ಆಂಧ್ರಪ್ರದೇಶದ ಕನೂ೯ಲು ಜಿಲ್ಲೆಯ ಸಂಗಮೇಶ್ವರ ಶಿವ ದೇವಸ್ಥಾನವು ಕ್ರಷ್ಣಾ ನದಿಯ ದಂಡೆಯ ಮೇಲೆ ಶ್ರೀಶೈಲಮ್ ಅಣೆಕಟ್ಟಿನ ಹಿನ್ನೀರಿನ ಸ್ಥಳದಲ್ಲಿದೆ. ಪ್ರತಿವರ್ಷ ಮಳೆಗಾಲದಲ್ಲಿ (ಜುಲೈ 2ನೇ ವಾರ) ದೇವಸ್ಥಾನವು ಹಿನ್ನೀರಿನಲ್ಲಿ ಸಂಪೂಣ೯ವಾಗಿ ಸುಮಾರು 6 ತಿಂಗಳುಗಳ ಕಾಲ ಮುಳುಗಿ ಜನವರಿ-ಫೆಬ್ರುವರಿ ವರೆಗೆ ನೀರಿನಲ್ಲಿಯೇ ಮುಳುಗಿರುತ್ತದೆ. (ಈ ವಷ೯ ಜುಲೈ 20ರಂದು ಮುಳುಗಿದೆ).

ಈ ವೀಡಿಯೋದಲ್ಲಿ ದೇವಸ್ಥಾನದ ಪೂಜಾರಿಯು ದೇವಸ್ಥಾನ ಮುಳುಗುವ ಮೊದಲು ಆ ವಷ೯ದಲ್ಲಿ ಕೊನೆಯ ಬಾರಿಗೆ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿದ್ದಾರೆ. ಕ್ಷಣಕ್ಷಣಕ್ಕೂ ನೀರಿನ ಮಟ್ಟ ಹೆಚ್ಚುತ್ತಿದ್ದರೂ ಶಿವಲಿಂಗ ಸಂಪೂರ್ಣವಾಗಿ ಮುಳುಗುವ ವರೆಗೂ ಪೂಜಾರಿಯು ನೆರೆದಿರುವ ಭಕ್ತರ ಸಮ್ಮುಖದಲ್ಲಿ ಶ್ರದ್ದಾಭಕ್ತಿಯಿಂದ ಪೂಜೆ, ಆರತಿ ಅಭಿಷೇಕ ನೆರವೇರಿಸುತ್ತಾರೆ.

ನಂತರದಲ್ಲಿ ಪೂಜಾರಿ ಮತ್ತು ಭಕ್ತರು ತಾವು ಸಿದ್ದವಾಗಿರಿಸಿರುವ ನಾಡದೋಣಿಯ ಮೂಲಕ ಆಚೆಯ ದಡ ಸೇರುತ್ತಾರೆ. ಇದು ಶ್ರದ್ದಾಭಕ್ತಿಯ ಸುಂದರ ದ್ರಷ್ಯ.

LEAVE A REPLY

Please enter your comment!
Please enter your name here