ಮೂಡಲಗಿ:ಜು,13-ಪಟ್ಟಣದ ಸಾರ್ವಜನಿಕ ಶೌಚಾಲಯ ನಗರದಲ್ಲಿಯೇ ಉತ್ತಮ/ ಎಲ್ಲ ವ್ಯವಸ್ಥೆ ಇರುವ ಶೌಚಾಲಯ.
ಸರ್ಕಾರಿ ಯೋಜನೆ ಅಡಿಯಲ್ಲಿ ನಿರ್ಮಾಣವಾಗುವ ಶೌಚಾಲಯ ಅಥವಾ ಇನ್ನು ಅನೇಕ ಕಾಮಗಾರಿಗಳನ್ನು ಮಾಡಿರುತ್ತಾರೆ.ಮೂಡಲಗಿ ನಗರದಲ್ಲಿ ಬಸವ ಮಂಟಪ್ಪ, ಹಳ್ಳದ ಹತ್ತಿರ ಇರುವ ಶೌಚಾಲಯ ಎಲ್ಲ ರೀತಿಯಿಂದಲು ವ್ಯವಸ್ಥೆ ಹೊಂದಿರುವ ಶೌಚಾಲಯ ಇದಾಗಿತ್ತು. ಗುತ್ತಿಗೆದಾರರನ್ನು ಜನ ಮೆಚ್ಚುವ ಹಾಗೆ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಕೆಲವರು ಕಿಡಿಗೇಡಿಗಳು ಕೇಲವೆ ತಿಂಗಳಲ್ಲಿ ಅಲ್ಲಿದ್ದ ಬಲ್ಬ್ ತೆಗೆದು ಕೊಂಡು ಹೋಗಿದ್ದಾರೆ ,ಪೈಪ್ ನಾಶ ಮಾಡಿದ್ದಾರೆ,ಬಾಗಿಲು ಮುರುದಿದ್ದಾರೆ ಮತ್ತು ಪ್ರಾರಂಭದಲ್ಲಿ ಬಕೆಟ್ ಕೂಡಾ ಸಹ ಇದ್ದು ಅಂತ ಜನರು ಹೇಳುತ್ತಾರೆ. ಹಿಂತವರಿಂದ ಸಾರ್ವಜನಿಕ ಆಸ್ತಿ ನಾಶವಾಗುತ್ತಿರುವುದು.ಕೆಲ ಗುತ್ತಿಗೆ ದಾರರು ಉತ್ತಮ ಕೆಲಸ ಮಾಡಿದರು ಕೆಲವೇ ತಿಂಗಳಲ್ಲಿ ನಾಶ ಮಾಡಿದರೆ ಅದು ಉಪಯೋಗ ಆಗುವುದಿಲ್ಲ,ಹಣ ದಂಡ.ನಾಶ ಮಾಡುವವರನ್ನು ಗುರ್ತಿಸಬೇಕು ಎಂದು ಸಾರ್ವಜನಿಕರ ಆಕ್ರೋಶವಾಗಿ ಹೇಳುತ್ತಾರೆ.ತಮ್ಮ ಮನೆ ಆಸ್ತಿ ಈ ರೀತಿ ಹಾಳುಮಾಡುತ್ತಾರಾ..? ಅದೆ ರೀತಿಯಾಗಿ ಸಾರ್ವಜನಿಕ ಆಸ್ತಿ ಪ್ರತಿಯೊಬ್ಬರು ಕಾಪಾಡಿಕೊಳ್ಳಬೇಕು.ನಾಶ ಮಾಡುವವರು ಶೌಚಾಲಯ ಹಾಗೂ ಯಾವುದೇ ಕಾಮಗಾರಿ ಆಗಿರಲಿ ಸಾರ್ವಜನಿಕ ತೆರಿಗೆಯಿಂದ ಅನ್ನುವುದು ಮೊದಲು ತಿಳಿದು ಕೊಳ್ಳಬೇಕು.ನೀವು ಮಾಡುವ ಕೆಲಸ ಪ್ರಜಾಪ್ರಭುತ್ವದ, ಒಂದು ರೀತಿಯಾಗಿ ಹಿನಕೃತ ಇದ್ದ ಹಾಗೆ.ಸಾರ್ವಜನಿಕ ಆಸ್ತಿ ಹಾಳಾಗದಂತೆ ನೋಡಿಕೊಳ್ಳುವುದು ನಮ್ಮ ನಮ್ಮೆಲ್ಲರ ಹೊಣೆ/ ಜವಾಬ್ದಾರಿಕೂಡಾ.