ಬೆಂಗಳೂರಿನಲ್ಲಿ ಇನ್ ಸೈಟ್ ಐ.ಎ.ಎಸ್,ಕೋಚಿಂಗ್ ಸೆಂಟರ್ ನ ಸಂಸ್ಥಾಪಕ ನಿರ್ದೇಶಕರಾದ
ಶ್ರೀ ಜಿ.ಬಿ.ವಿನಯ್ ಕುಮಾರ್ ರವರು ಮೂಲತಃ ದಾವಣಗೆರೆಯವರು.ಇವರು ಇನ್ ಸೈಟ್ ಐಎಎಸ್ ಎಂಬ ಉನ್ನತ ಶಿಕಣ ವಾದ ಐಎಎಸ್ ತರಬೇತಿ ಸಂಸ್ಥೆಯನ್ನು ತೆರೆದು ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ನೂರಾರು ವಿದ್ಯಾರ್ಥಿಗಳು ಇಂದು ಈ ಸೆಂಟರ್ ನಲ್ಲಿ ತರಬೇತಿಪಡೆದು ಐಎಎಸ್ ಅಧಿಕಾರಿಗಳಾಗಿ ದೇಶ
ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಕೋಚಿಂಗ್ ಸೆಂಟರಲ್ಲಿ ತರಬೇತಿ ಪಡೆದು ಐಎಎಸ್ ಪರೀಕ್ಷೆಯಲ್ಲಿ ರಾಜ್ಯಕ್ಕೇ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾದ ದಾವಣಗೆರೆಯ ವಿದ್ಯಾರ್ಥಿಯೊಬ್ಬರು ಇವತ್ತು ಹೊರದೇಶದಲ್ಲಿ
ನಮ್ಮದೇಶದ ರಾಯಭಾರಿಕಚೇರಿಯಲ್ಲಿ ಕಾರ್ಯ ನಿರ್ವಹಿಸುತಿದ್ದಾರೆ. ಹೀಗೆ ಹಲವಾರು ವಿದ್ಯಾರ್ಥಿಗಳು ಇವರ ಸೆಂಟರ್ ನಲ್ಲಿ ತರಬೇತಿಪಡೆದವರು ಜಿಲ್ಲಾಧಿಕಾರಿಗಳಂಥ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಈ ಸಂಸ್ಥೆಗೆ ಮತ್ತು ರಾಜ್ಯಕ್ಕೆ ಹೆಮ್ಮೆಯ ವಿಷಯ. ಇನ್ ಸೈಟ್ ಐಎಎಸ್ ಸಂಸ್ಥೆಯನ್ನು ತೆರೆದು ನೂರಾರು ಯುವಜನರ ಬಾಳಲ್ಲಿ ಬೆಳಕು ಚಲ್ಲಿದ ಶ್ರೀ ಬಿಜಿ.ವಿನಯ್ ಕುಮಾರ್ ಇವತ್ತು ಮತ್ತೊಂದು ಹೆಜ್ಜೆ ಮುಂದಿಟ್ಟು ವಿದ್ಯಾರ್ಥಿ ಯುವ ಜನರ
ಆಶಾಕಿರಣವಾಗಿ ಬಡವರ ದೀನದಲಿತ
ಅಸಹಾಯಕರುಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ತನ್ನನ್ನು ಸಾಮಾಜಿಕ ಸೇವೆಯಲ್ಲಿತೊಡಗಿಸಿ ಕೊಳ್ಳಲು ರಾಜಕೀಯ ಪ್ರವೇಶಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.
ಇವರು ದಾವಣಗೆರೆ ಲೋಕಸಭೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಾಕಾಂಕ್ಷಿಯಾಗಿ ಬಹು ವೇಗದಿಂದ
ಪಕ್ಷಸಂಘಟಿಸುತ್ತಿರುವುದು ಕಾಂಗ್ರೇಸ್ ಪಕ್ಷದ ವಲಯದಲ್ಲಿ ಹರ್ಷಉಂಟುಮಾಡಿದೆ. ಶ್ರೀ ಜಿಬಿ.ವಿನಯ್ ಕುಮಾರ್ ಒಳ್ಳೆಯ ವಿದ್ಯಾವಂತ ಹೆಸರಿಗೆ ತಕ್ಕಹಾಗೆ ವಿನಯ ಯಾಯಾಗಲೂ ಹಸನ್ಮುಖಿಯಾಗಿ ಸದಾ ಲವಲವಿಕೆಯ ಚೇತನ. ಬಾಲ್ಯದ ದಿನಗಳಲ್ಲಿ ಬಡತನದ ಅನುಭವವನ್ನು ಕಣ್ಣಾರೆ ಕಂಡು ಬಡಜನರ ಏಳ್ಗೆಗಾಗಿ ಬರಿ ಕಂಬನಿ ಮಿಡಿದರೆ ಸಾಲದು ಅವರ ಬಾಳಲ್ಲಿ ಬೆಳಕು ಮೂಡಿಸಿ ಬಡತನ ಬಡತನ ಬವಣೆಯಿಂದ ಹೊರ ಬರಲು ಅವರ ಮಕ್ಕಳ ವಿದ್ಯಾಸಭ್ಯಾಸ ಸಹಕಾರಿಯಾಗಬಲ್ಲದು ಬಡವರ ಮಕ್ಕಳ ಪ್ರತಿಭಾವಂತರನ್ನು ಐಎಎಸ್ ತರಬೇತಿ ನೀಡಿ ಅವರನ್ನು ಶೈಕ್ಷಣಿಕವಾಗಿ
ಆರ್ಥಿಕವಾಗಿ ಮೇಲೆಳಲು ಸಾಮಾಜಿಕವಾಗಿ ಶೋಷಣೆಯಿಂದ ಹೊರತರಲು ವಿನಯ ಪ್ರಯತ್ನಿಸುವತ್ತ
ಧಾಪುಗಾಲಿಡುತ್ತಿರುವುದು ಬಡವರ ಬಾಳಲ್ಲಿ ಹೊಸ ಚಿಗುರು ಮೂಡಿಸಿದೆ. ವಿನಯ್ ಕುಮಾರ್ ದಾವಣಗೆರೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತ ವೆಂಬಂತಾಗಿದೆ ಹಾಗಾಗಿ ವಿನಯ್ ಕುಮಾರ್ ಈ ಗಾಗಲೇ ದಾವಣಗೆರೆ ಲೋಕಸಭಾ ವ್ಯಾಪ್ತಿಯ ಎಂಟೂ ವಿಧಾನ ಸಭಾ ಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆಯನ್ನು ಚುರುಕು ಗೊಳಿಸಿದ್ದು ಈಗಾಗಲೇ ದಾವಣಗೆರೆ ಜಿಲ್ಲೆಯ ರಾಜಕೀಯವಲಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಶಕ್ತಿ ತುಂಬುತ್ತಿರುವುದು ಪಕ್ಷದ ಮುಖಂಡರಲ್ಲಿ ಸಂತಸ ತರಿಸಿದೆ. ಶ್ರೀ ವಿನಯ ಕುಮಾರ್ ಜಿಲ್ಲೆಯ ಹಿರಿಯ ಮತ್ತು ಕಿರಿಯ ರಾಜಕಾರಣಿಗಳ ಸಲಹೆ ಪಡೆದು ಅವರ ಸಹಕಾರದಿಂದ ಜಗಳೂರು-ಚನ್ನಗಿರಿ-ಹರಿಹರ-ಹರಪ್ಪನಹಳ್ಳಿ-ಮಾಯಕೊಂಡ-ಮತ್ತು ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಗಾಗಲೇ ಎರಡೆರಡು ಸುತ್ತು ಹೋಗಿ ಸ್ಥಳೀಯ ಮುಖಂಡರ ಹಾಗೂ ಕಾರ್ಯಕರ್ತರ ಮತ್ತು ಅಭಿಮಾನಿಗಳ ಸಲಹೆ ಸೂಚನೆಗಳನ್ನು ಪಡೆದು ಅವರೊಂದಿಗೆ ಸಭೆಸಮಾರಂಭಗಳನ್ನು ಮಾಡಿ ಪಕ್ಷ ಸಂಘಟನೆಗೆ ಭದ್ರ ಬುನಾದಿ ಹಾಕಿದ್ದಾರೆ. ಹಳೇ ಬೇರು ಹೊಸ ಚಿಗುರು ಸೇರಿದರೆ ಮರ ಸೊಬಗು ಎಂಬಂತೆ ಹಿರಿಯರಾಜಕಾರಣಿಗಳು ಯುವ ಉತ್ಸಾಹಿ ಯುವಕರ ಪ್ರಜಾÐವಂತರ ರಾಜಕೀಯ ಪ್ರವೇಶ ಪ್ರಸ್ತುತ ಅಗತ್ಯವಾಗಿರುವ ಈ ಸಂದರ್ಭದಲ್ಲಿ ವಿನಯ್ ರವರ ರಾಜಕೀಯ ಪ್ರವೇಶ ಮತ್ತು ಅವರ ಪಕ್ಷಸಂಘಟನೆಯ ಚಾತುರ್ಯತೆ ಜಿಲ್ಲೆಯ
ರಾಜಕೀಯ ವಲಯದಲ್ಲಿ
ಆಶಾಕಿರಣವಾಗಿರುವದಂತೂ ದಿಟವಾಗಿ ಗೋಚರಿಸುತ್ತಿದೆ.

LEAVE A REPLY

Please enter your comment!
Please enter your name here