ಹುಣಸಗಿ: ತಾಲೂಕಿನ ಕಾಂಗ್ರೆಸ್ ಪಕ್ಷದ ಕಟ್ಟಾ ಅಭಿಮಾನಿ ಹಾಗೂ ಶಾಸಕರ ಆಪ್ತರಾದ ರವಿಚಂದ್ರ ಅಯ್ಯಪ್ಪ ಮಲಗಲದಿನ್ನಿ ಅವರನ್ನು ಸುರಪುರ ವಿಧಾನ ಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮಿಕರಣ ಸಮಿತಿ ಸದಸ್ಯರನ್ನಾಗಿ ಶಾಸಕರಾದ ರಾಜಾವೆಂಕಟಪ್ಪನಾಯಕ ಅವರ ಅಧ್ಯಕ್ಷತೆಯಲ್ಲಿ ನೇಮಕ ಮಾಡಲಾಯಿತು.
ಈ ವೇಳೆ ಮಾತನಾಡಿದ ಶಾಸಕ ರಾಜಾವೆಂಕಟಪ್ಪನಾಯಕ ಅವರು ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ರ ಪ್ರಕರಣ 94ಎ(1) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಯಾದಗಿರಿ ಜಿಲ್ಲೆಯ ಸುರಪುರ ವಿಧಾನ ಸಭಾ ಮತಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು ತಕ್ಷಣ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ರಚಿಸಿ ಸಂಬಂಧಪಟ್ಟ ತಹಸೀಲ್ದಾರ ಅವರಿಗೆ ಆದೇಶಿಸಲಾಗಿದೆ ಎಂದು ತಿಳಿಸಿದರು.
ನಾಮ ನಿರ್ದೇಶಿತರ ವಿವರ:
1) ರಾಜಾವೆಂಕಟಪ್ಪನಾಯಕ ಶಾಸಕರು ಸುರಪುರ ವಿಧಾನಸಭಾ ಕ್ಷೇತ್ರ : ಅಧ್ಯಕ್ಷರು ವಿಧಾನಸಭಾ ಸದಸ್ಯರು .
2) ರವಿಚಂದ್ರ ಅಯ್ಯಪ್ಪ ಮಲಗಲದಿನ್ನಿ ಸಾ: ಹುಣಸಗಿ ಸದಸ್ಯರು / ಸಾಮಾನ್ಯ
3) ಸುರೇಶ ಮಾನಪ್ಪ ಬೈಲಾಪೂರ ಸಾ: ಶ್ರೀನಿವಾಸಪೂರ ಸದಸ್ಯರು/ಪ.ಜಾ
4) ಶ್ರೀಮತಿ ಬಸಮ್ಮ ಜೋತೆಪ್ಪ ಸಾ: ಕೋಳಿಹಾಳ ಸದಸ್ಯರು / ಮಹಿಳೆ
5) ಸಂಬಧಪಟ್ಟ ತಾಲೂಕಿನ ತಹಸೀಲ್ದಾರರು ಸದಸ್ಯ ಕಾರ್ಯದರ್ಶಿಗಳು
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ, ಕೆ.ಪಿ.ಸಿ.ಸಿ ಸದಸ್ಯ ಸಿದ್ದಣ್ಣ ಮಲಗಲದಿನ್ನಿ, ಬಸವರಾಜ ಬಳಿ, ಸಿದ್ದು ರೇವಡಿ, ರಾಜು ಕುಂಬಾರ, ಅಮರೇಶ ದೇಸಾಯಿ, ಅರುಣ ಮಲಗಲದಿನ್ನಿ, ಸೇರಿದಂತೆ ಇತರರು ಇದ್ದರು.

LEAVE A REPLY

Please enter your comment!
Please enter your name here