ದಾವಣಗೆರೆ. ಅ.೧೧; ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವವನು ನಾನು ಸಂವಿಧಾನ ಬದ್ಧವಾಗಿ ರಾಜಕಾರಣಮಾಡಲು ಬಂದಿದ್ದೇನೆ.ಹಣ,ಜಾತಿ,ಧರ್ಮಗಳ ಹೆಸರಿನಿಂದ ರಾಜಕಾರಣ ಮಾಡಲು ನನಗೆ ಇಷ್ಟವಿಲ್ಲಾ.ಜನರ ಮನ ದ್ವನಿಯಾಗಿ ಕೆಲಸಮಾಡಬಲ್ಲ ಅರ್ಹತೆ ನನಗಿದೆ. ಆದ್ದರಿಂದ ನಾನು ಸದಾ ಜನಸಾಮಾನ್ಯರಲ್ಲಿ ಬೆರೆತು ಅವರ ಬಳಿಗೆ ಹೋಗಿ ಅವರ ನೈಜತೆಯ ಕುಂದುಕೊರತೆಗಳನ್ನು ಕಂಡು ಅವರಿಗೆ ಸ್ಪಂದಿಸುವ ಜವಾಬ್ದಾರಿಯುತ ಜನಸೇವಕನಾಗಿ ಕೆಲಸಮಾಡುವ ಹಂಬಲ ನನ್ನದು. ಹಾಗಾಗಿ ನಾನು ಕಳೆದ ಮೂರು ನಾಲ್ಕು ತಿಂಗಳಿಂದ ಸತತವಾಗಿ ಪ್ರತಿ ಗ್ರಾಮ,ಹೋಬಳಿ,ತಾಲೂಕು ,ನಗರ,ಪಟ್ಟಣ ಗಳಲ್ಲಿ ಸಂಚರಿಸಿ ಸಾಧ್ಯವಾದಷ್ಟು ನನ್ನಮಟ್ಟಿಗೆ ಜನರ ಬೇಕು ಬೇಡಗಳಿಗೆ ಧ್ವನಿಯಾಗಿ ಸಮಾಜಸೇವೆಯಲ್ಲಿ ತೊಡಗಿದ್ದೇನೆಯೇ ಹೊರತು ನಾನು ಯಾವುದೇ ಪಕ್ಷ,ರಾಜಕಾರಣಿಗಳ ವಿರುದ್ಧ ಕೆಲಸಮಾಡುತ್ತಿಲ್ಲಾ.
ನಾನು ಒಬ್ಬ ಗ್ರಾಮೀಣ ಪ್ರದೇಶದ ಬಡಕುಟುಂಬದಿಂದ ಬಂದು ಶಿಕ್ಷಣ ಕ್ಷೇತ್ರದಲ್ಲಿ ಇನ್ ಸೈಟ್ಸ್ ಐ.ಎ.ಎಸ್ ಎಂಬ ತರಬೇತಿ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕನಾಗಿ ಅತ್ಯನ್ನತ ಶಿಕ್ಷಣ ಐ.ಎ.ಎಸ್ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿದ್ದೇನೆ.ನನ್ನ ಸಂಸ್ಥೆಯಲ್ಲಿ ತರಬೇತಿಪಡೆದ ಹಲವಾರು ವಿದ್ಯಾರ್ಥಿಗಳು ಉತ್ತಮ ಶ್ರೇಯಾಂಕದಲ್ಲಿ ತೇರ್ಗಡೆ ಹೊಂದಿ ದೇಶದ ವಿವಿಧ ಭಾಗಗಳಲ್ಲಿ ಅಷ್ಟೇ ಅಲ್ಲದೆ ವಿದೇಶದಲ್ಲಿಯೂ ಕೂಡಾ ನಾಗರೀಕ ಸೇವೆಯಲ್ಲಿ ತೊಡಗಿರುವುದರಿಂದ ದೇಶದ ಪ್ರತಿಷ್ಠಿತ ತರಬೇತಿ ಸಂಸ್ಥೆಗಳಲ್ಲೊಂದಾಗಿದೆ.ಇದು ದಾವಣಗೆರೆಗೆ ಹೆಮ್ಮೆಯಲ್ಲವೆ?ಅಷ್ಟೇ ಅಲ್ಲದೆ ದಾವಣಗೆರೆ ನಗರದ ವಿದ್ಯಾರ್ಥಿಯೊಬ್ಬರು ನಮ್ಮ ತರಬೇತಿ ಸಂಸ್ಥೆಯಲ್ಲಿ ಐ.ಎ.ಎಸ್ ಪರೀಕ್ಷೆಗೆ ತರಬೇತಿಪಡೆದು ರಾಜ್ಯದಲ್ಲಿಯೇ ಪ್ರಥಮ ಶ್ರೇಯಾಂಕದಲ್ಲಿ ಉತ್ತೀರ್ಣ ಆಗಿ ನಾಗರೀಕ ಸೇವೆಯಲ್ಲಿ ಸೇವೆಸಲ್ಲಿಸುತ್ತಿರುವುದು ದಾವಣಗೆರೆ ಸಂದ ಗೌರವ ಅಲ್ಲವೆ?
ನನಗೆ ನನ್ನದೇ ಆದ ಸಮಾಜ ಸುಧಾರಣೆ,ಕ್ಷೇತ್ರದ ಅಭಿವೃದ್ಧಿ, ಜನರ ಆಶೋತ್ತರ ಗಳಿಗನುಗುಣವಾಗಿ ಸ್ಪಂದಿಸಿ ಸಾರ್ವಜನಿಕ ಸೇವೆಯಲ್ಲಿ ಸೇವೆಸಲ್ಲಿಸಿ ಸಮಾಜಸೇವೆ ಮಾಡುವ ಅತ್ಯುತ್ಸಕನಾದ ಕಣಸುಗಳಿವೆ.ಆ ನಿಟ್ಟಿನಲ್ಲಿ ನಾನು ಸೇವಾ ಮನೋಭಾವದಿಂದ ಸೇವೆ ಸಲ್ಲಿಸುತಿದ್ದೇನೆ. ನನ್ನ ಜನಸೇವಾ ಚಟುವಟಿಕೆಗಳಿಂದಾಗಿ ಜಿಲ್ಲೆಯ ಜನರು ಸಹಜವಾಗಿಯೇ ನಿಮ್ಮಂಥ ಪ್ರತಿಭಾವಂತ ಯುವಕರು ಜನಸಾಮಾನ್ಯರ ಬಳಿ ಬಂದು ಕಷ್ಟಸುಖಗಳನ್ನು ವಿಚಾರಿಸುವಂಥವರು ರಾಜಕಾರಣಕ್ಕೆ ಬೇಕು ಹಾಗಾಗಿ ತಾವು ಈ ಬಾರಿ ನಡೆಯಲಿರುವ ಲೋಕಸಭೆಗೆ ಸ್ಪರ್ಧೆಮಾಡ್ರಿ ನಮ್ಮಂಥ ಲಕ್ಷಾಂತರ ಜನಬೆಂಬಲ ನಿಮಗೆ ಸಿಗುವ ವಿಶ್ವಾಸ ನಮಗಿದೆ ಎಂದು ಜನರ ಒತ್ತಾಶೆಯದಿಂದಾಗಿ ನಾನೂ ಒಬ್ಬ ದಾವಣಗೆರೆ ಲೋಕಸಭಾ ಕ್ಷೇತ್ರದ ಪ್ರಭಲ ಆಕಾಂಕ್ಷಿಯಾಗಿದ್ದೇನೆಯೇ ಹೊರತು.ದಿಢೀರೆಂದು ಹಣ,ಜಾತಿ,ಧರ್ಮ,ಅಥವಾ ಇನ್ಯಾವುದೋ ಲಾಟರಿ ಮುಖಾಂತರ ಬಂದವನಲ್ಲಾ ಎಂದು ಅಸಂತುಷ್ಟ ಮನಸ್ಸುಗಳಿಗೆ ಹೇಳಬಯಸುತ್ತೇನೆ.
ಕ್ಷೇತ್ರದ ಜನರ ಅನಿಸಿಕೆಗಳನ್ನು ಸನ್ಮಾನ್ಯ ಮುಖ್ಯಮಂತ್ರಿಗಳಬಳಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರ ಬಳಿ ಗಮನಕ್ಕೆ ತಂದಾಗ ಅವರು ಕ್ಷೇತ್ರದಲ್ಲಿ ಕೆಲಸಮಾಡು ಎಂದು ಪ್ರೋತ್ಸಾಹ ನೀಡಿದ್ದಾರೆ ಅದರ ಅನುಸಾರ ನಾನು ನನ್ನ ಸಮಾಜಸೇವಾ ಕಾರ್ಯವನ್ನು ಮುಂದುವರಿಸಿದ್ದೇನೆ ಎಂದು ದಾವಣಗೆರೆ ಲೋಕಸಭಾಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಭಲ ಆಕಾಂಕ್ಷಿ ಇನ್ ಸೈಟ್ಸ್ ಐ.ಎ.ಎಸ್ ಸಂಸ್ಥೆಯ ಶ್ರೀ ಜಿ.ಬಿ.ವಿನಯ್ ಕುಮಾರ್ ಹೇಳಿದ್ದಾರೆ.
ಇತ್ತೀಚೆಗೆ ಉಸ್ತುವಾರಿ ಸಚಿವ ಎಸ್ ಎಸ್.ಮಲ್ಲಿಕಾರ್ಜುನ್ ರವರು ಹಾಗೂ ಪಕ್ಷದ ಜಿಲ್ಲಾಧ್ಯಕ್ಷರ ಹೇಳಿಕೆಗಳನ್ನು ಗಮನಕ್ಕೆ ತಂದಾಗ ಉತ್ತರಿಸಿದ ವಿನಯ್ ಕುಮಾರ್ .ಕಾಂಗ್ರೆಸ್ ಪಕ್ಷ ಯಾರೊಬ್ಬರ ಪಿತ್ರಾರ್ಜಿತ ಆಸ್ತಿಯಲ್ಲ.ಅಲ್ಲಿ ಯಾವುದೇ ವ್ಯಕ್ತಿ,ಜಾತಿ,ಧರ್ಮ,ಹಣದ ರಾಜಕಾರಣ ನಡೆಯಲ್ಲಾ.ಅಲ್ಲಿ ಏನಿದ್ದರೂ ಜನಸಾಮಾನ್ಯರಿಗೆ ಸ್ಪಂದಿಸಿ ಕ್ಷೇತ್ರದ ಅಭಿವೃದ್ಧಿಗೆ ಯಾರು ಸಮರ್ಥರು ಎಂಬ ಗಹಣವಾದ ಸರ್ವೆ ಮಾಡಿ ಜನಾಭಿಪ್ರಾಯಕ್ಕೆ ತಕ್ಕ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತಾರೆಯೇ ಹೊರತು ನನ್ನ ಅಥವಾ ಇನ್ನೊಬ್ಬರ ಮುಲಾಜಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಟಿಕೇಟ್ ನಿರ್ಧರಿಸುದಿಲ್ಲಾ. ನಾನು ಮಾಡುತ್ತಿರುವ ಜನಪರ ಚಟುವಟಿಕೆಗಳು ಪಕ್ಷಸಂಘಟನೆಯನ್ನು ಬಲಗೊಳಿಸುತ್ತದೆ.ಅದರ ಫಲ ಯಾರಿಗಾದರೂ ಸಿಗಬಹುದು.ಪಕ್ಷ ಸಂಘಟನೆಯಾಗಿ ಬಲಿಷ್ಟಗೊಂಡಾಗ ಮಾತ್ರ ಗೆಲ್ಲಲು ಸಾಧ್ಯ. ಪ್ರತಿ ಗ್ರಾಮ ಮಟ್ಟದ ಕಾರ್ಯಕರ್ತರ ಬಳಿ ನಾವು ಹೋಗಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು.ನಾನು ಮಲ್ಲಿಕಾರ್ಜುನ ರವರಿಗಾಗಲಿ ಮಂಜಪ್ಪನವರಿಗಾಗಲಿ ಮತ್ತಿನ್ಯಾರಿಗೇ ಆದರೂ ಹೇಳುವಮಾತು ಒಂದೇ ನಾವು ಕಾಂಗ್ರೆಸ್ ನವರು ಕಾಂಗ್ರೆಸ್ ಪಕ್ಷ ಬಲಿಷ್ಠ ಗೊಳ್ಳಬೇಕು ಮೊದಲು ಅದಕ್ಕೆ ಆದ್ಯತೆ ನೀಡ್ರಿ ಚುನಾವಣೆ ಬಂದಾಗ ವರಿಷ್ಠರು ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಿ ವರದಿ ತರಿಸಿಕೊಂಡು ಜನಾಕರ್ಷಣೆ ಮತ್ತು ಜನಾಭಿಪ್ರಾಯ ಆಧರಿಸಿ ಟಿಕೇಟ್ ನೀಡುತ್ತಾರೆ.ಆಗ ನಾವೆಲ್ಲರೂ ಸೇರಿ ಒಗ್ಗಟ್ಟಿನಿಂದ ಪಕ್ಷವನ್ನು ಗೆಲ್ಲಿಸ ಬೇಕು ವಿನಯ್ ಕುಮಾರ್ ,ಮಂಜಪ್ಪ,ಮಲ್ಲಿಕಾರ್ಜುನ ಇನ್ಯಾರದೋ ಹೆಸರುಗಳನ್ನಲ್ಲಾ.ಪಕ್ಷದ ಗೆಲುವಿಗಾಗಿ ಪಕ್ಷ ಬಲಿಷ್ಠ ಗೊಳಿಸುವುದು,ಪರಿಶ್ರಮ,ತ್ಯಾಗ ಮನೋಭಾವ ಹೊಂದಬೇಕಾಗುತ್ತದೆ ಅಂತಾ ಮುಖಂಡರ ಕಾರ್ಯಕರ್ತರ ಪಡೆ ಪಕ್ಷಕ್ಕೆ ಅಗತ್ಯವಾಗಿದೆ.ಇತ್ತೀಚಿಗೆ ಮೂರು ನಾಲ್ಕು ಚುನಾವಣೆಯಲ್ಲಿ ಪಕ್ಷ ಸೋಲಿಗೆ ವ್ಯಕ್ತಿಯ ಹೆಸರುಗಳು ಕಾರಣವಾಗಿವೆ ಹೊರತು ಪಕ್ಷವಲ್ಲಾ.ಪಕ್ಷಕಿಂತ ವ್ಯಕ್ತಿ ದೊಡ್ಡವರಲ್ಲಾ ಪಕ್ಷದೊಡ್ಡದು. ಪಕ್ಷಕೊಟ್ಟ ಜವಾಬ್ದಾರಿಹೊತ್ತು ಪ್ರಾಮಾಣಿಕತೆಯಿಂದ ಕೆಸಮಾಡಿದರೆ ಗೆಲುವು ನಿಶ್ಚಿತ.ವ್ಯಕ್ತಿಯನ್ನು ದೊಡ್ಡವನೆಂದು ಬಿಂಬಿಸಲು ಹೋದಾಗ ಸೋಲು ಖಚಿತ.ಆದ್ದರಿಂದ ಯಾರಮೇಲೆ ಯಾರೂ ಸವಾರಿ ಮಾಡುವುದಾಗಲಿ ವೈಮನಸ್ಸು ಬೆಳೆಸಿಕೊಳ್ಳುವುದಾಗಲೀ ವ್ಯಕ್ತಿತ್ವದ ಘನತೆಯನ್ನು ಹಾಳುಮಾಡುತ್ತದೆ ಹಾಗಾಗದಂತೆ ಜಾಗೃತರಾಗಿ ಪಕ್ಷ ಬಲಿಷ್ಠ ಗೊಳಿಸಿ ಪಕ್ಷದ ವರಿಷ್ಠರು ಕೊಟ್ಟ ಜವಾಬ್ದಾರಿ ಮೂಲಕ ಜನಸಾಮಾನ್ಯರಿಗೆ ಸ್ಪಂದಿಸಿ ಅವರ ಮಧ್ಯ ಬೆರೆಯಲು ಎಲ್ಲರೂ ಪ್ರಯತ್ನಿಸೋಣ.ಪಕ್ಷದ ಗೆಲುವಿಗಾಗಿ ಶ್ರಮಿಸೋಣ ಎಂದು ಹೇಳಿದರು.
ದಿನಾಂಕ:12-10-2023ರಂದು ಹರಿಹರ ತಾಲೂಕಿನ ಕೊಪ್ಪ ಗ್ರಾಮದಲ್ಲಿ ವಾಸ್ತವ್ಯ ಮಾಡುವುದಾಗಿ ಈ ಸಂದರ್ಭದಲ್ಲಿ ಹೇಳಿದರು.