ಮೂಡಲಗಿ: ಜು,11-ತಾಲೂಕಿನ ಅವರಾಧಿ ಗ್ರಾಮದ ಹತ್ತಿರ ಹರಿಯುವ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ಮೇಲ ಬೈಕ್ ಸ್ಕಿಡ್ ಆಗಿ ನದಿಗೆ ಇಬ್ಬರು ನದಿಯಲ್ಲಿ ಕೊಚ್ಚಿಹೋಗಿರುವ ಘಟನೆ ನಡೆದಿರುವುದು.
ಬೈಕ್ ಸವಾರ ಅವರಾಧಿ ಗ್ರಾಮದ ಚನ್ನಪ್ಪ ಹರಿಜನ(39) ದುರ್ಗವ್ವ ಹರಿಜನ (32)ನದಿ ಪಾಲಾಗಿದ್ದಾರೆ ಎಂದು ತಿಳಿದುಬಂದಿದೆ.
ಬೈಕ್ ಸವಾರ ತನ್ನ ವೈಯಕ್ತಿಕ ಕೆಲಸದ ನಿಮಿತ್ತ ತನ್ನೂರಿನಿಂದ (ಅವರಾಧಿ) ಮಹಾಲಿಂಗಪೂರಕ್ಕೆ ಹೋಗುತ್ತಿದ್ದನು.ಈ ವೇಳೆ ವಾಹನಕ್ಕೆ ಕಾಯುತ್ತಿದ್ದ ಮಹಿಳೆ ಬೈಕ್ ಮೇಲೆ ಮಹಾಲಿಂಗಪೂರಕ್ಕೆ ನನ್ನನ್ನು ಕರೆದುಕೊಂಡು ಹೋಗುವಂತೆ ಕೇಳಿಕೊಂಡಳು.ಹೀಗಾಗಿ ಅವಳನ್ನು ಬೈಕ್ ಹತ್ತಿಸಿಕೊಂಡು ಹೋಗುತ್ತಿರುವ ಸಮಯದಲ್ಲಿ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಘಟಪ್ರಭಾ ನದಿಗೆ ತಡಗೋಡೆ ಇಲ್ಲದ ಕಾರಣ ಸೇತುವೆ ಮೇಲೆ ಬೈಕ್ ಸ್ಕಿಡ್ ಆಗಿ ನೀರುಪಾಲಾಗಿದ್ದಾರೆ.ವಿಷಯ ತಿಳಿದಯುತ್ತಿದ್ದಂತೆ ಸ್ಥಳಕ್ಕೆ ಕುಲಗೋಡ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಅಗ್ನಿ ಶಾಮಕದಳದ ಸಿಬ್ಬಂದಿ ಆಗಮಿಸಿ ಮುಳಗಿರುವವರನ್ನು ಹುಡುಕಾಟ ನಡೆಸಿದರೂ ಬೈಕ್ ಮಾತ್ರ ಪತ್ತೆ ಯಾಗಿದೆ.ಆದರೆ ಇಬ್ಬರು ಪತ್ತೆಯಾಗಿಲ್ಲ.ಸ್ಥಳಕ್ಕೆ ಮೂಡಲಗಿ ತಹಶಿಲ್ದಾರ ಶಿವಾನಂದ ಬಬಲಿ ಬೇಟಿ ನೀಡಿದರು. ಸೋಮವಾರ ತಡರಾತ್ರಿ ಎಸ್ ಡಿ ಆರ್ ಎಫ್ ತಂಡ ಸ್ಥಳಕ್ಕೆ ಆಗಮಿಸುತ್ತಿದ್ದು,ಮುಂಜಾನೆ ಕಾರ್ಯಾಚರಣೆ ಕೈಗೊಳ್ಳಲಿದ್ದಾರೆ ಎಂದು ಕುಲಗೋಡ ಪೊಲೀಸ್ ಠಾಣೆಯ ಪಿ ಎಸ್ ಆಯ್ ಗೋವಿಂದ ಪಾಟೀಲ ತಿಳಿಸಿದ್ದಾರೆ.
ಮಂಗಳವಾರ ಒರ್ವನ ಶವ ಹುಡುಕಾಟದ ಸಮಯದಲ್ಲಿ ಪತ್ತೆಯಾಗಿದೆ/ಸಿಕ್ಕಿರುವುದು.ಇನ್ನು ಮಹಿಳೆಯ ಶವಕ್ಕಾಗಿ ಕಾರ್ಯಚರಣೆ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿರುವುದು.

LEAVE A REPLY

Please enter your comment!
Please enter your name here