ಮಲೆನಾಡಿನ ಮಡಿಲಿನಲ್ಲಿ ವಿಶಿಷ್ಟ ರೀತಿಯಲ್ಲಿ ಜೀವನ ನಡೆಸುತ್ತಿರುವ ಧನಗರ ಗೌಳಿ…ನಮ್ಮ ರಾಜ್ಯದ ಉತ್ತರ ಕನ್ನಡ ,ಧಾರವಾಡ ,ಬೆಳಗಾವಿ ಜಿಲ್ಲೆಗಳಲ್ಲಿ ವಾಸವಾಗಿರುವ ಧನಗರ್ ಗೌಳಿ ಜನಾಂಗ ಮೂಲತಃ ಮಹಾರಾಷ್ಟ್ರ ಗೋವಾದಿಂದ ಇಲ್ಲಿಗೆ ವಲಸೆ ಬಂದವರು .ಮೂಲ ಕಸಬು ಹೈನುಗಾರಿಕೆ
ಇಂದು ಅರಣ್ಯ ಇಲಾಖೆಗಿಂತ ಹೆಚ್ಚಾಗಿ ಇವರಿಂದಲೇ ಅರಣ್ಯ ರಕ್ಷಣೆಯಾಗಿದೆ ಏಕೆಂದರೆ ಮರ ಗಿಡಗಳನ್ನೇ ದೇವರೆಂದು ಭಾವಿಸಿ ಪೂಜಿಸುತ್ತಾರೆ .ಶುಚಿತ್ವ ಮತ್ತು ಶಿಕ್ಷಣದಿಂದ ದೂರವಿರುವ ಇವರು ಕೂಡ ಅವಕಾಶ ವಂಚಿತ ಹಿಂದುಳಿದ ಜನಾಂಗ. ಇಲ್ಲಿನ ಸ್ವಚ್ಛ ಗಾಳಿ ನೀರು ಶಾಂತ ವಾತಾವರಣವೇ ಇವರ ಬದುಕಿನ ಸೌಂದರ್ಯ ಮತ್ತು ಸೊಬಗು. ದಸರಾ ಮತ್ತು ದೀಪಾವಳಿ ಹಬ್ಬಗಳನ್ನು ಅತ್ಯಂತ ಸಂಭ್ರಮದಿಂದ ಆಚರಿಸುವ ಇವರು 9 ದಿನ ಉಪವಾಸ ಆಚರಿಸುತ್ತಾರೆ .ಆ ಸಮಯದಲ್ಲಿ ನಿತ್ಯ ಗಜ್ಜಾ ಕುಣಿತ ಮತ್ತು ಪುಗುಡಿ ನೃತ್ಯವಿರುತ್ತದೆ . ಶ್ರೀ ಪಾಂಡುರಂಗ ಮುಗ್ಧ ಧನಗರ್ ಗೌಳಿಗರ ಆರಾಧ್ಯ ದೈವ .
ಇವರಲ್ಲಿ ನಾಚಿಕೆ ಮತ್ತು ಹಿಂಜರಿಕೆ ಸ್ವಭಾವ ಜಾಸ್ತಿ ಯಾರಲ್ಲೂ ಅಷ್ಟಾಗಿ ಬೆರೆಯುವುದಿಲ್ಲ ಮಾತೃಭಾಷೆ ಕೊಂಕಣಿ ಮಿಶ್ರಿತ ಮರಾಠಿ .ಜಗದೀಶ್ ಧನದರ್ ಜೊತೆ ಹದಿನೈದು ನಿಮಿಷ ಮಾತನಾಡಿದಾಗ ಒಂದು ವಿಷಯ ಅತ್ಯಂತ ಸ್ಪಷ್ಟವಾಯಿತು .ಏನೇ ಕೇಳಿ ( ಭೂತ ವರ್ತಮಾನ ಭವಿಷ್ಯದ ಬಗ್ಗೆ ) ಪೂರ್ವಿಕರು ಹಿರಿಯರು ಆಚರಿಸಿಕೊಂಡು ಬಂದದ್ದನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದೇವು ಹೋಗುತ್ತಿದ್ದೇವೆ ಮತ್ತು ಹೋಗುತ್ತೇವೆ ಎನ್ನುತ್ತಾನೆ. ಅವರು ಇನ್ನೂ ಆರ್ಥಿಕವಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಸುಧಾರಣೆಯಾಗಬೇಕಾಗಿದೆ. …. ವಿಭಿನ್ನ ವೇಷ ಭೂಷಣದ ಧನಗರ ಗೌಳಿ ನಮ್ಮ ಹೆಮ್ಮೆ.