ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಲ್ಲಿ ಪೈಪೋಟಿ ಅಂತರಂಗದಲ್ಲಿ ನಡೆದಿದೆ.ಆಕಾಶನೋಡೋಕೆ ನೂಕುನುಗ್ಗಲು ಯಾಕೆ ಎಂಬ ಕಲ್ಪನೆಕೂಡಾ ಕಾಂಗ್ರೇಸ್ ಪಕ್ಷದ ಕೆಲವು ನಾಯಕರಿಗೆ ಅರಿವೂಕೂಡಾ ಇಲ್ಲ ಎನಿಸುತ್ತದೆ.
ರಾಜಕೀಯ ಪಕ್ಷಗಳು ಹೇಳುವಂತೆ ರಾಜಕಾರಣದಲ್ಲಿ ಶಾಸ್ವತ ವೈರಿಗಳೂ ಇಲ್ಲ ಶಾಸ್ವತ ಮಿತ್ರರೂ ಇಲ್ಲ ವೆಂಬಮಾತು ಜಗಜ್ಜಾಹೀರು.ಹೀಗಿರುವಾಗ ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಹಜವಾಗಿಯೇ ಆಕಾಂಕ್ಷಿ ಗಳು ಪ್ರಯತ್ನ ಮಾಡುತ್ತಿದ್ದಾರೆ.ಕೊನೆಯ ತೀರ್ಮಾನ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಆದರೆ ಈ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರಕ್ಕಾಗಿ ಹಾತೊರೆಯುತ್ತಿರುವವರ ಸಂಖ್ಯೆ ಬೇರೆ ಪಕ್ಷಗಳಿಗೆ ಹೋಲಿಸಿದರೆ ಸ್ವಲ್ಪ ಕಾಂಗ್ರೆಸ್ ಪಕ್ಷದಲ್ಲಿಯೇ ಹೆಚ್ಚು ಅನಿಸುತ್ತದೆ. ಇತ್ತೀಚೆಗೆ ಲೋಕ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿರುವ ಯುವ ಉತ್ಸಾಹಿ ವಿದ್ಯಾವಂತ ಮತ್ತು ವಿದ್ಯಾರ್ಥಿ ಯುವಜನರ ಆಶಾಕಿರಣ ಪ್ರಜ್ಞಾವಂತ ಜಿಬಿ.ವಿನಯಕುಮಾರ್ ಶರವೇಗದಿಂದ ಕ್ಷೇತ್ರದ ಆದ್ಯಂತ ಪಕ್ಷಸಂಘಟಿಸುವತ್ತ ಎಲ್ಲಾ ನಾಯಕರನ್ನು ಭೇಟಿ ಮಾಡಿ ಎಡಬಿಡದೇ ಸಿದ್ಧತೆ ನಡೆಸಿದ್ದಾರೆ.ಅವರು ತಮ್ಮ ಪ್ರಯತ್ನ ಮುಂದುವರಿಸಿ ಎಲ್ಲಾ ನಾಯಕರ ಮತ್ತು ಕಾರ್ಯ ಕರ್ತರ ವಿಶ್ವಾಸ ಗಳಿಸುತ್ತಾ ತಾವೂಒಬ್ರು ಲೋಕಸಭಾ ಟಿಕೆಟ್ ಆಕಾಂಕ್ಷಿ ಪಕ್ಷ ಗುರುತಿಸಿ ಟಿಕೇಟ್ ಕೊಟ್ಟರೆ ಸ್ಪರ್ಧಿಸಲು ಸಿದ್ಧ ಎಂದು ಹೇಳುತ್ತಾ ಪಕ್ಷಸಂಘಟನೆ ಮಾಡುತ್ತಿದ್ದಾರೆ ಇದು ಒಬ್ಬ ಸ್ಪರ್ಧಾಆಕಾಂಕ್ಷಿಗೆ ಇರುವ ಕರ್ತವ್ಯ.ಇದನ್ನು ನಿಜವಾದ ಕಾಂಗ್ರೇಸ್ ಪಕ್ಷದ ಎಲ್ಲಾರೂ ಸ್ವಾಗತಿಸಬಹುದಿತ್ತು.ಆದರೆ ಸಾಮಾಜಿಕ ಜಾಲ ತಾಣಗಳಲ್ಲಿ ಕೆಲವರು ಮಾಡುತ್ತಿರುವ ಟೀಕೆ ಟಿಪ್ಪಣಿಗಳನ್ನು ಕೆಲವರ ಹೆಸರುಸಹಿತ ಮಾಡುತ್ತಿದ್ದಾರೆ.ಈ ಹೆಸರುಗಳು ಸ್ವತಃ ಅವರೇ ಹಾಕ್ತಾರೋ ಅಥವಾ ಬೇರೆಯವರು ಹೆಸರು ಬಳಸ್ತಾರೋ ಗೊತ್ತಿಲ್ಲ.
ಸದ್ಯ ಜಿಬಿ.ವಿನಯಕುಮಾರ್ ಜನರಮಧ್ಯ ಹೋಗಿ ತಮ್ಮ ಆಶಾಭಾವನೆ ವ್ಯಕ್ತಪಡಿಸುತ್ತಿದ್ದಾರೆ ದೊಡ್ಡವರ ಮನೆ ಬಾಗಿಲಕಾಯ್ದು ಚುನಾವಣೆ ಸಂದರ್ಭದಲ್ಲಿ ಹಣ ಅಧಿಕಾರ ಜಾತಿ ಹೆಸರುಗಳ ಬಳಸಿಕೊಂಡು ಇರುವೆಗಳಂತೆ ಕಾರ್ಯಕರ್ತರು ಕಟ್ಟಿದ ಹುತ್ತದಲ್ಲಿ ಸರ್ಪಗಳು ಸೇರಿಕೊಂಡಂತೆ ಕಾರ್ಯಕರ್ತರನ್ನ ಕೂಲಿಆಳುಗಳಂತೆ ಕೆಲಸಮಾಡಿಸಿಕೊಂಡು ಚುನಾವಣೆ ನಂತರ ಸರ್ಪಗಳ ವರ್ತುಲದ ಮಧ್ಯೆ ಯಾವ ಕಾರ್ಯಕರ್ತನಿಗೂ ಸಿಗದಂತೆ ಅಧಿಕಾರ ಅನುಭವಿಸುವವರ ಸಂಖ್ಯೆಗಳು ಹೆಚ್ಚಾಗಿರುವ ಇಂಥಾ ದಿನಬಳಕೆಯ ವಿದ್ಯಾವಂತ,ವಿಚಾರವಾದಿ, ಶಿಕ್ಷಣ ಪ್ರೇಮಿ, ವಿದ್ಯಾರ್ಥಿ ಯುವಜನರ ಆಶಾಕಿರಣ ಪ್ರಜ್ಞಾವಂತ ಯುವಕನು ಪಕ್ಷಸಂಘಟನೆ ಮಾಡುತ್ತಿರುವುದನ್ನು ಪಕ್ಷದ ಎಲ್ಲರೂ ಸ್ವಾಗತಿಸಿ ಪ್ರೋತ್ಸಾಹ ನೀಡಬೇಕು ಅಂತಿಮವಾಗಿ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಟಿಕೆಟ್ ಯಾರಿಗೆ ಕೊಡಬೇಕೆಂದು.ಆಗ ಟಿಕೆಟ್ ಪಡೆದವರಿಗೆ ಇದುಪೌಂಡೇಷನ್ ಆಗಿರುತ್ತದೆ.
ಕಾಂಗ್ರೆಸ್ ಪಕ್ಷದ ಬಾವುಟ ಹಿಡಿಯದವರು ಟಿಕೇಟ್ ಆಕಾಂಕ್ಷಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಹೇಳುತ್ತಿರುವುದು ಪಕ್ಷಸಂಘಟನೆ ಸಹಿಸಿಕೊಳ್ಳಲಾಗದವರು ಹೇಳುವ ಹೇಳಿಕೆಗಳಾಗುತ್ತವೆ.ಕೆಲವೇಕೆಲವರ ಕಪಿಮುಷ್ಠಿಯಲ್ಲಿ ಇರುವಪಕ್ಷದಂತಾಗಬಾರದು ಅವಕಾಶ ಸಿಕ್ಕರೆ ಪಕ್ಷಕ್ಕಾಗಿ ದುಡಿಯುವ ಅದೆಷ್ಟೋ ಉತ್ಸಾಹಿಗಳು ಅವಕಾಶ ವಂಚಿತರಾಗಿದ್ದಾರೆ ಎಂಬ ಸತ್ಯವನ್ನು ನಾಯಕರುಗಳು ಒಲಿಯಬೇಕು.ಜಗಳೂರು ಎಂ ಎಲ್ ಎ.ಯಾವಾಗ ಪಕ್ಷದ ಬಾವುಟ ಹಿಡಿದಿದ್ದರು? ಮಂಜಪ್ಪನವರಾಗಲಿ, ನಿಖಿಲ್ ರವರಾಗಲಿ,ಇತ್ತೀಚೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ಕೇಳಿಬರುತ್ತಿರುವ ಹೆಸರು ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ರವರಾಗಲಿ,ಮತ್ತಿನ್ಯಾರೋ ಆಕಾಂಕ್ಷಿಗಳಾಗಿರಲಿ ತಪ್ಪೇನೂ ಇಲ್ಲಾ ಈಗ ಸಂಘಟನೆಮಾಡ್ರಿ ಹೈಕಮಾಂಡ್ ಗುಪ್ತ ವರದಿ ತರಿಸಿಕೊಂಡು ಸೂಕ್ತ ಅಭ್ಯರ್ಥಿಗೆ ಟಿಕೆಟ್ ಕೊಡ್ತಾರೆ ಒಳಮನಸಲ್ಲಿ ಹುಳಿಹಿಂಡದೇ ಎಲ್ಲರೂ ಒಗ್ಗಟ್ಟಾಗಿ ಪಕ್ಷಗೆಲ್ಲಿಸಲು ಒಟ್ಟಾಗಿ ಮುನ್ನುಗ್ಗಿ ಗೆಲ್ಲಿಸಿದರೆ ಪಕ್ಷಕ್ಕೂ ಗೌರವ ಕಾರ್ಯಕರ್ತರಿಗೂ ಶೋಭೆ ಅದು ಬಿಟ್ಟು ಎಂ ಪಿ ಟಿಕೆಟ್ ಫಾರ್ ಸೇಲ್ ಎಂದು ಹಾಕುವುದಾದರೆ ಪಕ್ಷದ ಕಾರ್ಯಕರ್ತರು ಎಂದು ಕರೆಯುವುದು ಆದರೂ ಹೇಗೆ?(ಎಸ್ ಕೆ ಒಡೆಯರ್)

LEAVE A REPLY

Please enter your comment!
Please enter your name here