ಇರಾನಿಯವರೇ.. ಮಣಿಪುರದಲ್ಲಿ ನಡೆದಿರುವಂತಹ ಅತ್ಯಾಚಾರದ ಘಟನೆಯು ನಮ್ಮ ದೇಶದ ಕೆಟ್ಟ ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಏನಾಗಿದೆಯೋ ಅದನ್ನೇ ಕನ್ನಡಿ ತೋರಿಸುತ್ತದೆ. ಈ ಘಟನೆಯಿಂದಾಗಿ ಜಗತ್ತಿನಲ್ಲಿ ಭಾರತೀಯರು ತಲೆ ತಗ್ಗಿಸುವಂತೆ ಮಾಡಿದ್ದಂತೂ ನಿಜ. ನೀವು ಆ ಕನ್ನಡಿಯನ್ನು ಒಡೆಯಲು ಪ್ರಯತ್ನಿಸಿದರೆ ಅದರಲ್ಲಿ ಕಾಣುವ ಬಿಂಬಗಳು ಒಂದಕ್ಕೆ ಎರಡಾಗಿ ಎರಡಕ್ಕೆ ನಾಲ್ಕಾಗಿ ಏರುತ್ತಲೇ ಹೋಗುವುದು. ಕೇಂದ್ರ ಮತ್ತು ರಾಜ್ಯಗಳಲ್ಲಿ ತಮ್ಮದೇ ಸರಕಾರ ಇದೆಯೆಂದಾಗ ಬರುವ ಭಂಡ ಧೈರ್ಯದಿಂದಲೇ ಇಂತಹ ಅಕ್ರತ್ಯ ನಡೆದಿರುವುದು ಧಿಟ.
ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದ ವಿಚಾರದಲ್ಲಿ ರಾಹುಲ್ ಗಾಂಧಿಯವರು ಸಂಸತ್ತಿನಲ್ಲಿ ಗುಡುಗಿದಾಗ ನೀವೆಲ್ಲರೂ ನಾಚಿ ತಲೆ ತಗ್ಗಿಸುತ್ತೀರಿ ಅಂದುಕೊಂಡಿದ್ದೆ. ಆದರೆ ಹಾಗಾಗಲಿಲ್ಲ.ˌಬಿಜೆಪಿ ಪಕ್ಷದ ಸಂಸದರೆಲ್ಲರೂ ಮುಖ ಸಿಂಡರಿಸಿಕೊಂಡಿದ್ದೀರಿ ಹೊರತು ನಿಮ್ಮಲ್ಲಿ ಎಳ್ಳಷ್ಟೂ ಪಾಪ ಪ್ರಜ್ಞೆ ಕಾಡಲಿಲ್ಲ. ಆ ಮುಖವನ್ನು ನೋಡಿದವರಿಗೆ ಅರ್ಥವಾದೀತು ನೀವೆಲ್ಲ ಎಂತ ಫ್ಯಾಸಿಸ್ಟ್ ಮನೋ ಪ್ರವ್ರತ್ತಿಯವರೆಂಬುದು.
ತಮ್ಮ ಅಧಿಕಾರದಡಿಯಲ್ಲಿ ನಡೆದಿರುವ ವ್ಯಾಪಕ ಹಿಂಸಾಚಾರ ಅತ್ಯಾಚಾರ ಮಾನಭಂಗದ ವಿಚಾರದಲ್ಲಿ ಒಂದು ಶಬ್ದವನ್ನು ಮಾತಾಡದೆ ಕೇವಲ
ಒಂದು ಫ್ಲೈಯಿಂಗ್ ಕಿಸ್ ವಿಚಾರದಲ್ಲಿ ನೀವು ರಂಪ ಮಾಡಿದರೆ ಸಮಾಜ ನಿಮ್ಮನ್ನು ಒಪ್ಪುತ್ತಾ ಇರಾನಿಯವರೇ? ನೀವೂ ಒಬ್ಬ ಮಹಿಳೆಯಲ್ಲವೇ… ನಮ್ಮ ರಾಜ್ಯದ ಶೋಭಕ್ಕರವರ ವಿಚಾರದಲ್ಲಿ ಮಾತಾಡುವುದೇ ವ್ಯರ್ಥವೆಂದು ಕೊಂಡಿದ್ದೇನೆ. ಯಾಕಂದ್ರೆ ಅವರು ಹೆಣಬಿದ್ದಲ್ಲಿ ಮಾತ್ರ ಬಾಯಿಬಿಡುವವರೆಂದು ಜನ ತೀರ್ಮಾನ ಮಾಡಿದ್ದಾರೆ.
ಮಣಿಪುರದಲ್ಲಿ ನಡೆದಿರುವ ಘೋರ ಅಪರಾಧಕ್ಕೆ ನೀವೆಲ್ಲರೂ ಸಂಸತ್ತಿನೆದುರು ತಲೆಬಾಗಿ ನಿಂತು ಕ್ಷಮೆ ಕೇಳಬೇಕಿತ್ತುˌ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲು ಒಡಲಾಳದಿಂದ ಒತ್ತಾಯಪಡಿಸಬೇಕಿತ್ತು. ಅದನ್ನು ನೀವ್ಯಾರೂ ಮಾಡಿಲ್ಲ.. ಯಾಕಂದ್ರೆ ನಿಮ್ಮ ಧೋರಣೆ ಇರುವುದೇ ಹೊಡಿಬಡಿಕಡಿ ಸಂಸ್ಕ್ರತಿಯಲ್ಲಿ.
ಅದು ಬದಲಾಗದೆ ಸಮಾಜವು ನೆಮ್ಮದಿಯಿಂದಿರಲು ಸಾಧ್ಯವಿಲ್ಲ. ಮಾನವೀಯ ಹ್ರದಯವುಳ್ಳವರಾಗಿದ್ದರೆ ಒಮ್ಮೆ ನೀವು ಆ ಜಾಗದಲ್ಲಿ ನಿಂತು ಯೋಚಿಸಿರಿ.
(ಬಾಬು ಪಿಲಾರ್.)