ದಾವಣಗೆರೆ:ಲೋಕಸಭೆಯ ಚುನಾವಣೆ 2024,ಕ್ಕೆ ನಡೆಯಬೇಕಾಗಿದೆ. ದೇಶದ ಎಲ್ಲಾ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ಘೋಷನೆಯಾಗುವುದನ್ನೇ ಎಲ್ಲ ಪಕ್ಷಗಳ ನೋಟ ಚುನಾವಣಾ ಆಯೋಗದತ್ತ. ಹೀಗಿರುವಾಗ ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರುಗಳು ಯಾವ ತಂತ್ರ ಪ್ರತಿಪಕ್ಷಗಳಿಗೆ ಯಾವ ಪ್ರತಿತಂತ್ರ ಹೆಣೆಯುತ್ತಿದ್ದಾರೆಂದು ಇನ್ನೂ ಬಹಿರಂಗ ಗೊಂಡಿಲ್ಲಾ. ಕಾರಣ ಶತಾಯಗತಾಯ ರಾಜ್ಯದಿಂದ ಕನಿಷ್ಟ ಇಪ್ಪತ್ತಕ್ಕೂ ಹೆಚ್ಚು ಸ್ಥಾನಗಳನ್ನು ಲೋಕಸಭೆಗೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆ ಮಾಡಿ ಕಳಿಸಬೇಕೆಂಬ ಅಛಲ ನಿರ್ಧಾರದಿಂದಾಗಿ ಕಾಂಗ್ರೆಸ್ ರಾಜ್ಯ ಮುಖಂಡರುಗಳು ಬೇರೆ ಬೇರೆ ಪಕ್ಷಗಳನ್ನು ರಾಜ್ಯದಲ್ಲಿ ನಿಶಕ್ತಗೊಳಿಸಲು ತಂತ್ರಗಳನ್ನು ರೂಪಿಸುತಿದ್ದು ಬೇರೆ ಪಕ್ಷಗಳಿಂದ ನಾಯಕರನ್ನು ಕಾಂಗ್ರೆಸ್ಗೆ ಕರೆತರುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.ಬೇರೆ ಪಕ್ಷಗಳಿಂದ ಕರೆತರುವ ಮುಖಂಡರುಗಳಿಗೆ ಯಾವಯಾವ ಸ್ಥಾನಮಾನಗಳನ್ನು ಕೊಡಬೇಕಾಗುತ್ತೋ ಅದರ ಅನುಗುನವಾಗಿ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷನೆ ಮಾಡಬೇಕಾಗುತ್ತದೆ. ಹಾಗಾಗಿ ರಾಜ್ಯದ ಯಾವ ಲೋಕಸಭೆ ಕ್ಷೇತ್ರದಲ್ಲೂ ಇಂಥವರಿಗೇ ಕಾಂಗ್ರೆಸ್ ಟಿಕೇಟ್ ನೀಡುತ್ತದೆಂಬ ಸುಳಿವು ಇಲ್ಲಿಯ ವರೆಗೆ ಕಾರ್ಯಕರ್ತರಿಗಷ್ಟೇ ಅಲ್ಲಾ ಬಹುತೇಕ ರಾಜ್ಯದ ಯಾವ ಮುಖಂಡರಿಗೂ ಸೂಚನೆಗಳಿಲ್ಲಾ. ಹಾಗಿದ್ದರೂ ಕೂಡಾ ಸ್ಪರ್ಧಾ ಆಕಾಂಕ್ಷಿಗಳ ಸಂಖ್ಯೆಗೇಳೇನೂ ಕಮ್ಮಿ ಇಲ್ಲಾ. ರಾಜ್ಯದ ಪ್ರತಿಲೋಕ ಸಭೆಗೆ ಕಾಂಗ್ರೆಸ್ ಪಕ್ಷದಿಂದ ಐದರಿಂದ ಏಳೆಂಟು ಜನ ಸ್ಪರ್ಧಾ ಆಕಾಂಕ್ಷಿಗಳು ಅದರಲ್ಲಿ ವಿಶೇಷವಾಗಿ ಯುವ ಜನಾಂಗ ಹೆಚ್ಚು ಉತ್ಸುಕರಾಗಿದ್ದಾರೆ.ಜೊತೆಗೆ ಮಹಿಳೆಯರೂ ಕೂಡಾ ಸ್ಪರ್ಧಾ ಆಕಾಂಕ್ಷಿಗಳಾಗಿರುವುದೂ ಸ್ವಾಗತಾರ್ಹವಿಷಯವೇ.

(ನಾನೊಭ್ಬ ಪ್ರಾಮಾಣಿಕ ಮತ್ತು ನಿಸ್ಪಕ್ಷಪಾತ ಪತ್ರಕರ್ತನಾಗಿ ಜನಮಾನಸದಿಂದ ಸಂಗ್ರಹಿಸಿದ ಅನಿಸಿಕೆಗಳನ್ನು ಈ ಮೂಲಕ ಹಂಚಿಕೊಳ್ಳಲು ಯಾವಹಿಂಜರಿಕೆಯೂ ಇಲ್ಲಾ. ನಾನು ನಿಸ್ಪಕ್ಷಪಾತ,ನಿಸ್ವಾರ್ಥ,ನಿರ್ಭಿಡೆ,ಸ್ವಾಭಿಮಾನಿಯಾದ ಯಾವುದೋ ಜಾತಿ,ಧರ್ಮ,ವ್ಯಕ್ತಿ ಆಶೆ,ಆಕಾಂಕ್ಷೆಗಳಿಲ್ಲದೆ ಸ್ವಾಭಿಮಾನಿ ಪತ್ರಕರ್ತನಾಗಿ ನನ್ನ ವೃತ್ತಿಧರ್ಮಕ್ಕನುಗುನವಾಗಿ ಪ್ರಸ್ತುತ ಪಡಿಸುತಿದ್ದೇನೆ.)

ಮೇಲೆ ತಿಳಿಸಿದ ಹಾಗೆ ಲೋಕಸಭೆಗೆ ರಾಜ್ಯದಲ್ಲಿ ಇನ್ನೂ ಯಾವಕ್ಷೇತ್ರಗಳಿಗೂ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಪಕ್ಷ ಆಸ್ವಾಸನೆಗಳನ್ನು ನೀಡಿಲ್ಲಾ ಸಾಮಾನ್ಯವಾಗಿ ರಾಜ್ಯದ ಯಾವಕ್ಷೇತ್ರದಲ್ಲೂ ಕಂಡುಬರದ ಟಿಕೇಟ್ ಆಕಾಂಕ್ಷಿಗಳ ಪ್ರಚಾರದ ಕಾರ್ಯವು ದಾವಣಗೆರೆ ಕ್ಷೇತ್ರದಲ್ಲಿ ಸುಮಾರು ಮೂರುತಿಂಗಳುಗಳಿಂದ ಕ್ಷೇತ್ರದಾದ್ಯಂತ ಜಾತಿ,ಧರ್ಮ,ಪಕ್ಷ,ಸಂಘ-ಸಂಸ್ಥೆ,ಗುರು-ಶಿಷ್ಯ,ಹಿರಿಯರು,ಯುವಜನ,ಜನಪ್ರತಿನಿಧಿಗಳನ್ನ್ಯು ಭೇಟಿಮಾಡಿ ತಮ್ಮ ಅಹ್ವಾಲನ್ನು ಅರ್ಪಿಸಿ ತಮ್ಮ ತಮ್ಮ ಶಕ್ತಾನುಸಾರ ತಾವೇ ಟಿಕೇಟ್ ತರುವುದು ಗ್ಯಾರಂಟಿ ನಮಗೇ ತಾವು ಆಶಿರ್ವದಿಸಿ ಬೆಂಬಲಿಸಬೇಕೆಂದು ಒಂದಲ್ಲಾ ಎರಡಲ್ಲಾ ಮೂರು ನಾಲ್ಕು ಸಲ ಗ್ರಾಮ,ಪಟ್ಟಣ,ತಾಲೂಕು,ಹೋಬಳಿ ಮಟ್ಟದಲ್ಲಿ ಸಭೆಸಮಾರಂಭಗಳನ್ನು ಮಾಡಿ ಜನಾಭಿಪ್ರಾಯಗಳನ್ನು ಸಂಗ್ರಹಿಸುವುದರಜೊತೆಗೆ ತಮ್ಮನ್ನು ಬೆಂಬಲಿಸಿ ಗೆಲ್ಲಿಸಬೇಕೆಂದು ಮನವಿಯನ್ನೂ ಮಾಡಿಕೊಳ್ಳು ತಿದ್ದಾರೆ. ಈ ವಿಷಯದಲ್ಲಿ ಇನ್ ಸೈಟ್ಸ್ ಐಎಎಸ್,ಸಂಸ್ಥಾಪಕ ನಿರ್ದೇಶಕರಾದ ಯುವ ಐಕಾನ್ ಎಂದೇ ಕರೆಸಿಕೊಳ್ಳುತ್ತಿರುವ ಜಿ,ಬಿ,ವಿನಯ್ ಕುಮಾರ್ ಒಂದು ಹೆಜ್ಜೆ ಮುಂದೆ ಇದ್ದಾರೆಂದೇ ಹೇಳಲಾಗುತ್ತದೆ. ವಿನಯ್ ಕುಮಾರ್ಗೆ ಯಾವುದೇ ರಾಜಕೀಯ ಬಲಾಢ್ಯ ಶಕ್ತಿಯ ಹಿನ್ನೆಲೆ ಇಲ್ಲದೆ ತನ್ನ ಸ್ವ ಸಾಮಥ್ರ್ಯದಿಂದ ನೂರಾರು ಯುವಕರಿಗೆ ಉನ್ನತ ಮಟ್ಟದ ಐಎಎಸ್ ತರಬೇತಿನೀಡಿ ದೇಶದ ವಿವಿಧ ಭಾಗಗಳಲ್ಲಿ ಜಿಲ್ಲಾಧಿಕಾರಿಗಳಂಥಾ ಹುದ್ದೆಯಲ್ಲಿ ಕಾರ್ಯನಿರ್ವಹಿಸುವಂಥಾ ಶಕ್ತಿ ನೀಡಿದ್ದೂ ಅಲ್ಲದೆ ವಿದ್ಯಾವಂತ,ಪ್ರಜ್ಞಾವಂತ,ವಿಚಾರವಂತ,ಸೌಮ್ಯಸ್ವಭಾವದವರು ಮತ್ತು ಆಡಳಿತಾತ್ಮಕ ಕಾನೂನು,ಸೇವೆಗಳ ಜ್ಞಾನ ಹೊದಿರುವ ಯುವ ಚೈತನ್ಯ ಇಂಥವರು ರಾಜಕೀಯಕ್ಕೆ ಬರಬೇಕು ಎನ್ನುವವರ ಸಂಖ್ಯೆಯೂ ಹೆಚ್ಚಾಗಿ ಕೇಳಿಬರುತ್ತಿದೆ ಜನಮತ ಗಳಿಸುವಲ್ಲಿ ಯಶಸ್ಸು ಕಾನುತಿದ್ದಾರೆ. ವಿನಯ್ ಕುಮಾರ್ಗೆ ಈಗಿರುವ ಟ್ರೆಂಡ್ ಹೀಗೇ ಮುಂದುವರಿದರೆ ಅವರ ಪ್ರಯತ್ನಕ್ಕೆ ಖಂಡಿತ ಪಲಸಿಗುವ ಸೂವಣೆಗಳಿವೆ.

ಇನ್ನು ಹೆಚ್.ಬಿ.ಮಂಜಪ್ಪ,ನಿಖಿಲ್ ಕುಮಾರ್ ಕೊಂಡಜ್ಜಿ, ಇವರು ಪ್ರಸ್ತುತ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದು ಮಂಜಪ್ಪನವರು ಹಾಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರಿ ಹಿಂದೆ ಜಿಲ್ಲಾಪಂಚಾಯತ್ ಅಧ್ಯಕ್ಷರಾಗಿಯೂ ಕೆಲಸಮಾಡಿದ್ದಾರೆ ಅಲ್ಲದೆ 2019ರ ಲೋಕಸಭೆ ಚೂನಾವಣೆಗೆ ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧಿಸಿ ಲಕ್ಷಕ್ಕೂ ಅಧಿಕ ಮತಗಳಿಸಿದ್ದಾರೆ ಆದರೆ ಗೆಲುವು ಬಿಜೆಪಿಯದ್ದಾಯಿತು. ನಿಖಿಲ್ ಕೊಂಡಜ್ಜಿ ಜಿಲ್ಲಾ ಯುವ ಕಾಂಗ್ರೆಸ್ ಹಾಲಿ ಅಧ್ಯಕ್ಷರು ಮತ್ತು ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ಅವರು ಮತ್ತು ಶ್ರೀ ಶಿವಕುಮಾರ್ ಒಡೆಯರ್ ಇವರಿಗೆ ರಾಜಕೀಯದಲ್ಲಿ ಅಷ್ಟೊಂದು ಅನುಭವ ಇರದಿದ್ದಿರಬಹುದು ಆದರೆ ರಾಜಕೀಯ ಕುಟುಂಬದ ಹಿನ್ನೆಲೆಯುಳ್ಳವರು ನಿಖಿಲ್ ಕೊಂಡಜ್ಜಿಯವರ ತಾತನವರು ಕೋಂಡಜ್ಜಿ ಬಸಪ್ಪನವರು ಅವರ ಕೊಡುಗೆ ಸಮಾಜಕ್ಕೆ ಇದೆ. ಶ್ರೀಮತಿ ಪ್ರಭ ಮಲ್ಲಿಕಾರ್ಜುನರವರೂ ಕೂಡಾ ಪ್ರತಿಭಾವಂತೆ ,ವಿದ್ಯಾವಂತೆ, ಸೌಮ್ಯಸ್ವಭಾವ ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವ ಹೃದಯವಂತಿಕೆಯ ಮನಸ್ಸುಳ್ಳವರು ಆದರೆ ಅವರಿಗೆ ಹಿರಿಯ ಮುತ್ಸದ್ದಿ ರಾಜಕಾರಣಿ ದಾವಣಗೆರೆ ಮಟ್ಟಿಗೆ ಕಾಂಗ್ರೆಸ್ ಹೈಕಮಾಂಡೆ ಆಗಿರುವ ಮಾಜಿಸಂಸದ,ಮಾಜಿ,ಸಚಿವ ಹಾಲಿ ದಾವಣಗೆರೆ ದಕ್ಷಿಣ ವಿಧಾನಸಭೆಯ ಶಸಕರಾದ ಡಾ.ಶಾಮನೂರು ಶಿವಶಂಕ್ರಪ್ಪನವರ ಸೋಸೆ ಮತ್ತು ದಾವಣಗೆರೆ ಉತ್ತರ ವಿಧಾನಸಭೆ ಶಾಸಕ ಹಾಲಿ ಸಚಿವರಾದ ಎಸ್,ಎಸ್,ಮಲ್ಲಿಕಾರ್ಜುನರವರ ಧರ್ಮಪತ್ನಿ.ಯಾದ್ದರಿಂದ ಇವರಿಗೆ ಗಾಡ್ ಫಾದರ್ ನಿಮಗಾಗಲೇ ಗೊತ್ತಾಗಿರ್ತದೆ.

ಇನ್ನು ಪ್ರಮುಖವಾಗಿ ದಾವಣಗೆರೆಯ ಹ್ಯಾಟ್ರಿಕ್ ಸಂಸದರೆಂದೇ ಹೆಸರುವಾಸಿಯಾದ ಅತ್ಯಂತ ಸರಳ,ಸಜ್ಜನ,ಪ್ರಾಮಾಣಿಕ,ಜನಾನುರಾಗಿ, ನಿರ್ಗರ್ವಿ,ಯಾಗಿದ್ದು ಚುನಾವಣೆಯ ಯಾವುದೇ ಅಕ್ರಮ,ಆಶೆ,ಆಮಿಸೆಗಳ ಒಡ್ಡದೇ ಸತತ ಮೂರುಬಾರಿ ಲೋಕಸಭೆಗೆ ಆಯ್ಕೆಯಾದ ಪ್ರಾಮಾಣಿಕ ರಾಜಕಾರಣೆಗಳಲ್ಲಿ ಒಬ್ಬರಾದ ಶ್ರೀ ಚನ್ನಯ್ಯ ಒಡೆಯರ್ ರವರು ನಿಧನರಾಗಿದ್ದರೂ ಸಹ ಇವತ್ತಿಗೂ ದಾವಣಗೆರೆಯ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿರುವುದು ಶ್ರೀ ಮಾನ್ ಚನ್ನಯ್ಯ ಒಡೆಯರ್ ರವರ ಹೆಸರು. ಆದರೆ ಚನ್ನಯ್ಯ ಒಡೆಯರ್ ರವರು ಈಗಿಲ್ಲಾ ಅವರ ಸುಪುತ್ರರಾದ ಶ್ರೀ ಶಿವಕುಮಾರ್ ಒಡೆಯರ್ ಕೂಡಾ 2024ರ ಲೋಕ ಸಭೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಸ್ಪರ್ಧೆಬಯಸಿ ಕ್ಷೇತ್ರದಾದ್ಯಂತ ಅವರೂ ಜನಾಭಿಪ್ರಾಯ ಸಂಗ್ರಹಿಸಿ ಬೆಂಬಲ ಕೋರುತಿದ್ದಾರೆ.ಅವರೂ ಕೂಡಾ ವಿದ್ಯಾವಂತರೆ ನಿವೃತ್ತ ಸರ್ಕಾರಿ ಅಭಿಯಂತರರು ಅವರಿಗೂ ಕೂಡಾ ಅವರದೇ ಆದಂಥಾ ಸಮಾಜ ಸೇವೆ ಮಾಡಬೇಕಾದ ಕನಸು ಹೊತ್ತುಕೊಂಡು ತಂದೆಯ ಆದರ್ಶಗಳನ್ನು ಪಾಲನೆಮಾಡುವ ಸದುದ್ದೇಶವನ್ನಿಟ್ಟುಕೊಂಡು ಮುನ್ನುಗ್ಗುತಿದ್ದಾರೆ.ಒಂದು ಪ್ರಮುಖ ಅಂಶವೆಂದರೆ ಈಗಾಗಲೇ ಶ್ರೀಜಿ.ಬಿ.ವಿನಯ್ ಕುಮಾರ್ ಮತ್ತು ಶ್ರೀ ಶಿವಕುಮಾರ್ ಒಡೆಯರ ಇಬ್ಬರೂ ಸಹಿತ ಕ್ಷೇತ್ರದಾದ್ಯಂತ ಜನರ ಬಳಿ ಹೋಗಿ ಅಭಿಪ್ರಾಯ ಹಂಚಿಕೊಂಡಿದ್ದೂ ಅಲ್ಲದೆ ಗ್ರಾಮಗಳು ಮನೆಗಳು ಮುಖಂಡರುಗಳ ಕಾರ್ಯಕರ್ತರ ಭೇಟಿ ಮಾಡಿದ್ದಾರೆ.

ನಮಗೆ ಕೆಲವು ಮೂಲಗಳ ಪ್ರಕಾರ ತಿಳಿದು ಬಂದಿರುವುದೇನಂದರೆ ವಿನಯ್ ಕುಮಾರ್ ಎಲ್ಲ ಜಾತಿ,ವರ್ಗ,ಧರ್ಮಗಳ ಒಗ್ಗೂಡಿಸಿಕೊಂಡು ಯುವಶಕ್ತಿ ಬಳಸಿಕೊಂಡು ಸಧೃಡ ಅಹಿಂದ ಬಲಗೊಳಿಸುವ ಪ್ರಮುಖ ರಾಜಕೀಯ ವ್ಯಕ್ತಿಯಾಗಿ ಹೊರ ಹೊಮ್ಮುಲ್ಲಿ ಯಾವುದೇ ಅನುಮಾನವಿಲ್ಲಾ ಹಾಗಾಗಿ ಅಹಿಂದ ವರ್ಗ ಬಲಗೊಳ್ಳಬೇಕಾದಕಾರಣ ವಿನಯ್ ಕುಮಾರ್ ಸ್ಪರ್ಧೆಗೆ ಜನ ಒತ್ತಡವೂ ಹೆಚ್ಚಾಗತೊಡಗಿದೆ.ಶಿವಕುಮಾರ್ ಒಡೆಯರ್ ಮತ್ತು ಅವರ ಕುಟುಂಬದ ಬಗ್ಗೆ ಅಪಾರ ಗೌರವ ಜನರಿಗಿದೆ ಆದರೆ ಇವತ್ತಿನ ರಾಜಕೀಯಕ್ಕೆ ವಿನಯ್ ಕುಮಾರರಂಥ ಯುವಶಕ್ತಿ ಅವಸ್ಯಕತೆಯಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.ಒಟ್ಟಾರೆಯಾಗಿ ವಿನಯ್ ಕುಮಾರ್ ದಾವಣಗೆರೆಯ ರಾಜಕೀಯದಲ್ಲಿ ದೃವತಾರೆಯಾಗಿ ಹೊರ ಹೊಮ್ಮುವುದನ್ನು ಜನ ಬಯಸುತಿದ್ದಾರೆ.ರಾಜ್ಯ ನಾಯಕರುಗಳು ಜನಾಭಿಪ್ರಾಯದಂತೆ ವಿನಯ್ ಕುಮಾರ್ ರವರಿಗೆ ಟಿಕೇಟ್ ನೀಡಿ ಬೆನ್ನು ತಟ್ಟಿದರೆ ಲೋಕಸಭೆ  ದಾವಣಗೆರೆಕ್ಷೇತ್ರ ಗೆಲುವಿನ ಪಟ್ಟಿಯಲ್ಲಿರುತ್ತದೆ ಎಂಬುವುದಕ್ಕೆ ಯಾವುದೇ ಅನುಮಾನಬೇಡ ಮತ್ತು ಮುಂದಿನ ಪಕ್ಷ ಸಂಘಟನೆಗೆ ಬಲ ಬರುತ್ತದೆ.ಹೈಕಮಾಂಡ್ ಜನಾಭಿಪ್ರಾಯ ಗನನೆಗೆ ತಗೆದುಕೊಳ್ಳದೆ ಜನಾಭಿಪ್ರಾಯ ಧಿಕ್ಕರಿಸಬಾರದು ಎಂದೂ ಕೇಳಿಬರುತ್ತಿವೆ. ಒಂದು ಮಾತು ಸತ್ಯ ವಿನಯ್ ಕುಮಾರ್ ಹೆಜ್ಜೆ ಮುಂದಿಟ್ಟಿದ್ದಾರೆ ಹಿಂದೆ ತಗೆಯುವದಿಲ್ಲಾ. ಆತ ಛಲಗಾರ ಸಾಧಕ ಸಾಧಿಸಿ ತೋರಿಸಬೇಕೆಂಬ ಬಲವಾದ ಆತ್ಮವಿಶ್ವಾಸ ಹೊಂದಿರುವಂಥವರೆಂದು ವಿನಯ್ ಕುಮಾರ್ ಬಲ್ಲ ಹತ್ತಿರದವರ ಅಭಿಪ್ರಾಯವೂ ಆಗಿದೆ.

LEAVE A REPLY

Please enter your comment!
Please enter your name here