ಮೂಡಲಗಿ: ಸ,30-ಪಟ್ಟಣದ ಶ್ರೀಕಲ್ಮೇಶ್ವರ ವೃತ್ತದಲ್ಲಿ ರೈತ ಸಂಘಟನೆ,ನಿವೃತ್ತ ಸೈನಿಕರ ಸಂಘ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕಾವೇರಿ ನೀರು ತಮಿಳುನಾಡಿಗೆ ಬಿಡುವುದ್ದನ್ನು ಖಂಡಿಸಿ ಕೆಲ ಘಂಟೆಯವರೆಗೆ ರಸ್ತೆ ಬಂದ್ ಮಾಡಿ ಸರ್ಕಾರದ ಎದುರು ಆಕ್ರೋಶ ಹೋರ ಹಾಕಿದರು. ನಂತರ ಸಂಘನೆಗಳು ಕೂಡಿ ತಹಶಿಲ್ದಾರರಾದ ಶಿವಾನಂದ ಬಬಲಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಕೊಡಲಾಯಿತು.
ರೈತ ಸಂಘಟನೆಯ ಮುಖಂಡರಾದ ಗುರುನಾಥ ಹುಕ್ಕೇರಿ,ವೀರಣ್ಣ ಸಸಾಲಟ್ಟಿ,ಸುರೇಶ ನಾಯಿಕ,ಸಂಗಪ್ಪ ಹಡಪದ,ಮತಾನಾಡಿ ರಾಜ್ಯದ ಜನತೆಯ ಹಿತದೃಷ್ಟಿಯಿಂದ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬಾರದೆಂದು ಆಗ್ರಹಿಸಿದರು.ರೈತ ಮುಖಂಡರಾದ ಕುಮಾರ ಮರ್ದಿ,ಮಂಜು ಗದಾಡಿ,ರವಿ ನುಚ್ಚುಂಡಿ,ಪಾರೀಶ ಉಪ್ಪಿನ,ಭೀಮಪ್ಪ ರೋಡನ್ನವರ,ಪ್ರಕಾಶ ತೇರದಾಳ,ಬಾಬು ಅಂಗಡಿ,ವಿವೇಕ ಸನದಿ,ಮಹಾದೇವ ಬಂಗೆನ್ನವರ,ಸೋಮಲಿಂಗಪ್ಪ ರಬಕವಿ,ಆನಂದ ಚರಾಠಿ,ಕಲ್ಲಪ್ಪ ಹುಲಕುಂದ,ಲಕ್ಕಪ್ಪ ಖಾಸದಾರ,ಬಸು ಮಿರ್ಜಿ,ಬಸಯ್ಯ ಹಿರೇಮಠ,ಸದಾಶಿವ ನಾವಿ,ಮಲ್ಲಪ್ಪ ಕಬ್ಬೂರ ಮತ್ತು ನಿವೃತ್ತ ಸೈನಿಕು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.