ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿ ತಮ್ಮ ವಿಕೃತಿ ಜಗತ್ತಿನ್ನೆದುರು ತೋರಿಸಿಕೊಂಡು ತಾವು ಮಾನವರಲ್ಲ, ದಾನವರು ಎಂದು ಸಾಬೀತು ಮಾಡಿದ ಪುರುಷರ ಗುಂಪು ಸಾಧಿಸಿದ್ದು ಏನು?
ಹೆಣ್ಣಿನ ಅತ್ಯಾಚಾರ, ಕೊಲೆ ಆಗಾಗ ಸುದ್ಧಿ ಆಗುತ್ತಲೇ ಇದ್ದ ಈ ವರ್ತಮಾನದಲ್ಲಿ ಈಗ ಇದು (ಮಣಿಪುರದ ಘಟನೆ)ಇನ್ನೂ ಭೀಬತ್ಸ ಘಟನೆ ಎಂದರೆ ತಪ್ಪಾಗದು. ಪುರುಷ ಅಹಂಕಾರ, ಮತದ-ಜಾತಿಯ ಅಹಂಕಾರ, ಹೆಚ್ಚಾಗುತ್ತಿರುವುದರ ನಿದರ್ಶನವಿದು. ಜನಾಂಗೀಯ ದ್ವೇಷ ಕಿಚ್ಚಾಗಿ ಹೊತ್ತಿ ಉರಿಯುತ್ತಿರುವ ವಾಸ್ತವವೂ ಹೌದು.
ಗೋಡೆ ಕಟ್ಟಿ ಸ್ಲಮ್ ಕಾಣದಂತೆ ಮಾಡುವುದು, ಇಂಟರ್ನೆಟ್ ಬಂದ್ ಮಾಡಿ ಮಣಿಪುರದ ಕಿಚ್ಚಿನ ಹೊಗೆ ಪಸರಿಸದಂತೆ ನೋಡಿಕೊಳ್ಳುವುದು ಇವು ತಾತ್ಕಾಲಿಕ ಉಪಾಯಗಳು ಅಷ್ಟೇ…
ಮಣಿಪುರ ಆರಾಜಕತೆಯತ್ತ ಸಾಗಿ ತಿಂಗಳುಗಳು ಉರುಳುತ್ತಿವೆ.ಮೌನ ಮುರಿಯಬೇಕಾದವರು ಬೇಗ ಮೌನಮುರಿದು ಮಾತಾಡಿ, ಭೇಟಿ ನೀಡಿ ಕಠಿಣ ಕ್ರಮ ಕೈಗೊಳ್ಳಬೇಕಾಗಿತ್ತು. ಈಗ ಪರಿಸ್ಥಿತಿ ವಿಕೋಪಕ್ಕೆ ಹೋಗುವಂತಾಗಿದೆ. ನಾವು- ನೀವು ತಲೆತಗ್ಗಿಸುವ ಈ ಘಟನೆಯನ್ನು ಖಂಡಿಸುವುದೊಂದೇ ನಮಗಿರುವ ದಾರಿ…(✍️ಗಜಾನನ ಮಹಾಲೆ.)