ಮೂಡಲಗಿ:ನ,20-ತಾಲೂಕಿನ ಗುರ್ಲಾಪೂರ ಕ್ರಾಸ್ ರಾಜ್ಯ ಹೆದ್ದಾರಿ ನಿಪ್ಪಾಣಿ-ಮುಧೋಳ ಬಸ್ ನಿಲ್ದಾಣದಲ್ಲಿ ಮತದಾರ ನೋಂದಣಿ/ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಜಾಥಾ ಕಾರ್ಯಕ್ರಮದಲ್ಲಿ ಜರುಗಿತು.
ಡಿಸೆಂಬರ್,09ರ ವರೆಗೆ ಪರಿಷ್ಕರಣೆಗೆವ ಅವಕಾಶವಿದ್ದು ಅರ್ಹ ಹೊಸ ಮತದಾರರು ನಿಗದಿತ ಅರ್ಜಿ ಸಲ್ಲಿಸಿ ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರಿಸಿಕೊಳ್ಳಬಹುದು. ಜೊತೆಗೆ ಫೋಟೋ ಬದಲಾವಣೆ,ವಿಳಾಸ ಬದಲಾವಣೆ ಸೇರಿ ಎಲ್ಲಾ ರೀತಿಯ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.ಈ ಅವಕಾಶವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು.ಮತದಾರರು ಪ್ರಜಾಪ್ರಭುತ್ವದ ವ್ಯವಸ್ಥೆಯ ನಿರ್ಮಾಪಕರು ಹಾಗಾಗಿ ಯಾರು ಕೂಡಾ ಮತದಾನದಿಂದ ಮತ್ತು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದೆಂದು ತಹಶಿಲ್ದಾರರಾದ ಮಹಾದೇವ ಸನಮುರಿ ಎಲ್ಲರೂ ನೋಂದಾಯಿಸಿ ಕೊಳ್ಳಿ ಎಂದು ಜಾಗೃತಿ ಮೂಡಿಸಿದರು.
ಬಿಇಒ ಅಜಿತ ಮನ್ನಿಕೇರಿ, ತಾಲೂಕಾ ಪಂಚಾಯತ ಎಮ್.ಡಿ ಸಂಗಮೇಶ ರೊಡ್ಡನ್ನವರ,ತಹಶಿಲ್ದಾರರ ಕಛೇರಿಯ ಸಿಬ್ಬಂದಿಗಳಾದ ಪಿ.ಎಸ್.ಕುಂಬಾರ,ರಾಕೇಶ ಢವಳೇಶ್ವರ, ದುಂಡಪ್ಪ ಗೋಪಾಳಿ ಹಾಗೂ ಇನ್ನು ಅನೇಕರು ಪಾಲ್ಗೊಂಡಿದ್ದರು

LEAVE A REPLY

Please enter your comment!
Please enter your name here