ಹಳ್ಳೂರ 03. ಮಹಿಳೆಯರು ಧಾರಾವಾಹಿ, ನೋಡುವುದು ಯುವಕರೂ ಹೆಚ್ಚು ಮೊಬೈಲ್ ಬಳಕೆ ಮಾಡುವುದು ಗಂಡಸರು ಸಾರಾಯಿಯಂಥ ಮಾದಕ ಚಟಗಳಿಗೆ ಬಲಿಯಾಗಿ ದಾರಿ ತಪ್ಪಿ ಶ್ರೇಷ್ಟ ಮಾನವ ಜನ್ಮ ಹಾಳು ಮಾಡಿಕೋಳ್ಳುತ್ತಿದ್ದಾರೆ.ಶ್ರೇಷ್ಟವಾದ ಶ್ರಾವಣ ಮಾಸದಲ್ಲಿ ಸತ್ಸಂಗದಲ್ಲಿ ಬಾಗಿಯಾಗಿ ಸಂತ ಮಹಾತ್ಮರು ಉಪದೇಶವನ್ನು ಕೇಳಿ ಮಾನವ ಜನ್ಮ ಉದ್ದಾರ ಮಾಡಿಕೊಳ್ಳಿರೆಂದು ಪ್ರಭುಜಿ ಬೆನ್ನಾಳಿ ಮಹಾರಾಜರು ಹೇಳಿದರು. ಹಳ್ಳೂರ ಗ್ರಾಮದ ಜೈ ಹನುಮಾನ ದೇವಸ್ಥಾನದಲ್ಲಿ ನಡೆದ ದುಂಡಪ್ಪ ಕೌಜಲಗಿ ಮಹಾರಾಜರ 10ನೇ ಪುಣ್ಯಸ್ಮರಣೆಯಲ್ಲಿ ಸಾನಿಧ್ಯ ವಹಿಸಿ ಮಾತನಾಡಿ ದಿನಾಲೂ ಬೆಳೆಗ್ಗೆ ಕೋಳಿ ಕೂಗುವ ಮುನ್ನ ಎದ್ದು ದೇವರ ನಾಮಸ್ಮರಣೆ ಮಾಡಿ ಕೆಲಸ ಕಾರ್ಯಗಳನ್ನು ಮಾಡಿದರೆ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆತು ಜೀವನವು ಸುಖಮಯವಾಗುತ್ತದೆ. ತಂದೆ ತಾಯಿ ಗುರು ಹಿರಿಯರ ಮಾರ್ಗದರ್ಶನದಲ್ಲಿ ನಡೆದು ಇಂಚಗೇರಿ ಸಂಪ್ರದಾಯದ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಒಳ್ಳೆಯದು. ಶ್ರೀಮಂತಿಕೆ ಅಧಿಕಾರ ಯಾವುದೂ ಸ್ಥಿರವಲ್ಲ ಇನ್ನೊಬ್ಬರ ಕಷ್ಟ ಕಾಲದಲ್ಲಿ ಸಹಾಯ ಸಹಕಾರ ನೀಡುವ ಮನೋಭಾವನೆ ಬೆಳೆಸಿಕೊಂಡವರಿಗೆ ಸಮಾಜದಲ್ಲಿ ಉನ್ನತ ಸ್ಥಾನ ಮಾನ ದೊರೆಯುತ್ತದೆ. ದೇವರ ನಾಮಸ್ಮರಣೆ ಸತ್ಯ ನ್ಯಾಯ ನೀತಿ ಮಾರ್ಗ ನಮ್ಮಲ್ಲಿದ್ದರೆ ಯಾರಿಗೂ ಹೆದರುವ ಅವಶ್ಯಕತೆವಿಲ್ಲ. ಸುಲಭವಾದ ಆತ್ಮಜ್ಞಾನವನ್ನೂ ಪಡೆದುಕೊಂಡರೆ ಜಗತ್ತನ್ನೆ ಗೆಲ್ಲಬಹುದೆಂದು ಹೇಳಿದರು. ಈ ಸಮಯದಲ್ಲಿ ವಿಜಯ ಮೇತ್ರಿ. ಶ್ರೀಮಂತ, ಗಿರಮಲ್ಲಪ್ಪ, ಮಹಾರಾಜರು . ಅರವಿಂದ ವಕೀಲರು. ಬಾಳಪ್ಪ ಮುಶಿ. ಮೋಹನಗೌಡ ಗೌಡ ಪಾಟೀಲ. ಗಿರೀಶ ಕೌಜಲಗಿ. ಸಂಗಮೇಶ ಅಂಗಡಿ. ಲಕ್ಷ್ಮಣ ಹೊಸಮನಿ. ಸಮಾಜ ಸೇವಕ ಮುರಿಗೆಪ್ಪ ಮಾಲಗಾರ. ಬಾಳಯ್ಯ ಹಿರೇಮಠ. ಗಿರಮಲ್ಲಪ್ಪ ಸಂತಿ. ಶಿವಪ್ಪ ಕೌಜಲಗಿ. ಅಶೋಕ ಕಾಗೆ. ಅಶೋಕ ಬಡಿಗೇರ. ದುಂಡಪ್ಪ ಕತ್ತಿ. ಶಂಕರ ಅಂಗಡಿ. ಮಹಾದೇವ ಕೌಜಲಗಿ ಸೇರಿದಂತೆ ಹಲವರಿದ್ದರು.