ಮೂಡಲಗಿ: ಆ,12-ನಗರಕ್ಕೆ ಪ್ರಥಮ ಬಾರಿಗೆ ಆಗಮಿಸಿದ ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗ ರೆಡ್ಡಿ ಅವರನ್ನು ಮೂಡಲಗಿ ಶಿಕ್ಷಣ ಸಂಸ್ಥೆ ವತಿಯಿಂದ ಸಂಸ್ಥೆಯ ಅಧ್ಯಕ್ಷರಾದ ವಿಜಯಕುಮಾರ ಸೋನವಾಲಕರ,ಉಪಾಧ್ಯಕ್ಷರಾದ ಸುಭಾಸ ಸೋನವಾಲಕರ ಮತ್ತು ಆಡಳಿತ ಸರ್ವ ಸದಸ್ಯರು ಸಚಿವರಿಗೆ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿದ ನಂತರ ಮೂಡಲಗಿ ಶಿಕ್ಷಣ ಸಂಸ್ಥೆ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕೈಂಕರ್ಯವನ್ನು ಮಾಡುತ್ತಿರುವುದು ಸ್ತುತ್ಯರ್ಹವಾದದ್ದು,ಸಂಸ್ಥೆ ಹೀಗೆ ಶ್ರೇಯೋಭಿವೃದ್ಧಿ ಹೊಂದಿ ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಂತಾಗಲಿ.ಸರಕಾರಿ ಶಾಲೆಗಳು ಸುಧಾರಣೆಯಾಗಲು ಚುನಾಯಿತ ಪ್ರತಿ ನಿಧಿಗಳು ಮತ್ತು ಸಾರ್ವಜನಿಕರು ಶಿಕ್ಷಣ ಇಲಾಖೆಗೆ ಸಮನ್ವಯತೆಯಿಂದ ಕಾರ್ಯ ಮಾಡಲು ಸಾಧ್ಯ.ಸಂಘ,ಸಂಸ್ಥೆಯವರು ಸರ್ಕಾರಿ ಶಾಲೆಗಳಿಗೆ ಸುಧಾರಣೆಗೆ ಕೈ ಜೋಡಿಸಬೇಕು ಎಂದು ಸಚಿವರಾದ ರಾಮಲಿಂಗಾ ರೆಡ್ಡಿ ಮಾತನಾಡಿದರು.
ಇದೆ ಸಂದರ್ಭದಲ್ಲಿ ಪಟ್ಟಣದ ಮುಖಂಡರು ನೀಡಿದ ಮನವಿಗೆ ಉತ್ತರಿಸಿದ ಸಚಿವರು,ಮೂಡಲಗಿ ಯೂ ತಾಲೂಕಾ ಕೇಂದ್ರವಾಗಿದ್ದು,ಇಲ್ಲಿ ಹೈಟೆಕ್ ಬಸ್ ಡಿಪೋ ಬೇಡಿಕೆಯನ್ನು ಪರಿಸಿಲಿಸಿವುದಾಗಿ ಹೇಳಿದ ಅವರು ಸರಕಾರದ ಜತೆ ಗ್ರಾಮಸ್ಥರು,ಸಾರ್ವಜನಿಕರು ಕೈಜೋಡಿಸಿ ಸರಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸಬೇಕ.ಇದರಿಂದ ಬಡ ಮಕ್ಕಳಿಗೆ ಸಹಾಯಕವಾಗುವುದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ವೇದಿಕೆಯ ಮೇಲೆ ಸಂಸ್ಥೆಯ ನಿರ್ದೇಶಕರಾದ ಎ.ಟಿ.ಗಿರಡ್ಡಿ,ಬಿ.ಎಚ್.ಸೋನವಾಲಕರ,ಪಿ.ಆರ್.ಲಂಕೆಪ್ಪನವರ, ವಿ.ಟಿ.ಸೋನವಾಲಕರ,ಎ.ಐ.ಸತರಡ್ಡಿ,ಮುಖಂಡರಾದ ಅರವಿಂದ ದಳವಾಯಿ, ಎಸ್.ಆರ್.ಸೋನವಾಲಕರ, ಪ್ರಕಾಶ ಸೋನವಾಲಕರ,ಡಾllಗಿರೀಶ ಸೋನವಾಲಕರ, ಕೃಷ್ಣ ರೆಡ್ಡಿ,ನಾರಾಯಣ ಹಾದಿಮನಿ, ಪ್ರಾಚಾರ್ಯ ಪ್ರೊ-ಸಂಗಮೇಶ ಗುಜಗೋಂಡ,ಪ್ರೊ-ಎಮ್.ಎಸ್.ಪಾಟೀಲ, ಉಪಪ್ರಾಚಾರ್ಯ ಕೆ.ಎಸ್.ಹೊಸಟ್ಟಿ ಮತ್ತು ಇನ್ನು ಅನೇಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here