ಬಾಗಲಕೋಟೆ:ಅಗಷ್ಟ 28 ರಂದು ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ದುಷ್ಕರ್ಮಿಗಳು ನಡಿಸಿದ ದುಷ್ಕೃತ್ಯದಿಂದ ನಾನು ಬುದ್ದ, ಬಸವ, ಅಂಬೇಡ್ಕರ್ ಮತ್ತು ಕನಕದಾಸರ ಕೃಪಾ ಆರ್ಶೀವಾದದಿಂದ ಪ್ರಾಣಾಪಾಯದಿಂದ ಪಾರಾಗಿದದೇನೆ. ಈ ದುಷ್ಕೃತ್ಯ ನಡೆದ ತಕ್ಷಣವೇ ಮುಧೋಳ ನಗರದಲ್ಲಿ ಎಲ್ಲ ರೈತ ಮುಖಂಡರು, ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಯ ಕಾರ್ಮಿಕರು, ಮುಧೋಳ ನಗರದ ಪ್ರಜ್ಞಾವಂತ ನಾಗರಿಕರು ಪ್ರತಿಭಟನೆ ನಡಿಸಿ ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿದರು ಎಲ್ಲರಿಗೂ ನಾನು ತುಂಬು ಹೃದಯದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಈ ದುಷ್ಕೃತ್ಯದ ಕುರಿತು ನಿರಂತರವಾಗಿ ವರದಿ ಮಾಡಿ ತನಿಖೆಯ ಗಂಭೀರತೆಯ ಬಗ್ಗೆ ಬೆಳಕು ಚೆಲ್ಲಿದ ಎಲ್ಲ ಪತ್ರಿಕಾ ಮತ್ತು ದೃಶ್ಯ ಮಾಧ್ಯಮದ ಪ್ರತಿನಿಧಿಗಳಿಗೆ ತುಂಬು ಹೃದಯದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ಈ ದುಷ್ಕೃತ್ಯ ನಡೆದ ಮರು ದಿನವೇ ನಮ್ಮ ಮುಧೋಳದ ವಕೀಲರ ಸಂಘದ ಎಲ್ಲ ಹಿರಿಯ ನಾಯ್ಯವಾದಿಗಳು, ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಎಲ್ಲ ಸಹೋದರ ನ್ಯಾಯವಾದಿಗಳು ಕೋರ್ಟ್ ಕಲಾಪದಿಂದ ಹೊರಗೆ ಒಳಿದು ಈ ದುಷ್ಕೃತ್ಯವನ್ನು ಖಂಡಿಸಿ ತಹಶೀಲ್ದಾರ್ ಮುಧೋಳ ಇವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಎಲ್ಲ ನ್ಯಾಯವಾದಿಗಳಿಗೆ ತುಂಬು ಹೃದಯದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ಜಮಖಂಡಿ, ಬಾದಾಮಿ, ಬಾಗಲಕೋಟೆ, ಹುನಗುಂದ, ಗೋಕಾಕ, ಮೂಡಲಗಿ, ಬೀಳಗಿ ಮತ್ತು ಅಥಣಿ ವಕೀಲರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಎಲ್ಲ ಹಿರಿಯರು ನ್ಯಾಯವಾದಿಗಳು ಮತ್ತು ಸಹೋದರ ನ್ಯಾಯವಾದಿಗಳು ಈ ದುಷ್ಕೃತ್ಯವನ್ನು ಖಂಡಿಸಿ ಕೋರ್ಟ್ ಕಲಾಪದಿಂದ ಹೊರಗೊಳಿದು ಸರ್ಕಾರಕ್ಕೆ ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ. ಎಲ್ಲರಿಗೂ ನಾನು ತುಂಬು ಹೃದಯದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ಮುಧೋಳ ನಗರದಲ್ಲಿ ಈ ದುಷ್ಕೃತ್ಯವನ್ನು ಖಂಡಿಸಿ ಭೀಮ್ ಆರ್ಮಿ ಸಂಘಟನೆ,ರೈತ ಸಂಘ, ದಲಿತಪರ, ಅಲ್ಪಸಂಖ್ಯಾತರ ಪರ, ಕನ್ನಡಪರ ಮತ್ತು ಎಲ್ಲ ಸಮಾಜದ ಮುಖಂಡರು ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದಾರೆ. ಎಲ್ಲರಿಗೂ ನಾನು ತುಂಬು ಹೃದಯದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಬಾಗಲಕೋಟೆ, ಜಮಖಂಡಿ, ಬಾದಾಮಿ, ಬೀಳಗಿ, ಹುನಗುಂದ, ಕೊಲ್ಹಾರ ಮತ್ತು ಇಳಕಲ್ ಈ ದುಷ್ಕೃತ್ಯ ವನ್ನು ಖಂಡಿಸಿ ರೈತ ಸಂಘ, ಕನ್ನಡಪರ ಮತ್ತು ದಲಿತ ಪರ ಸಂಘಟನೆಗಳು ಪ್ರತಿಭಟನೆ ನಡಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ ಎಲ್ಲ ಮುಖಂಡರಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ರಾಜ್ಯದ ವಿವಿಧ ಭಾಗಗಳಿಂದ ಮುಖ್ಯವಾಗಿ ಮೈಸೂರು, ಧಾರವಾಡ, ಲಿಂಗಸೂರು, ಯರಗಟ್ಟಿ, ಚಿಂಚೋಳಿ, ವಿಜಯಪುರ, ನರಗುಂದ, ಸವದತ್ತಿ ಇನ್ನೂ ಅನೇಕ ಭಾಗಗಳಿಂದ ಈ ದುಷ್ಕೃತ್ಯವನ್ನು ಖಂಡಿಸಿ ಪ್ರತಿಭಟನೆ ಮಾಡಿ ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಲಾಗಿದೆ. ಎಲ್ಲ ಮುಖಂಡರಿಗೆ ತುಂಬು ಹೃದಯದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ಕರ್ನಾಟಕ ಪ್ರದೇಶ ಕುರುಬರ ಸಂಘ ಬೆಂಗಳೂರು ಈ ದುಷ್ಕೃತ್ಯವನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ಕರೆ ನೀಡಲಾಗಿತು. ಸಂಘದ ಅಧ್ಯಕ್ಷರಿಗೆ, ಕಾರ್ಯದರ್ಶಿಗಳಿಗೆ ಹಾಗೂ ಎಲ್ಲ ನಿರ್ದೇಶಕರಿಗೆ ತುಂಬು ಹೃದಯದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಕುರುಬ ಸಮಾಜದ ವಿವಿಧ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯ ನವರನ್ನು ಹಾಗೂ ಗೃಹ ಸಚಿವರಾದ ಸನ್ಮಾನ್ಯ ಜಿ. ಪರಮೇಶ್ವರ ಅವರನ್ನು ಭೇಟಿ ಮಾಡಿ ಸೂಕ್ತ ತನಿಖೆಗೆ ಆಗ್ರಹಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ಮಾಡಿದ್ದಾರೆ. ಎಲ್ಲರಿಗೂ ತುಂಬು ಹೃದಯದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಬಾಗಲಕೋಟೆ ಜಿಲ್ಲಾ ಕುರುಬರ ಸಂಘದ ನೇತೃತ್ವದಲ್ಲಿ ಬಾಗಲಕೋಟೆ, ಬೀಳಗಿ, ಗುಳೆದಗುಡ್ಡ ಮತ್ತು ವಿವಿಧ ಭಾಗಗಳಲ್ಲಿ ಪ್ರತಿಭಟನೆ ಮಾಡಿ ಈ ದುಷ್ಕೃತ್ಯವನ್ನು ಖಂಡಿಸಲಾಗಿದೆ. ಎಲ್ಲ ಕುರುಬರ ಸಂಘದ ಅಧ್ಯಕ್ಷರಿಗೆ, ಪದಾಧಿಕಾರಿಗಳಿಗೆ ಮತ್ತು ಮುಖಂಡರಿಗೆ ತುಂಬು ಹೃದಯದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ತಿಂಥಣಿ ಮಠದ ಪೂಜ್ಯ ಸಿದ್ದರಾಮನಂದ ಪುರಿ ಸ್ವಾಮೀಜಿ ಹಾಗೂ ವಿವಿಧ ಪೂಜ್ಯರು ಆಸ್ಪತ್ರೆಗೆ ಭೇಟಿ ನೀಡಿ ಧೈರ್ಯವನ್ನು ನೀಡಿ ಬೆಂಬಲಿಸಿದರು ಎಲ್ಲ ಪೂಜ್ಯರಿಗೆ ತುಂಬು ಹೃದಯದ ಧನ್ಯವಾದಗಳು . ಆಸ್ಪತ್ರೆಗೆ ಭೇಟಿ ನೀಡಿ ಧೈರ್ಯ ನೀಡಿದ ಎಲ್ಲ ಗುರು ಹಿರಿಯರಿಗೆ ತುಂಬು ಹೃದಯದ ಧನ್ಯವಾದಗಳು
ಭಾರತೀಯ ಶರಣ ಸೇನಾದ ರಾಷ್ಟ್ರೀಯ ಸಂಚಾಲಕರಾದ ಶ್ರೀಯುತ ರಾಯಸಂದ್ರ ರವಿಕುಮಾರ್ ಮತ್ತು ಶ್ರೀಯುತ ಸತೀಶ್ ಟಿ. ವಿ ಅವರು ಬಾಗಲಕೋಟೆಗೆ ಆಗಮಿಸಿ ಪತ್ರಿಕಾಗೋಷ್ಠಿಯನ್ನು ಮಾಡಿ ಮತ್ತು ಬೀಳಗಿ ಪಟ್ಟಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಈ ದುಷ್ಕೃತ್ಯವನ್ನು ಖಂಡಿಸಿದ್ದಾರೆ. ಇವರಿಗೂ ಸಹಿತ ತುಂಬು ಹೃದಯದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ನನಗೆ ಮುಧೋಳದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಡಾ. ಉದಯ ನಾಯಕ ಅವರಿಗೆ ಬಾಗಲಕೋಟೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯರಿಗೆ ಹಾಗೂ ಡಾ. ವಾಸನದ, ಡಾ. ರಾಹುಲ್ ಇಂಗನಾಳ ಮತ್ತು ನನ್ನನ್ನು ಪ್ರೀತಿ ವಿಶ್ವಾಸದಿಂದ ಆರೈಕೆ ಮಾಡಿ ಡಾ. ವಾಸನದ ಆಸ್ಪತ್ರೆಯ ಸಿಬ್ಬಂದಿ ಅವರಿಗೆ ತುಂಬು ಹೃದಯದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ಈ ದುಷ್ಕೃತ್ಯ ನಡೆದ ನಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಯುತ ಆರ್. ಬಿ. ತಿಮ್ಮಾಪೂರ ಸಾಹೇಬರು ಅವರು ತಕ್ಷಣವೇ ಪೋಲಿಸ್ ಅಧಿಕಾರಿಗಳಿಗೆ ದುಷ್ಕರ್ಮಿಗಳ ಬಂಧನಕ್ಕೆ ಸೂಚನೆ ನೀಡಿದರು ಅದೇ ರೀತಿ ಹಿರಿಯ ನಾಯಕರಾದ ಶ್ರೀಯುತ ಜೆ. ಟಿ. ಪಾಟೀಲ ಸಾಹೇಬರು, ಶ್ರೀಯುತ ಬಿ. ಬಿ. ಚಿಮ್ಮನಕಟ್ಟಿ ಸಾಹೇಬರು, ಶ್ರೀಮತಿ ವೀಣಾ ಕಾಶಪ್ಪನ್ನವರ ಮತ್ತು ಹಿರಿಯರಾದ ಶ್ರೀಯುತ ನಂಜಯ್ಯನಮಠರು ಇನ್ನೂ ಮುಂತಾದ ಮುಖಂಡರು ವಾಸನದ ಆಸ್ಪತ್ರೆಗೆ ಆಗಮಿಸಿ ಆರೋಗ್ಯ ವಿಚಾರಿಸಿ ನನಗೆ ಧೈರ್ಯ ತುಂಬಿದರು ಇವರಿಗೆ ತುಂಬು ಹೃದಯದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ಬಸವಾದಿ ಶರಣರನ್ನು, ಸಿಂಧೂರ ಲಕ್ಷ್ಮಣ, ಹಲಗಲಿಯ ಜಡಗಣ್ಣ – ಬಾಲಣ್ಣ, ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅಪ್ರತಿಮ ವ್ಯಕ್ತಿಗಳ ಹೋರಾಟಗಳನ್ನು, ಸಿದ್ಧಾಂತಗಳನ್ನು ಒಪ್ಪದವರು ಮೋಸದಿಂದ ಹತ್ಯೆ ಮಾಡಿದ್ದಾರೆ. ಇಂತಹ ಪುಣ್ಯ ಭೂಮಿಯಲ್ಲಿ ಜನಿಸಿರುವ ನಾನು ಅವರ ಆದರ್ಶಗಳನ್ನು ಓದಿಕೊಂಡು ಬೆಳೆದಿದ್ದೇನೆ. ಇಂತಹ ದುಷ್ಕರ್ಮಿಗಳು ಈಗಲೂ ಸಹಿತ ಸಕ್ರಿಯರಾಗಿದ್ದಾರೆ. ಇವರ ಪ್ರಾಣ ಬೆದರಿಕೆಗೆ, ಆಸೆ – ಆಮಿಷಗಳಿಗೆ ಹಾಗೂ ಇವರ ಪ್ರಭಾವಕ್ಕೆ ನಾನು ಯಾವತ್ತೂ ಅಂಜುವುದಿಲ್ಲ ನನ್ನ ಸಾಮಾಜಿಕ ಚಿಂತನೆಗಳನ್ನು, ಭ್ರಷ್ಟರ ವಿರುದ್ಧ ಹೋರಾಟವನ್ನು ಮುಂದುವರಿಸಿಕೊಂಡು ಹೋಗುತ್ತೇನೆ.
ಪೋಲಿಸ್ ಇಲಾಖೆ ಬಗ್ಗೆ ಜನ ಸಾಮಾನ್ಯರು ಅಪಾರವಾದ ಪ್ರೀತಿ – ವಿಶ್ವಾಸ ಮತ್ತು ನಂಬಿಕೆ ಇಟ್ಟುಕೊಂಡಿದ್ದಾರೆ. ಜನರ ಈ ಪ್ರೀತಿ – ವಿಶ್ವಾಸ ಮತ್ತು ನಂಬಿಕೆಗೆ ಧಕ್ಕೆ ಆಗದ ಹಾಗೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ನನ್ನ ಕೊಲೆ ಮಾಡಲು ಸಂಚು ರೂಪಿಸಿದ ಪ್ರಮುಖ ಆರೋಪಿಗಳು ರಾಜಾರೋಷವಾಗಿ ಹುಟ್ಟು ಹಬ್ಬವನ್ನು ಮತ್ತು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಅವರನ್ನು ವಿಚಾರಣೆ ಮಾಡಲಾಗಿದಿಯೇ? ತನಿಖೆಯು ಸರಿಯಾದ ಮಾರ್ಗದಲ್ಲಿ ನಡೆಯುತ್ತಿದೆಯೇ? ಸಾರ್ವಜನಿಕರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಎಲ್ಲ ಸಂಘಟನೆಗಳ ಮುಖಂಡರು ಉನ್ನತ ತನಿಖೆಗಾಗಿ ಸಿ. ಐ. ಡಿ ಗೆ ಈ ಪ್ರಕರಣವನ್ನು ವರ್ಗಾಯಿಸಲು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರನ್ನು ಭೇಟಿ ಮಾಡಲಿದ್ದಾರೆ. ನನ್ನನ್ನು ಎದುರಿಸಲಾಗದೆ ಇಂತಹ ಹೇಡಿತನದ ಹೀನ ಕೃತ್ಯವನ್ನು ಮಾಡಿದ್ದಾರೆ. ಜನರು ಇವರಿಗೆ ತಕ್ಕ ಪಾಠವನ್ನು ಕಲಿಸುತ್ತಾರೆ.ಎಂದು ರೈತಪರ ಹೋರಾಟಗಾರ ಶ್ರೀ ಯಲ್ಲಪ್ಪ ಹೆಗಡೆ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ.ಪತ್ರಿಕಾ ಗೋಷ್ಠಿಯಲ್ಲಿ
ಬಸವರಾಜ ಧರ್ಮಂತಿ ಕರವೇ ಜಿಲ್ಲಾಧ್ಯಕ್ಷರು ಬಾಗಲಕೋಟೆ,ಸಿದ್ದಪ್ಪ ಬಳಗಾನೂರ,ಹಣಮಂತ ಶಿಂಧೆ,ಪರಶುರಾಮ ಮಂಟೂರ,ಯಮನಪ್ಪ ಯಳ್ಳಿಗುತ್ತಿಮುಂತಾದ ಮುಖಂಡರುಗಳು ಉಪಸ್ಥಿತರಿದ್ದರು.