ಬೆಂಗಳೂರು: ಬೆಂಗಳೂರಿನ ಕನಕಶ್ರೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ 2022-2023,ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಉನ್ನತ ಅಂಕಪಡೆದು ತೇರ್ಗಡೆಯಾದ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಬೆಂಗಳೂರು ಕಂದಾಯ ವಿಭಾಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇನ್ ಸೈಟ್ ಐಎಎಸ್ ಸಂಸ್ಥಾಪಕರು ಮತ್ತು ದಾವಣಗೆರೆ ಲೋಕಸಭಾ ಕ್ಷೇತ್ರದ ಪ್ರಭಲ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿ ಶ್ರೀ ಜಿ ಬಿ.ವಿನಯ್ ಕುಮಾರ್ ಭಾಗವಹಿಸಿ ಉನ್ನತ ಅಂಕಪಡೆದ ಪ್ರತಿಭಾವಂತ ಮಕ್ಕಳಿಗೆ ಐದು ಸಾವಿರ ರೂಪಾಯಿ ನಗದು ಪ್ರೋತ್ಸಾಹ ಧನ ಪದಕ ಮತ್ತು ಪ್ರಶಂಸಾ ಪತ್ರ ವಿತರಣೆ ಮಾಡಿದರು.
ವಿದ್ಯಾರ್ಥಿಗಳು ಶ್ರದ್ಧೆ ಯಿಂದ ಓದಿ ಉತ್ತಮ ಅಂಕಪಡೆದು ಉನ್ನತ ಶಿಕ್ಷಣ ಪಡೆಯಬೇಕು ಅದರಿಂದ ಸಮಾಜಕ್ಕೆ ತಂದೆಯಾಯಿಗಳಿಗೆ ಹಾಗೂ ವಿದ್ಯಾರ್ಜನೆ ಮಾಡಿದ ಗುರುಗಳಿಗೂ ಕೀರ್ತಿ ತಮಗೂ ಸಮಾಜದಲ್ಲಿ ಗೌರವಾಧಾರಗಳು ಲಭಿಸುತ್ತವೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಈ ಕಾರ್ಯಕ್ರಮದ ಸಾನ್ನಿಧ್ಯವನ್ನು ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಸಿದ್ಧಾರಾಮನಂದ ಪುರಿ ಮಹಾಸ್ವಾಮಿಜಿ ಕಾಗಿನೆಲೆ ಶ್ರೀ ಕನಕ ಗುರುಪೀಠದ ತಿಂತನಿ ಬ್ರಿಜ್ ಶಾಖಾಮಠ ಇವರು ವಹಿಸಿದ್ದರು.ಮಾಜಿ ಸಚಿವರು ಸಮಾಜದ ಹಿತಚಿಂತಕರೂ ಆದ ಶ್ರೀ ಹೆಚ್ ಎಂ.ರೇವಣ್ಣನವರು ಉದ್ಘಾಟಿಸಿದರು ಸಮಾರಂಭದ ಅಧ್ಯಕ್ಷತೆಯನ್ನು ಕನಕಶ್ರೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾದ ಶ್ರೀ ಟಿ ಬಿ.ಬೆಳಗಾವಿಯವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರೂ ಸಮಾಜದ ಹಿರಿಯಚಿಂತಕರೂ ವಿಧಾನಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ಹೆಚ್.ವಿಶ್ವನಾಥ್ ರವರು,ಮಾಜಿ ಸಚಿವರು ಹಾಲಿ ಶಾಸಕರಾದ ಶ್ರೀ ಬೈರತಿ ಬಸವರಾಜ್ ರವರು, ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಶ್ರೀ ಕೆ ವಿ.ದಯಾನಂದ ಐಎಎಸ್ ರವರು, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಗಳಾದ ಶ್ರೀಮತಿ ಪ್ರೋ ಆರ್.ಸುನಂದಮ್ಮನವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಹಿರಿಯ ಮಾಜಿ ಅಧಿಕಾರಿ ಹಾಗೂ ಸಮಾಜ ಸೇವಕರಾದ ಶ್ರೀ ಡಾ||ಜೆ ಪಿ.ಪ್ರಕಾಶ್ ರವರನ್ನು ಮತ್ತು ಇನ್ ಸೈಟ್ ಐಎಎಸ್ ಸಂಸ್ಥಾಪಕರು ಹಾಗೂ ನಿರ್ದೇಶಕರೂ ಆದ ಶ್ರೀ ಜಿ ಬಿ.ವಿನಯ್ ಕುಮಾರ್ ರವರನ್ನು ಅಭಿನಂದಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕನಕಶ್ರೀ ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿಗಳಾದ ಶ್ರೀ ಪಿ ಎನ್.ಕೃಷ್ಣಮೂರ್ತಿಯವರು, ಖಜಾಂಚಿ ಶ್ರೀ ಎಂ.ಪ್ರಕಾಶ್ ರವರು ಹಾಗೂ ಟ್ರಸ್ಟಿಗಳಾದ ಶ್ರೀ ವಿ.ಮುನಿಚೌಡಪ್ಪನವರು, ಎಂ.ಮಹಾದೇವರವರು,ಸಿ.ವರದರಾಜ್ ರವರು,ಕೆ.ಜಯರಾಮ್ ರವರು,ಪಿ.ರಂಗಧಾಮಯ್ಯನವರು,ಹೆಚ್ ಆರ್.ಸಂಗಮದ್ ರವರು, ಸೇರಿದಂತೆ ಸಮಾಜದ ಹಿರಿಯರು ಭಾಗವಹಿಸಿದ್ದರು.