತಿಯ ಕಾಲದಲ್ಲಿ ನಮ್ಮ ಪೂರ್ವಜರು ಆಳ್ವಿಕೆ ನಡೆಸಿದ್ದಾರೆ ನಮ್ಮ ನಾಡು ಕಟ್ಟಿದ್ದಾರೆ ಎಂದು. ಇವತ್ತು ಆರ್ಯನ್ನರ ಪುರಾಣದ ಕಥೆಗಳನ್ನು ನಂಬಿಕೊಂಡು ನಮ್ಮ ಪೂರ್ವಜರ ಇತಿಹಾಸ ಮರೆತಿದ್ದೇವೆ ದಯವಿಟ್ಟು ಆ ಬ್ರಾಹ್ಮಣ್ಯ ಎಂಬ ವೈರಸ್ ನಿಂದ ಹೊರಗೆ ಬನ್ನಿ ನಮ್ಮ ನೆಲದ ಬೌದ್ಧ ಪರಂಪರೆ ಉಳಿಸಿ.
ಅಂದಿನ ಮೌರ್ಯರು ಬೇರೆ ಯಾರು ಅಲ್ಲ ಅವರು ನಮ್ಮ ಇಂದಿನ ಮನುವಾದಿಗಳು ಹುಟ್ಟುಹಾಕಿದ ಶೂದ್ರರಾಗಿದ್ದಾರೆ ಇಂದಿನ ಶೂದ್ರ ಎಸ್ಸಿ ಎಸ್ಟಿ ಓಬಿಸಿ ಜನರೆ ಅಂದಿನ ಮೌರ್ಯ ವಂಶಸ್ಥರು ನಾಗ ವಂಶಸ್ಥರಾಗಿದ್ದಾರೆ. ರಾಯ ಅಶೋಕ ಪದದ ಅರ್ಥವೇನು ರಾಯಣ್ಣ ಎಂಬ ಹೆಸರು ಈಗಲೂ ನಮ್ಮ ಸಂಗೋಳ್ಳಿ ರಾಯಣ್ಣ ಹೆಸರಿನಲ್ಲಿ ಕಾಣಬಹುದು ಆದರೆ ಇವತ್ತು ನಾವು ಹೀಗೆ ಸಾವಿರ ಸಂಖ್ಯೆಯಲ್ಲಿ ಜಾತಿಗಳಾಗಿ ಏಕೆ ಒಡೆದು ಹೋಗಿದ್ದೇವೆ ಎಂದು ನೇವೆ ಯೋಚಿಸಿ ಕೇವಲ ಬ್ರಾಹ್ಮಣ ವೈದಿಕರ ಕಾರಣ ನಾವು ಇವತ್ತು ಸಾವಿರ ಜಾತಿಗಳಾಗಿ ಒಡೆದು ಹೋಗಿದ್ದೇವೆ.

ಅಂದಿನ ಅಶೋಕ ಚಕ್ರವರ್ತಿಯ ಕಾಲದಲ್ಲಿನ ಶಾತವಾಹನರು ಯಾರೆಂದು ನೆಮಗೆ ಗೋತ್ತೇ.. ಇದೆ ಹೊಲೆ ಮಾದಿಗರು ನಾಯಕ ಕಬ್ಬಲಿಗ ಕುರುಬರು ಇವತ್ತು ನಾವು ಒಡೆದು ಹೋಳಾಗಿದ್ದೇವೆ ಅಶೋಕ ಚಕ್ರವರ್ತಿಯ ಆಳ್ವಿಕೆಯಲ್ಲಿ ನಾವೆಲ್ಲರೂ ಶಾತವಾಹನ ಮೌರ್ಯ ವಂಶಸ್ಥರಾಗಿದ್ದೇವು ಎನ್ನುವುದು ನಮ್ಮ ಇತಿಹಾಸನ ಮತ್ತೆ ನೆನಪಿಸಿಕೊಳ್ಳಬೇಕು.(ಸಾಮಾಜಿಕಜಾಲತಾಣದಿಂದ ಆಯ್ಕೆ)





