ಮೂಡಲಗಿ:ನ,25-ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ಬಸವೇಶ್ವರ ಕಾಲೇಜಿನ ವಿದ್ಯಾರ್ಥಿನಿಯಾದ ಸವಿತಾ ಕ್ರೀಡೆಯಲ್ಲಿ ಆಯ್ಕೆ. 2023-24ನೆಯ ಸಾಲಿನ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಹಾಗೂ ಎಸ್ ಪಿ ಎಮ್ ಬಿ ಪಿ ಈಡಿ ಕಾಲೇಜ ರಾಯಬಾಗ ಇವರ ಸಂಯುಕ್ತ ಆಶ್ರಯದಲ್ಲಿ ನಡೆದಹಿಳಾ ಯೋಗಾಸನ ಸ್ಪರ್ಧೆಯಲ್ಲಿ ಕಲ್ಲೋಳಿಯ ಶ್ರೀ ಬಸವೇಶ್ವರ ಕಲಾ ಮಹಾವಿದ್ಯಾಲಯದ ಕುಮಾರಿ ಸವಿತಾ ಬಿ.ಕೆ ಇವಳು ಯೂನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾಗಿದ್ದಾರೆ.
ಡಿಸೆಂಬರನಲ್ಲಿ ಚೆನೈ ಅಣ್ಣಾ ವಿಶ್ವವಿದ್ಯಾಲಯದ ನಮಕ್ಕಲದಲ್ಲಿ ನಡೆಯುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯಗಳ ಯೋಗಾಸನ ಸ್ಪರ್ಧೆಯಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಪ್ರತಿನಿಧಿಸಲಿದ್ದಾರೆ.
ಈ ಕುಮಾರಿ ವಿದ್ಯಾರ್ಥಿ ಸವಿತಾ ಹಿಂತ ಕ್ರೀಡೆಯಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ನಮ್ಮಿಂದ ಸಹಕಾರ ಇರುತ್ತದೆ.ಕ್ರೀಡೆ ಜೊತೆಯಲ್ಲಿ ವಿದ್ಯಾಭ್ಯಾಸಕ್ಕೂ ನಮ್ಮ ಬೆಂಬಲ ಇದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಈರಪ್ಪ ಬೆಳಕೂಡ ಹೇಳಿದರು. ಅಧ್ಯಕ್ಷ ರಮೇಶ ಬೆಳಕೂಡ,ಕಾರ್ಯದರ್ಶಿ ಡಾllಭೋಜರಾಜ ಬೆಳಕೂಡ,ಆಡಳಿತಾಧಿಕಾರಿ ಪ್ರಕಾಶ ಗರಗಟ್ಟಿ,ಪ್ರಾಚಾರ್ಯ ಡಾllಸಂಗಮೇಶ ಹೂಗಾರ ವಿದ್ಯಾರ್ಥಿಗೆ ಶುಭ ಹಾರೈಸಿದ್ದಾರೆ.