ದಾವಣಗೆರೆ ಅ.19.ರಾಜಕೀಯ ಕ್ಷೇತ್ರ ಸಂವಿಧಾನ ಆಶಯದಂತೆ ಸೇವಾ ಕ್ಷೇತ್ರ ವಾಗಿ ಉಳಿದಿಲ್ಲ ಎಂದು ಪರಮಪೂಜ್ಯ ಪರಮೇಶ್ವರ ಮಹಾಸ್ವಾಮಿಜಿ .ಗುರು ಕರಿಬಸವೇಶ್ವರ ಸ್ವಾಮಿ ಗದ್ದಿಗೆ ಮಠದ ಸ್ವಾಮಿಜೀ ಖೇಧಕದರ ಸಂಗತಿ ಎಂದರು.

ಕಕ್ಕರಗೊಳ್ಳದ ಜಿ.ಬಿ. ವಿನಯ್ ಕುಮಾರ್ ಅಭಿಮಾನಿ ಬಳಗದ ಆಶ್ರಯದಲ್ಲಿ ತಮ್ಮ ಜನಸಂಪರ್ಕ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ಧ  ವಿಕಲಚೇತನರಿಗೆ ವೀಲ್ ಚೇರ್, ವಾಕರ್ ಮತ್ತು ಶ್ರವಣ ಸಾಧನ ವಿತರಣಾ ಕಾರ್ಯಕ್ರಮದಲ್ಲಿ  ಅವರು ಮಾತನಾಡುತ್ತಿದ್ದರು.

ರಾಜಕೀಯಕ್ಷೇತ್ರ ಅನ್ನೋದು ಸೇವಾ ಕ್ಷೇತ್ರ ಹಾಗೆ ಉಳಿದಿಲ್ಲ ವ್ಯಾಪಾರೋದ್ಯಮವಾಗಿದೆ ಬಂಡವಾಳ ಹಾಕಿ ಬಂಡವಾಳ ತೆಗೆಯಬೇಕು ಎನ್ನುವ ಸೇವಾ ಮನೋಭಾವ ರಾಜಕೀಯ ವಲಯದಲ್ಲಿ ಬಂದಿದೆ ಸೇವಾ ಮನೋಭಾವ ಇಟ್ಟುಕೊಂಡು ಬರುವ ವ್ಯಕ್ತಿಗಳಿಗೆ ಇಲ್ಲಿ ಬಹಳ ಬ್ರಹ್ಮ ನಿರಸ ಆಗಿ ಈ ಕ್ಷೇತ್ರವೇ ಬೇಡ ಎನ್ನುವ ಸ್ಥಿತಿ ಬಂದಿದೆ ವಿನಯ್ ಕುಮಾರ್ ಶಿಕ್ಷಣ ಸಂಸ್ಥೆ ಮುಖಾಂತರ ಸೇವೆ ಮಾಡುತ್ತಿದ್ದಾರೆ ವಿನಯ್ ಕುಮಾರ್ ಅವರಿಗೆ ಸ್ವಾರ್ಥ ಇಟ್ಟುಕೊಂಡು ಕೆಲಸ ಮಾಡುತ್ತಿಲ್ಲ. ಸೇವಾ ಮನೋಭಾವ ದಿಂದ   ದುಡಿದ ಹಣದಲ್ಲಿ ಸಮಾಜ ಸೇವೆ ಮಾಡುತ್ತಿದ್ದಾರೆ.

 ಕೆಲವರಿಗೆ ಹಣ ಇರುತ್ತೆ ಆದರೆ ಬೇರೆಯವರಿಗೆ ಕೊಡುವ ಮನೋಭಾವ ಇರುವುದಿಲ್ಲ ಕೆಲವರಿಗೆ ಸೇವಾ ಮನೋಭಾವ ವಿರುತ್ತದೆ ಆರ್ಥಿಕ ಸ್ಥಿತಿ ಇರುವುದಿಲ್ಲ ವಿನಯ್ ಕುಮಾರ್ ಅವರಿಗೆ ಸೇವಾ ಮನೋಭಾವ ಇರುವುದು    ಅವರ ಸಮಾಜಮುಖಿ‌ಕಾರ್ಯಗಳು   ನಾನು  ಪತ್ರಿಕೆಗಳಲ್ಲಿ  ನೋಡುತ್ತಿದ್ದೆ    ಸರ್ಕಾರ ಮಾಡುವಂತಹ ಕೆಲಸ ವಿನಯ್ ಕುಮಾರ್ ಮಾಡುತ್ತಿದ್ದಾರೆ ಆದ್ದರಿಂದ ಇಂತಹ ಸೇವ ಮನೋಭಾವ ಇರುವಂತಹ ವ್ಯಕ್ತಿಗಳನ್ನು ನಾವು ಬೆಂಬಲಿಸಬೇಕಾಗಿದೆ ದಾವಣಗೆರೆಯಲ್ಲಿ ಎಷ್ಟೋ ರಾಜಕಾರಣಿಗಳಿದ್ದಾರೆ, ಅವರ ಮನೆಗಳಿಗೆ ಹೋಗುವುದಕ್ಕೆ ಆಗುವುದಿಲ್ಲ ಅಷ್ಟು ಭದ್ರಕೋಟೆ ಇರುತ್ತದೆ ಅಂತಹ ವ್ಯಕ್ತಿಗಳಿಂದ ನಾವು ಸೇವಾ ಮನೋಭಾವ ನಿರೀಕ್ಷಿಸುವುದು ಸಾಧ್ಯವಾಗುವುದಿಲ್ಲ ವಿನಯ್ ಕುಮಾರ್ ಅಂತ ಸರಳ ಸಜ್ಜನಿಕೆಯ ವ್ಯಕ್ತಿಗಳು ನಮಗೆ ಬೇಕಾಗಿದ್ದಾರೆ ಏಕೆಂದರೆ ಅವರಿಗೆ ಜನಸಾಮಾನ್ಯರ ಸಮಸ್ಯೆಗಳನ್ನು ಅರಿತು ಆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂಬ ಮನೋಭಾವ ಅವರದ್ದಾಗಿದೆ ಇತ್ತೀಚೆಗೆ ಹರಿಹರ ತಾಲೂಕು ಕೊಪ್ಪದಂತಹ ಕುಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ ಆ ವ್ಯವಸ್ಥೆ ಬಗ್ಗೆ ಅರಿತು ಶಾಶ್ವತ ಪರಿಹಾರ ಬೇಕಾಗಿದೆ ಎಂದು ಅವರು ತಿಳಿದು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದು ಸಂತೋಷದ ವಿಷಯವಾಗಿದೆ ಇಂಥವರಿಗೆ ಅಧಿಕಾರ ಸಿಕ್ಕಾಗ ಜನರಿಗೆ ಅಧಿಕಾರ ಸಿಕ್ಕಂತಾಗುತ್ತದೆ  ಎಂದು  ಹೇಳಿದರು ವಿನಯ್ ಕುಮಾರ್ ಇಂತಹ ಯುವ ಉತ್ಸಾಹಿ ಪ್ರಸ್ತುತ ಸಮಾಜಮುಖಿ ಕಾರ್ಯಗಳಿಗೆ ಹಾಗೂ  ನಿಮ್ಮಂತಹ ಅಸಕ್ತ ಸಮಾಜದ ಒಳಿತಿಗಾಗಿ ‌ವಿನಯ್ ಕಮಾರ್ ಅವರನ್ನು ಬೆಂಬಲಿಸೊಣ ಎಂದರು.

ಸ್ವಾಸ್ತ್ಯ ಸಮಾಜ ಬೇಕಾಗಿದೆಯೆ ಹೊರತು ಸ್ವಾರ್ಥದ  ಸಮಾಜ ನಮಗೆ  ಬೇಡ

ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ನ ಆಕಾಂಕ್ಷಿ, ಇನ್‌ಸೈಟ್ ಐಎಎಸ್ ತರಬೇತಿ ಸಂಸ್ಥೆ ಸಂಸ್ಥಾಪಕ ಜಿ.ಬಿ. ವಿನಯ ಕುಮಾರ್  ಪ್ರಾಸ್ತಾವಿಕ ವಾಗಿ ಮಾತನಾಡಿದ ಅವರು

ಪ್ರಜಾಪ್ರಭುತ್ವದಲ್ಲಿ ಜನರೇ ರಾಜರಾಗಿರಬೇಕು. ಇದರ ಅರಿವು ಹೊಂದಬೇಕು, ಅದು ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ. ಈಗಿನ ಶಿಕ್ಷಣ ಎಲ್ಲರನ್ನು ದಡ್ಡರನ್ನಾಗಿ ಮಾಡುತ್ತಿದೆ. ಹೊಸ ಅಲೋಚನೆ ಬರುವಂತಹ ಶಿಕ್ಷಣ ಬೇಕಾಗಿದೆ ಎಂದರು. 

ರಾಜಕಾರಣ ಮಾಡಿ ಅದರ ಮೇಲೆ ಬೆಳದು ದೊಡ್ಡ ಅಧಿಕಾರ ಪಡೆಯಲು ಮುಂದಾಗುವ ರಾಜಕಾರಣಿಗಳು ಜನರನ್ನು ವಂಚನೆ ಮಾಡುವ ಮೂಲಕ ಅಧಿಕಾರ, ಸಂಪತ್ತು, ಅವಕಾಶಗಳು ನನ್ನ ಕುಟುಂಬ ಮತ್ತು ನನ್ನವರಿಗೆ ಮಾತ್ರ ಇರಬೇಕು ಅನ್ನುವ ಮನೋಭಾವನೆ ಇದ್ದು,   ಈ ದೋರಣೆ ಬದಲಾಗಬೇಕಾಗಿದೆ. ಎಂದರು. 

ಸಮಾಜ ಕಳಕಳಿ, ಸೇವಾ ಮನೋಭಾವನೆ, ಜನರನ್ನು ಪ್ರೀತಿಸುವ ಮನೋಭಾವ ಹೊಂದಿರುವ ರಾಜಕಾರಣಿಗಳ ಅಗತ್ಯತೆ ಇದೆ. ಇವುಗಳಿದ್ದಲ್ಲಿ ಜನರ ಕಷ್ಟಕ್ಕೆ ನೆರವು ಆಗುವಂತಹ ಮನೋಭಾವನೆ ಬರುತ್ತದೆ. ಈ ಹಿನ್ನಲೆಯಲ್ಲಿ ಯಾವುದೇ ಅಡ್ಡ ಮಾರ್ಗದಿಂದ ದುಡಿಯದೆ ಶಿಕ್ಷಣ ಕ್ಷೇತ್ರದಲ್ಲಿ ಐಎಎಸ್ ತರಬೇತಿ ನೀಡುತ್ತಾ, ನನ್ನ ದುಡಿಮೆಯಲ್ಲಿ ಸಮಾಜ ಸೇವೆಗೆ ನನ್ನದೊಂದು ಸೇವೆ ಮಾಡಬೇಕು ಎಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮ ಆಯೋಜಿಸಿದ್ದೇನೆ. ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕಿರುವುದು ಸಂತೋಷವನ್ನು ಉಂಟು ಮಾಡಿದೆ ಎಂದರು. 

ಹದಡಿ, ಹೊಸನಾಯಕನಹಳ್ಳಿ ಚಂದ್ರಗಿರಿ ಮಠದ ಶ್ರೀ ಸದ್ಗುರು ಪರಮಹಂಸ ವಿದ್ಯಾವರೇಣ್ಯ ಮುರುಳೀಧರ ಸ್ವಾಮೀಜಿ, ಯರಗುಂಟೆಯ ಶ್ರೀ ಗುರುಕುಬಸವೇಶ್ವರ ಸ್ವಾಮಿ ಗದ್ದಿಗೆ ಮಠದ ಶ್ರೀ ಪರಮಪೂಜ್ಯ ಪರಮೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. 
ಆರಂಭದಲ್ಲಿ ಬಸವ ಕಲಾ ಬಳಗ ಆದರ್ಶ್ ಸ್ವಾಗತ ಗೀತೆ ನಂತರ ಹಿರಿಯ ಮಾಧ್ಯಮ ವರದಿಗಾರ ಪುರಂದರ್ ಲೋಕಿಕೆರೆ ಸ್ವಾಗತಿಸಿ ಮಿಸ್ ಕರ್ನಾಟಕ ಪುರಸ್ಕೃತೇ ಕು.ಸುಪ್ರಿತ ಒಡೆಯರ್ ಅವರ ಸುಂದರ ನಿರೂಪಣೆ, ವಿನಯ್ ರವರ ಬಯಾಗ್ರಫಿ ಯನ್ನ ಕಾರ್ಯಕ್ರಮ ನಡುವೆ ಸೇವಾ ಕೈಂಕರ್ಯ ಪರಿಚಯಿಸುವ ಅರ್ಥ ಪೂರ್ಣ ಆಗಿತ್ತು,
ಮೊದಲಿಗೆ ಇನ್ ಸೈಟ್ಸ್ ವಿನಯ್ ಕುಮಾರ್ ರವರು ತಾನೇಕೆ ಇಂಥ ಮಾನವೀಯ ಮೌಲ್ಯಗಳ ಸಾಮಾಜಿಕ ಸೇವೆ ಮಾಡುವ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾಲು ಊನ ಗೋಂಡವರಿಗೇ ವ್ಹೀಲ್ ಚೇರ್, ವಾಕರ್, ವಾಕಿಂಗ್ ಸ್ಟಿಕ್,ಶ್ರವಣ ಸಾಧನಗಳನ್ನು ಉಭಯ ಶ್ರೀಗಳ ಸಮ್ಮುಖದಲ್ಲಿ ಶಾಲು ಹೊದಿಸಿ ಗೌರವಿಸಿ ವಿಸ್ತರಿಸಿದ್ದು ಕಾರ್ಯಕ್ರಮ ಐಲೈಟ್ಸ್.

LEAVE A REPLY

Please enter your comment!
Please enter your name here