ಶಿವಮೊಗ್ಗ ಜು-9 ಪ್ರಧಾನಿ ನರೇಂದ್ರ ದಾಮೋದರದಾಸ್ ಮೋದಿ ಹಿಂದುಳಿದ ವಗ೯ಗಳ ನಾಯಕನಲ್ಲ ಅವರೊಬ್ಬ ಮುಂದುವರೆದ ಜಾತಿಯಾದ ಬನಿಯಾ ಜನಾಂಗಕ್ಕೆ ಸೇರಿದವರು ಎಂದು ಮೈಸೂರಿನ ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಪ್ರಧಾನಮಂತ್ರಿ ಮೋದಿ ಮೂಲದ ಮೇಲೆ ಬೆಳಕು ಚೆಲ್ಲಿದರು.
ಇಂದು ಬೆಳಿಗ್ಗೆ ನಗರದಲ್ಲಿ ಹಿಂದುಳಿದ ಜನ ಜಾಗೃತಿ ವೇದಿಕೆ ಸದಸ್ಯರೊಂದಿಗೆ ಸಂವಾದ ನಡೆಸಿದ ಅವರು ಮೋದಿಯವರ ಮೂಲ ತಿಳಿಯಲು ತಾವು ಗುಜರಾತ್ ರಾಜ್ಯಕ್ಕೆ ಭೇಟಿಕೊಟ್ಟು ಹಲವು ಸತ್ಯಸಂಗತಿಗಳನ್ನು ಅಧ್ಯಯನ ಮಾಡಿ ಬಂದಿರುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಂದಿನ ವಷ೯ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಕಲ ಷಡ್ಯಂತ್ರಗಳನ್ನು ನಡೆಸಿದ್ದು ದೇಶದಲ್ಲಿ ಅಧ್ಯಕ್ಷೀಯ ಮಾದರಿ ಆಡಳಿತ ಹೇರಲು ಸಜ್ಜಾಗಿದೆ ಇದರಿಂದ ಪ್ರಜೆಗಳು ಒಂದು ದೇಶ ಒಂದು ಕಾನೂನು ಒಂದು ಭಾಷೆ ಎಂಬ ಸಂಕೋಲೆಯಲ್ಲಿ ಸಿಲುಕುವ ಅಪಾಯವಿದೆ.
ಈ ಹಿನ್ನೆಲೆಯಲ್ಲಿ ಮತದಾರರು ಜಾಗೃತರಾಗಿ ಮತ ಚಲಾಯಿಸಿ ಅಪಾಯದಲ್ಲಿರುವ ನಮ್ಮ ಪ್ರಜಾಪ್ರಭುತ್ವವನ್ನು ಕಾಯ್ದುಕೊಳ್ಳುವ ಅನಿವಾರ್ಯ ಉಂಟಾಗಿದೆ ಆದುದರಿಂದ ದೇಶದ ಏಕತೆ ಸಮಗ್ರತೆಗಳನ್ನು ಉಳಿಸಿಕೊಳ್ಳಲು ಅಹಿಂದ ವಗ೯ಗಳು ಒಟ್ಟಾಗಿ ತಮ್ಮ ಅಸ್ತಿತ್ವವನ್ನು ಸಾರಿ ಹೇಳಬೇಕಾಗಿದೆ ಎಂದು ಅವರು ಕಿವಿಮಾತು ಹೇಳಿದರು.
ಹಿಂದುಳಿದ ಜನ ಜಾಗೃತಿ ವೇದಿಕೆಯ ಗೌರವ ಅಧ್ಯಕ್ಷ ಪ್ರೊ ಹೆಚ್. ರಾಚಪ್ಪ ಸಂಚಾಲಕರುಗಳಾದ ಆರ್. ಟಿ. ನಟರಾಜ್, ಬಿ. ಜನಮೇಜಿರಾವ್, ರಾಮಕೃಷ್ಣ ಉರಣಕರ್, ಕಾಯ೯ದಶಿ೯ ಮನೋಹರ್ ಕುಮಾರ್, ಸಂಘಟನಾ ಕಾಯ೯ದಶಿ೯ಗಳಾದ ಉಮೇಶ್ ಯಾದವ್, ಚನ್ನವೀರಪ್ಪ ಗಾಮನಗಟ್ಟಿ, ಪ್ರೊ. ಎಸ್.ವಿ. ಪ್ರಭಾಕರ್, ಪ್ರೊ. ಕಲ್ಲನ, ಪ್ರೊ. ಶ್ಯಾಮನಾಯ್ಕ, ಪ್ರೊ. ಪ್ರಕಾಶ್ ಜಿ. ಪರಮೇಶ್ವರಪ್ಪ, ಗಂಗಾಧರ ಪವಾರ್ ಹಾಗು ವೈ.ಹೆಚ್. ನಾಗರಾಜ್ ಇತರರು ಉಪಸ್ಥಿತರಿದ್ದರು.