ಬೆಂಗಳೂರು ನಗರ ಜಿಲ್ಲೆ, ಆಗಸ್ಟ್ 21: ಬೆಂಗಳೂರು ನಗರ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ವೀರಣ್ಣ ಬಾಗೇವಾಡಿ ಇವರ ಮಾರ್ಗದರ್ಶನದಲ್ಲಿ ಅಬಕಾರಿ ಅಧೀಕ್ಷಕರಾದ ಅಬುಬಕರ್ ಮುಜಾವರ, ಅಬಕಾರಿ ಇವರ ನೇತೃತ್ವದಲ್ಲಿ ಅಬಕಾರಿ ಉಪ ಆಯುಕ್ತರ ಕಛೇರಿ, ಬೆಂಗಳೂರು ನಗರ ಜಿಲ್ಲೆ-5 ರ ವಲಯ ಸಂಖ್ಯೆ-30 ಇವರು ಆಗಸ್ಟ್ 20 ರಂದು ನಗರದ ಮಹದೇವಪುರ ವ್ಯಾಪ್ತಿಯ ಹೂಡಿ ಬ್ರಿಡ್ಜ್ ಹತ್ತಿರ, ಹೂಡಿ ಕೆರೆ ಸಮೀಪದ ಅಂಖೋರ್ ಹೋಟೆಲ್ ಬಳಿ ಮತ್ತು ಹೂಡಿ ಮೆಟ್ರೋ ಸಮೀಪದ ಡಿ ಮಾರ್ಟ್ ಹತ್ತಿರದ ರಸ್ತೆಯಲ್ಲಿ ಪ್ರತ್ಯಕ್ಷ ದಾಳಿ ನಡೆಸಿ, ಅಕ್ರಮವಾಗಿ ಸಾಗಿಸುತ್ತಿದ್ದ ಒಟ್ಟು 12 ಕೆ.ಜಿ. ಒಣ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಾದ ಅರ್ಜುನ್ ಯಾದವ್, ಲಲಿತ ಮಹತೋ ಮತ್ತು ಮೊಹಮ್ಮದ್ ಮಣ್ಣಾನ್ ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆ-1985 ರಡಿ 03 ಮೊಕದ್ದಮೆ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿರುತ್ತದೆ ಎಂದು ಬೆಂಗಳೂರು ನಗರ ಜಿಲ್ಲೆಯ-5 ಅಬಕಾರಿ ಇಲಾಖೆಯ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


LEAVE A REPLY

Please enter your comment!
Please enter your name here